ಹೆಚ್ಚುವರಿ ಟ್ರಾನ್ಸ್‌ಫಾರ್ಮರ್ ಅಳವಡಿಸುವಂತೆ ರೈತರ ಮನವಿ

KannadaprabhaNewsNetwork | Published : Feb 7, 2024 1:50 AM

ಸಾರಾಂಶ

ಲೋ ವೋಲ್ಟೇಜ್‌ನಿಂದ ರೈತರ ಜಮೀನಿನಲ್ಲಿ ಫಸಲು ಒಣಗುತ್ತಿದೆ, ಹೆಚ್ಚುವರಿ ಟ್ರಾನ್ಸ್‌ಫಾರ್ಮರ್ ಅಳವಡಿಸುವಂತೆ ಜನತಾ ದರ್ಶನ ಹಾಗೂ ಚೆಸ್ಕಾಂ ಅಧಿಕಾರಿಗಳಿಗೆ ರೈತರು ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಹನೂರುಲೋ ವೋಲ್ಟೇಜ್‌ನಿಂದ ರೈತರ ಜಮೀನಿನಲ್ಲಿ ಫಸಲು ಒಣಗುತ್ತಿದೆ, ಹೆಚ್ಚುವರಿ ಟ್ರಾನ್ಸ್‌ಫಾರ್ಮರ್ ಅಳವಡಿಸುವಂತೆ ಜನತಾ ದರ್ಶನ ಹಾಗೂ ಚೆಸ್ಕಾಂ ಅಧಿಕಾರಿಗಳಿಗೆ ರೈತರು ಮನವಿ ಮಾಡಿದ್ದಾರೆ.ತಾಲೂಕಿನ ಹುಲ್ಲೇಪುರ ಹಾಗೂ ಎಡರಳ್ಳಿ ದೊಡ್ಡಿ ರೈತರ ಜಮೀನುಗಳ ವ್ಯಾಪ್ತಿಯಲ್ಲಿ 100 ಕೆವಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಇದೆ 35ಕ್ಕೂ ಹೆಚ್ಚು ಕೊಳವೆಬಾವಿ ಹಾಗೂ ದೋಡು ಬಾವಿಗಳು ಸೇರಿದಂತೆ 40ಕ್ಕು ಹೆಚ್ಚು ತೋಟದ ಮನೆಯ ಎಲ್ಲಿ ವಾಸಿಸುವ ರೈತರು ವಿದ್ಯುತ್ ಲೋ ವೋಲ್ಟೇಜ್ ನಿಂದ ಸಮಸ್ಯೆ ಪರಿಹಾರ ನಿಧಿಸುವಂತೆ ಜಿಲ್ಲಾಧಿಕಾರಿಗೆ ಮತ್ತು ಚೆಸ್ಕಾಂ ಅಧಿಕಾರಿಗಳಿಗೆ ರೈತರು ಫಸಲು ಒಣಗುತ್ತಿರುವ ಬಗ್ಗೆ ದೂರು ಸಲ್ಲಿಸಿದ್ದಾರೆ. ಜನವರಿ ತಿಂಗಳಲ್ಲಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಧಿಕಾರಿಗಳು ಶಾಸಕರು ಜಿಲ್ಲಾಮಟ್ಟದ ಅಧಿಕಾರಿಗಳ ಜನತಾ ದರ್ಶನದ ವೇಳೆ ರೈತರು ಲೋ ವೋಲ್ಟೇಜ್‌ನಿಂದ ನೀಡುತ್ತಿರುವ ವಿದ್ಯುತ್ ಇಂದ ಸಮಸ್ಯೆ ಉಂಟಾಗಿದೆ. ಹೆಚ್ಚುವರಿ ಟ್ರಾನ್ಸ್‌ಫಾರ್ಮರ್ ಅಳವಡಿಸಿ ಕೊಡುವಂತೆ ಮನವಿ ಮಾಡಿದ್ದರು. ಜಿಲ್ಲಾಧಿಕಾರಿಗಳ ಆದೇಶಕ್ಕೂ ಇಲ್ಲಿನ ಚೆಸ್ಕಾಂ ಅಧಿಕಾರಿಗಳು ಗಮನ ಹರಿಸಿಲ್ಲ ಎಂಬುದು ರೈತರ ಆರೋಪವಾಗಿದೆ. ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಚೆಸ್ಕಾಂ ಉಪ ವಿಭಾಗದ ಇಂಜಿನಿಯರ್ ಶಂಕರ್ ಅವರಿಗೆ ರೈತರು ಮನವಿ ಪತ್ರ ಜೊತೆಗೆ ಜಮೀನಿನಲ್ಲಿ ಜೋಳದ ಫಸಲು ಒಣಗುತ್ತಿರುವ ಬಗ್ಗೆ ಫೋಟೋ ಸಮೇತ ದೂರು ಸಲ್ಲಿಸಿ ಕೂಡಲೇ ಪರಿಶೀಲಿಸಿ ಮೋಟಾರ್‌ಗಳು ಚಾಲ್ತಿಯಲ್ಲಿ ಇಲ್ಲದೆ ಇರುವುದರಿಂದ ಕೈಗೆ ಬಂದಿರುವ ಫಸಲು ನೀರು ಬಿಡಲು ಆಗದೆ ಲೋ ವೋಲ್ಟೇಜ್ ನಿಂದ ಒಣಗುತ್ತಿದೆ ಎಂದು ರೈತರು ಚೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಲಕ್ಷಾಂತರ ರು. ಸಾಲ ಮಾಡಿ ಇರುವ ಅಲ್ಪ ಸ್ವಲ್ಪ ನೀರಿನಲ್ಲಿ ಮುಸುಕಿನ ಜೋಳವನ್ನು ಎರಡು ಎಕರೆ ಹಾಕಲಾಗಿದೆ. ಲೋ ವೋಲ್ಟೇಜ್ ನಿಂದ ಮೋಟಾರೋ ಚಾಲನೆಯಾಗದೆ ಫಸಲು ಒಣಗುತ್ತಿದೆ. ಜಿಲ್ಲಾಧಿಕಾರಿಗಳ ಜನತಾದರ್ಶನ ಹಾಗೂ ಪಟ್ಟಣದ ಚೆಸ್ಕಾಂ ಇಂಜಿನಿಯರ್‌ಗೆ ದೂರು ಸಲ್ಲಿಸಲಾಗಿದೆ. ಹೆಚ್ಚುವರಿ ಟಿಸಿ ಅಳವಡಿಸಲು ಜನಪ್ರತಿನಿಧಿಗಳು ಅಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕು ಇಲ್ಲದಿದ್ದರೆ ಲಕ್ಷಾಂತರ ರು. ನಷ್ಟ ಉಂಟಾಗಲಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ ನಮ್ಮ ಪರಿಸ್ಥಿತಿ.ದೊರೆ ಯುವ ರೈತ, ಹನೂರು ಹುಲ್ಲೇಪುರ ತೋಟದ ಮನೆ

ಸರ್ಕಾರ ಚೆಸ್ಕಾಂ ಗೆ ಹೆಚ್ಚುವರಿ ಬಜೆಟ್ ನೀಡಿಲ್ಲ. ಹೀಗಾಗಿ ಹೊಸದಾಗಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅಳವಡಿಸಲು ಅನುದಾನ ಇಲ್ಲದೆ ಇರುವುದರಿಂದ ಸಮಸ್ಯೆ ಆಗಿದೆ. ರೈತರು ಹೆಚ್ಚುವರಿ ಮೋಟಾರ್‌ಗಳನ್ನು ಅಳವಡಿಸಿ ಲೋ ವೊಲ್ಟೇಜ್ ಸಮಸ್ಯೆ ಇರುವ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.

ಶಂಕರ್, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಉಪ ವಿಭಾಗ ಇಂಜಿನಿಯರ್

Share this article