ಪ್ರತಿ ಟನ್ ಕಬ್ಬಿಗೆ 3500 ಬೆಲೆ ಘೋಷಿಸಲು ಮನವಿ

KannadaprabhaNewsNetwork |  
Published : Nov 08, 2025, 01:03 AM IST
೭ಕೆಎಲ್‌ಆರ್-೩ಕಬ್ಬು ಬೆಳೆಗಾರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿ ಪ್ರತಿ ಟನ್ ಕಬ್ಬಿಗೆ ೩೫೦೦ ಬೆಲೆ ಘೋಷಿಸಬೇಕೆಂದು ರೈತ ಸಂಘದಿಂದ ಕೋಲಾರದ ಪಲ್ಲವಿ ವೃತ್ತದಲ್ಲಿ ಕಬ್ಬು ಸಮೇತ ಹೋರಾಟ ಮಾಡಿ ತಹಸೀಲ್ದಾರ್ ಮುಖಾಂತರ ಪಿಎಂಗೆ ಮನವಿಸಲ್ಲಿಸಿದರು. | Kannada Prabha

ಸಾರಾಂಶ

ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಬಲ ಸೂಚಿಸಿ 24 ಗಂಟೆಯಲ್ಲಿ ರೈತರ ನ್ಯಾಯಯುತ ಬೇಡಿಕೆ ಈಡೇರಿಸದಿದ್ದರೆ ಲಕ್ಷಾಂತರ ರೈತರರೊಂದಿ ರಾಷ್ಟ್ರೀಯ ರಾಜ್ಯ ಹಾಗೂ ಗ್ರಾಮೀಣ ರಸ್ತೆಗಳನ್ನು ಬಂಧು ಮಾಡುವ ಎಚ್ಚರಿಕೆ ಮಹಿಳಾ ಜಿಲ್ಲಾದಕ್ಷೆ ಎ.ನಳಿನಿಗೌಡ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಕೋಲಾರಕಬ್ಬು ಬೆಳೆಗಾರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿ ಪ್ರತಿ ಟನ್ ಕಬ್ಬಿಗೆ 3500 ಬೆಲೆ ಘೋಷಿಸಬೇಕೆಂದು ರೈತ ಸಂಘದಿಂದ ಪಲ್ಲವಿ ವೃತ್ತದಲ್ಲಿ ಕಬ್ಬು ಸಮೇತ ಹೋರಾಟ ಮಾಡಿ ತಹಸೀಲ್ದಾರ್ ಮುಖಾಂತರ ಪಿಎಂಗೆ ಮನವಿ ಸಲ್ಲಿಸಿದರು.ಇಡೀ ದೇಶಕ್ಕೆ ಅನ್ನಹಾಕುವ ಅನ್ನದಾತನಿಗೆ ಅನ್ಯಾಯವಾದಗ ಕೋಲಾರ ಜಿಲ್ಲೆಯ ರೈತ ಸಂಘ ಸದಾ ರೈತರ ನಿಲ್ಲುವು ಜೊತೆಗೆ ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಬಲ ಸೂಚಿಸಿ 24 ಗಂಟೆಯಲ್ಲಿ ರೈತರ ನ್ಯಾಯಯುತ ಬೇಡಿಕೆ ಈಡೇರಿಸದಿದ್ದರೆ ಲಕ್ಷಾಂತರ ರೈತರರೊಂದಿ ರಾಷ್ಟ್ರೀಯ ರಾಜ್ಯ ಹಾಗೂ ಗ್ರಾಮೀಣ ರಸ್ತೆಗಳನ್ನು ಬಂಧು ಮಾಡುವ ಎಚ್ಚರಿಕೆ ಮಹಿಳಾ ಜಿಲ್ಲಾದಕ್ಷೆ ಎ.ನಳಿನಿಗೌಡ ಎಚ್ಚರಿಸಿದರು.ರೈತರು ಕಷ್ಟಪಟ್ಟು ಬೆಳೆದ ಕಬ್ಬಿಗೆ ಪ್ರತಿ ಟನ್‌ಗೆ 3500 ಘೋಷಣೆ ಮಾಡಿ ಬೆವರಿಗೆ ತಕ್ಕ ಬೆಲೆ ನೀಡಿ ಎಂದು ಕೇಂದ್ರ ರಾಜ್ಯ ಸರ್ಕಾರವನ್ನು ಒತ್ತಾಯಿಸಿ 7 ದಿನದಿಂದ ನಡೆಸುತ್ತಿರುವ ಹೋರಾಟಕ್ಕೆ ಸ್ಪಂದಿಸದ ಸರ್ಕಾರ ರೈತವಿರೋಧಿ ಧೋರಣೆ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು. ಕಬ್ಬು ಬೆಳೆಗಾರರು ಯಾವುದೇ ಜನ ಪ್ರತಿನಿಧಿಗಳ ಹಾಗೂ ಸರ್ಕಾರದ ಆಸ್ತಿ ಕೇಳುತ್ತಿಲ್ಲ ಕಷ್ಟಪಟ್ಟು ಬೆಳೆದಿರುವ ರೈತರ ಕಬ್ಬಿನಲ್ಲಿ ಪ್ರತಿ ಟನ್‌ಗೆ ಸಕ್ಕರೆ ಕಾರ್ಖಾನೆ ಹತ್ತು ಸಾವಿರದಿಂದ ಹದಿನೈದು ಸಾವಿರದವರೆಗೆ ಲಾಭ ಪಡೆಯುತ್ತಾರೆ, ಆದರೆ ಚಳಿ ಮಳೆ ರಾತ್ರಿ ಹಗಲು ದುಡಿಯುವ ರೈತನಿಗೆ ಪ್ರತಿ ಟನ್‌ಗೆ 3500 ಘೋಷಣೆ ಮಾಡಲು ಹಿಂದೆ ಮುಂದೆ ನೋಡುತ್ತಿರುವುದು ನ್ಯಾಯವಲ್ಲ ಎಂದು ಪ್ರಶ್ನಿಸಿದರು.ಮನವಿ ಸ್ವೀಕರಿಸಿ ಮಾತನಾಡಿ ತಹಸೀಲ್ದಾರ್ ಮನವಿ ಡಿಸಿ ಮುಖಾಂತರ ಸರ್ಕಾರಕ್ಕೆ ಕಳುಹಿಸುವ ಭರವಸೆ ನೀಡಿದರು. ಜಿಲ್ಲಾಧಕ್ಷ ಈ ಕಂಬಳ್ಳಿ ಮಂಜುನಾಥ, ರಾಜ್ಯ ಮುಖಂಡ ಬಂಗವಾದಿ ನಾಗರಾಜಗೌಡ, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಕುವಣ್ಣ, ಗೋವಿಂದಪ್ಪ, ಚಂದ್ರಪ್ಪ, ವಕ್ಕಲೇರಿ ಹನುಮಯ್ಯ, ಅಪ್ಪೋಜಿರಾವ್, ಯಲ್ಲಣ್ಣ, ರಾಮಸಾಗರ ವೇಣು, ಬಾಬು, ಕೇಶವ ಸುಪ್ರೀಂ ಚಲ, ಗಂಗಾಧರ್, ಮುನಿರಾಜು, ಶೈಲಜ, ರತ್ನಮ್ಮ, ಭಾಗ್ಯಮ್ಮ, ಗೌರಮ್ಮ, ಚೌಡಮ್ಮ, ಗೀತಮ್ಮ, ವೆಂಕಟಮ್ಮ ಇದ್ದರು.

PREV

Recommended Stories

ಬ್ರಾಹ್ಮಣ ಸಮುದಾಯಕ್ಕೆ ಸೌಲಭ್ಯ ನೀಡಲು ಬದ್ಧ : ಸಚಿವ ದಿನೇಶ್‌ ಗುಂಡೂರಾವ್‌
ಬೆಂಗಳೂರು ನಗರದ 6 ಆರ್‌ಟಿಒ ಕಚೇರಿ ಮೇಲೆ ದಾಳಿ: ಹಲವು ಅಕ್ರಮ ಪತ್ತೆ