ಹಾಲಿನ ಪ್ಯಾಕೆಟ್‌ ನಂತೆ ಮೊಟ್ಟೆ ವಿತರಿಸಲು ಮನವಿ

KannadaprabhaNewsNetwork |  
Published : Nov 21, 2024, 01:01 AM IST
ಪಿ ಎಂ ಫೊ಼ಷಣ್‌ ಅಭಿಯಾನದಡಿಯಲ್ಲಿ ಸರ್ಕಾರಿ ಕಿರಿಯ, ಹಿರಿಯ ಹಾಗೂ ಪ್ರೌಡಶಾಲೆಗಳಲ್ಲಿನ ಮಕ್ಕಳಿಗೆ ವಾರದ ಎಲ್ಲಾ ದಿನಗಳಲ್ಲೂ ಪೂರಕ ಪೌಷ್ಠಿಕ ಆಹಾರವಾಗಿ ನೀಡಲಾಗುತ್ತಿರುವ ಮೊಟ್ಟೆ ಬೆಲೆಯನ್ನು ಸರ್ಕಾರ 5 ರೂಗೆ ನಿಗಧಿ ಮಾಡಿದೆ ಆದರೆ ಮಾರುಕಟ್ಟೆಯಲ್ಲಿ ಅದರ ಬೆಲೆ 6-7 ರೂ ಇದ್ದು ಇದರಿಂದ ಶಾಲಾ ಆಡಳಿತದ ಮೇಲೆ ಆರ್ಥಿಕ ಹೊರೆ ಬೀಳುತ್ತಿದ್ದು ಇದನ್ನು ತಪ್ಪಿಸುವಂತೆ ಹಾಗೂ ರಾಗಿ ಮಾಲ್ಟ್‌ , ಹಾಲಿನ ಪ್ಯಾಕೆಟ್‌ ರೀತಿಯಲ್ಲಿ ಮೊಟ್ಟೆಯನ್ನು ವಿತರಿಸಲು ಏಜೆನ್ಸಿಯವರಿಗೆ ನೇಮಿಸುವ ಮೂಲಕ ಮುಖ್ಯ ಶಿಕ್ಷಕರುಗಳು  ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡುವಂತೆ ಶಾಸಕ ಬಿಜಿ ಗೋವಿಂದಪ್ಪ ಅವರಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

Request to distribute eggs like milk packets

ಹೊಸದುರ್ಗ: ಪಿ ಎಂ ಪೋಷಣ್‌ ಅಭಿಯಾನದಡಿಯಲ್ಲಿ ಸರ್ಕಾರಿ ಕಿರಿಯ, ಹಿರಿಯ ಹಾಗೂ ಪ್ರೌಡಶಾಲೆಗಳಲ್ಲಿನ ಮಕ್ಕಳಿಗೆ ವಾರದ ಎಲ್ಲಾ ದಿನಗಳಲ್ಲೂ ಪೂರಕ ಪೌಷ್ಠಿಕ ಆಹಾರವಾಗಿ ನೀಡಲಾಗುತ್ತಿರುವ ಮೊಟ್ಟೆ ಬೆಲೆಯನ್ನು ಸರ್ಕಾರ 5 ರು.ಗೆ ನಿಗದಿ ಮಾಡಿದೆ. ಆದರೆ, ಮಾರುಕಟ್ಟೆಯಲ್ಲಿ ಅದರ ಬೆಲೆ 6-7 ರು. ಇದ್ದು ಇದರಿಂದ ಶಾಲಾ ಆಡಳಿತದ ಮೇಲೆ ಆರ್ಥಿಕ ಹೊರೆ ಬೀಳುತ್ತಿದೆ. ಇದನ್ನು ತಪ್ಪಿಸುವಂತೆ ಹಾಗೂ ರಾಗಿ ಮಾಲ್ಟ್‌ , ಹಾಲಿನ ಪ್ಯಾಕೆಟ್‌ ರೀತಿಯಲ್ಲಿ ಮೊಟ್ಟೆಯನ್ನು ವಿತರಿಸಲು ಏಜೆನ್ಸಿಯವರಿಗೆ ನೇಮಿಸುವ ಮೂಲಕ ಮುಖ್ಯ ಶಿಕ್ಷಕರು, ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡುವಂತೆ ಶಾಸಕ ಬಿಜಿ ಗೋವಿಂದಪ್ಪ ಅವರಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು. ಈ ವೇಳೆ ಬಿಇಒ ಸಯ್ಯದ್‌ ಮೋಸೀನ್‌, ಅಧ್ಯಕ್ಷ ಮಂಜುನಾಥ್‌, ಕಾರ್ಯಾಧ್ಯಕ್ಷ ಯೋಗರಾಜ್‌, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನಪ್ಪ ಸೇರಿದಂತೆ ಸಂಘದ ಪಧಾಧಿಕಾರಿಗಳು ಹಾಗೂ ಮುಖ್ಯ ಶಿಕ್ಷಕರುಗಳು ಹಾಜರಿದ್ದರು.

--

( ಫೋಟೋ 20ಎಚ್‌ಎಸ್‌ಡಿ1)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು : ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ-ಎಲ್ಲೆಲ್ಲಿ ?
ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌