ಶಾಸಕ ಜಿ.ಎಚ್.ಶ್ರೀನಿವಾಸ್ ಗೆ ಸಚಿವ ಸ್ಥಾನ ನೀಡಲು ಮನವಿ

KannadaprabhaNewsNetwork |  
Published : Jun 01, 2026, 01:15 AM IST
       ಶಾಸಕ ಜಿ.ಹೆಚ್.ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ           ನೀಡಲು ತರೀಕೆರೆ ಬ್ಲಾಕ್ ಕಾಂಗ್ರೆಸ್ ಸಮಿತಿ ಮನವಿ | Kannada Prabha

ಸಾರಾಂಶ

ತರೀಕೆರೆಚಿಕ್ಕಮಗಳೂರು ಜಿಲ್ಲೆ ಇಂದಿರಾಗಾಂಧಿ ಅವರಿಗೆ ರಾಜಕೀಯವಾಗಿ ಪುನರ್ಜನ್ಮ ನೀಡಿದ ಜಿಲ್ಲೆ, ಸಿ.ಆರ್.ಸಗೀರ್ ಅಹಮದ್, ಡಿ.ಬಿ.ಚಂದ್ರೇಗೌಡ, ಡಾ.ಎಚ್.ಆರ್.ರಾಜು, ಮೋಟಮ್ಮ ಮಂತ್ರಿಗಳಾದ ನಂತರ ನಮ್ಮ ಜಿಲ್ಲೆಗೆ ಸಚಿವ ಸ್ಥಾನ ಈವರೆವಿಗೂ ದೊರಕಿಲ್ಲ. ಜಿಲ್ಲೆಯಲ್ಲಿ 2 ಬಾರಿ ಶಾಸಕರಾಗಿ ಅನೇಕ ಅಭಿವೃದ್ಧಿ ಕಾರ್ಯ ನಿರ್ವಹಿಸುತ್ತಿರುವ ಉತ್ತಮ ಅಡಳಿತಗಾರ ತರೀಕೆರೆ ಕ್ಷೇತ್ರ ಶಾಸಕ ಜಿ.ಎಚ್.ಶ್ರೀನಿವಾಸ್ ಅವರಿಗೆ ಈ ಬಾರಿ ಮಂತ್ರಿ ಸ್ಥಾನ ನೀಡುವಂತೆ ಬ್ಲಾಕ್ ಕಾಂಗ್ರೆಸ್ ನಿಂದ ಮನವಿ ಮಾಡುವುದಾಗಿ ಅಧ್ಯಕ ಎಚ್.ಯು.ಫಾರೂಕ್ ಹೇಳಿದ್ದಾರೆ.

ಬ್ಲಾಕ್ ಕಾಂಗ್ರೆಸ್ ಅಧ್ಯಕ ಎಚ್.ಯು.ಫಾರೂಕ್

ಕನ್ನಡಪ್ರಭ ವಾರ್ತೆ ತರೀಕೆರೆ

ಚಿಕ್ಕಮಗಳೂರು ಜಿಲ್ಲೆ ಇಂದಿರಾಗಾಂಧಿ ಅವರಿಗೆ ರಾಜಕೀಯವಾಗಿ ಪುನರ್ಜನ್ಮ ನೀಡಿದ ಜಿಲ್ಲೆ, ಸಿ.ಆರ್.ಸಗೀರ್ ಅಹಮದ್, ಡಿ.ಬಿ.ಚಂದ್ರೇಗೌಡ, ಡಾ.ಎಚ್.ಆರ್.ರಾಜು, ಮೋಟಮ್ಮ ಮಂತ್ರಿಗಳಾದ ನಂತರ ನಮ್ಮ ಜಿಲ್ಲೆಗೆ ಸಚಿವ ಸ್ಥಾನ ಈವರೆವಿಗೂ ದೊರಕಿಲ್ಲ. ಜಿಲ್ಲೆಯಲ್ಲಿ 2 ಬಾರಿ ಶಾಸಕರಾಗಿ ಅನೇಕ ಅಭಿವೃದ್ಧಿ ಕಾರ್ಯ ನಿರ್ವಹಿಸುತ್ತಿರುವ ಉತ್ತಮ ಅಡಳಿತಗಾರ ತರೀಕೆರೆ ಕ್ಷೇತ್ರ ಶಾಸಕ ಜಿ.ಎಚ್.ಶ್ರೀನಿವಾಸ್ ಅವರಿಗೆ ಈ ಬಾರಿ ಮಂತ್ರಿ ಸ್ಥಾನ ನೀಡುವಂತೆ ಬ್ಲಾಕ್ ಕಾಂಗ್ರೆಸ್ ನಿಂದ ಮನವಿ ಮಾಡುವುದಾಗಿ ಅಧ್ಯಕ ಎಚ್.ಯು.ಫಾರೂಕ್ ಹೇಳಿದ್ದಾರೆ.ಭಾನುವಾರ ತರೀಕೆರೆ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಎಸ್.ಸಿದ್ದರಾಮಯ್ಯ 2013 ರಿಂದ 18 ರವರೆಗೆ ಮತ್ತು 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 137 ಸ್ಥಾನ ಗಳಿಸಿದ್ದು ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ಉತ್ತಮ ಅಡಳಿತ ನೀಡಿದ್ದಾರೆ, ಇದೀಗ ಹೈಕಮಾಂಡ್ ಸಂದೇಶ ಸ್ವೀಕರಿಸಿ ಸಿ.ಎಂ.ಸ್ಥಾನಕ್ಕೆ ರಾಜೀನಾಮೆ ನೀಡಿದ ಪ್ರಥಮ ವ್ಯಕ್ತಿ ಎಸ್. ಸಿದ್ದರಾಮಯ್ಯ ಜನನಾಯಕರಾಗಿದ್ದಾರೆ. ತಾಲೂಕಿನ ಜನತೆ ಪರವಾಗಿ ಎಸ್. ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಮತ್ತು ಮುಂದಿನ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದಿಸುವುದಾಗಿ ಹೇಳಿದರು.ಶಾಸಕ ಜಿ.ಎಚ್.ಶ್ರೀನಿವಾಸ್ ಸೌಮ್ಯ ವ್ಯಕ್ತಿ. ಅವರಿಗೆ ಮಂತ್ರಿ ಸ್ಥಾನ ಕೊಡಬೇಕು ಎಂದು ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ, ವೇಣುಗೋಪಾಲ್, ಎಐಸಿಸಿ ಅದ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಸ್.ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಅವರಲ್ಲಿ ಮನವಿ ಮಾಡುವುದಾಗಿ ಹೇಳಿದರು.

ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ ಮಾತನಾಡಿ ಎಸ್.ಸಿದ್ದರಾಮಯ್ಯ ದೇಶ ಕಂಡ ಉತ್ತಮ ಜನನಾಯಕ. ತ್ಯಾಗಮಯಿ, ಅಹಿಂದ ನಾಯಕರಾಗಿ ಹಿಂದುಳಿದವರ ಮತ್ತು ಬಡವರ ಪರವಾಗಿ ಸುದೀರ್ಘ 47 ವರ್ಷಗಳ ಕಾಲ ರಾಜಕೀಯ ಸಾಮಾಜಿಕ ಸೇವೆ ನಿರ್ವಹಿಸಿದ್ದಾರೆ. ಹೈಕಮಾಂಡ್ ಸೂಚನೆಯಂತೆ ನಡೆದುಕೊಂಡವರು ಎಂದರು.

ಶಾಸಕ ಜಿ.ಎಚ್.ಶ್ರೀನಿವಾಸ್ ವಿದ್ಯಾರ್ಥಿ ದಿಸೆಯಿಂದಲೇ ಬಡವರ ಪರವಾಗಿ ಹೋರಾಟ ಮಾಡಿದ್ದಾರೆ. 2 ಬಾರಿ ಶಾಸಕರಾಗಿದ್ದಾರೆ. ಕ್ಷೇತ್ರದಲ್ಲಿ ನೀರಾವರಿಗೆ ಹೆಚ್ಚು ಒತ್ತು ಕೊಟ್ಟು ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸಿದ್ದಾರೆ. ಉತ್ತಮ ಅಡಳಿತಗಾರರಾದ ಶಾಸಕ ಜಿ.ಎಚ್.ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ಕೊಡಬೇಕು ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ಕಿಸಾನ್ ಸೆಲ್ ಅಧ್ಯಕ್ಷ ಗಿರೀಶ್ ಇದ್ದರು.31ಕೆಟಿಆರ್.ಕೆ.4_ ತರೀಕೆರೆಯಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಏರ್ಪಾಡಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಟ್.ಯು.ಫಾರೂಕ್ ಅವರು ಮಾತನಾಡಿದರು. ಟಿ.ಎಸ್.ಪ್ರಕಾಶ್ ವರ್ಮ, ಗಿರೀಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರಂಗೆ ಡಿಸಿಎಂ, ಮಹದೇವಪ್ಪಗೆ ಸಚಿವ ಸ್ಥಾನಕ್ಕೆ ಒತ್ತಾಯ
ಡಿ.ಟಿ.ಶ್ರೀನಿವಾಸಗೆ ಸಂಪುಟದಲ್ಲಿ ಸ್ಥಾನಕ್ಕೆ ಒತ್ತಾಯ