ಲಕ್ಷ್ಮೇಶ್ವರ: ಪಟ್ಟಣದಲ್ಲಿ ಮೃತಪಟ್ಟವರನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗುವ ಶವ ವಾಹನದ ಬಾಡಿಗೆಯು ಬಡವರಿಗೆ ನಿಲುಕುವಂತಿರಬೇಕು ಎಂದು ಪಟ್ಟಣದ ಸಾರ್ವಜನಿಕರು ಪುರಸಭೆಯ ಮ್ಯಾನೇಜರ್ ಮಂಜುಳಾ ಹೂಗಾರ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಈ ವೇಳೆ ಸುರೇಶ ಹಟ್ಟಿ, ಸೋಮಣ್ಣ ಹತ್ತಿಕಾಳ, ಸದಾನಂದ ನಂದೆಣ್ಣವರ, ಎಂ.ಆರ್. ಪಾಟೀಲ, ಪ್ರಕಾಶ ಕೊಂಚಿಗೇರಿಮಠ, ಟಾಕಪ್ಪ ಸಾತಪೂತೆ, ಆನಂದ ಅಮರಶೆಟ್ಟಿ, ವೈ.ಎಸ್. ಜಗಳೂರ ಸೇರಿದಂತೆ ಅನೇಕರು ಇದ್ದರು. ಅಶ್ಲೀಲ ವಿಡಿಯೋ ಹರಿಬಿಟ್ಟ ಆರೋಪಿ ಬಂಧನ
ಶಿರಹಟ್ಟಿ: ಸಾಮಾಜಿಕ ಜಾಲತಾಣಗಳ ಮೂಲಕ ಅಶ್ಲೀಲ ವಿಡಿಯೋಗಳನ್ನು ಹರಿಬಿಟ್ಟ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಮಾಬೂಸಾಬ ದಿವಾನಸಾಬ ಢಾಲಾಯತ ಎಂಬಾತನೇ ಪೊಲೀಸರು ಬಂಧಿಸಿರುವ ಆರೋಪಿ. ಈತ ಮಹಿಳೆಯರ ಗೌರವಕ್ಕೆ ಧಕ್ಕೆ ತರುವಂಥ ಅಶ್ಲೀಲ ದೃಶ್ಯಾವಳಿಗಳನ್ನು ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ತರುವ ಕೃತ್ಯ ಎಸಗಿದ್ದ. ಈ ಹಿನ್ನೆಲೆ ಆರೋಪಿ ಮಾಬೂಸಾಬ ದಿವಾನಸಾಬ ಢಾಲಾಯತನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ಮೇಲೆ ಪ್ರಕರಣ ದಾಖಲಿಸಿ ಪಿಎಸ್‌ಐ ಈರಪ್ಪ ರಿತ್ತಿ ತನಿಖೆ ಕೈಗೊಂಡಿದ್ದಾರೆ.
ಗದಗ: ಕೇಂದ್ರ ಸರ್ಕಾರದ ಖಾಸಗೀಕರಣ ನೀತಿ ಖಂಡಿಸಿ ಹಾಗೂ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರದ ವಿಭಾಗೀಯ ಅಂಚೆ ಕಚೇರಿ ಎದುರು ಸಾಂಕೇತಿಕವಾಗಿ ಭಾರತೀಯ ಅಂಚೆ ನೌಕರರ ಸಂಘದ ಸದಸ್ಯರು ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವ ಮೂಲಕ ಪ್ರತಿಭಟನೆ ನಡೆಸಿದರು.ಭಾರತೀಯ ಅಂಚೆ ನೌಕರರ ಸಂಘದ ಕಾರ್ಯದರ್ಶಿ ಡಿ.ಜಿ. ಮ್ಯಾಗೇರಿ ಮಾತನಾಡಿ, ಅಂಚೆ ಇಲಾಖೆಯ ನೌಕರರಿಗೆ ಅವೈಜ್ಞಾನಿಕ ಗುರಿ ನಿಗದಿಗೊಳಿಸಬಾರದು. ಮಿತಿ ಮೀರಿದ ಕೆಲಸದ ಒತ್ತಡದಿಂದಾಗಿ ನೌಕರರು ಮಾನಸಿಕ ಶೋಷಣೆ ಅನುಭವಿಸುವಂತಾಗಿದೆ. ಗ್ರಾಮೀಣ ಡಾಕ್ ಸೇವಕರಿಗೆ ಕನಿಷ್ಠ ವೇತನದ ಜತೆಗೆ ರಜೆಯ ಸೌಲಭ್ಯಗಳನ್ನು ನೀಡಬೇಕು. ಖಾಲಿ ಇರುವ ಹುದ್ದೆಗಳನ್ನು ಶೀಘ್ರ ಭರ್ತಿಗೊಳಿಸಿ ಅಂಚೆ ಇಲಾಖೆಯಲ್ಲಿರುವ ಕಾರ್ಯದೊತ್ತಡ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.ಈ ವೇಳೆ ಗದಗ ವಿಭಾಗೀಯ ಅಂಚೆ ಅಧೀಕ್ಷಕ ಎಸ್.ಎಸ್. ಶಿರಹಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು. ಎಸ್.ಎಚ್. ಹರಿಜನ, ಎಂ.ಟಿ. ಕರಿಗಾರ, ವಿ.ಎಂ. ಅಂಗಡಿ, ಭೀಮಣ್ಣ ದೊಡ್ಡಮನಿ, ಶರಣಪ್ಪ ಬೇನಾಳ, ಬಸವರಾಜ ಮೊರಬದ, ಮನೋಹರ ಕಡಿಯವರ, ವೆಂಕಟೇಶ ಆಕಳವಾಡಿ, ಹಜರತ್ ಅಲಿ, ಅಮರೇಶ ರಾಠೋಡ, ರಾಘವೇಂದ್ರ ಕಮ್ಮಾರ, ಶಿವಕುಮಾರ ಸುಳ್ಳದ, ಮಂಜುನಾಥ ಟಿ., ನೀಲಮ್ಮ ದಿಬ್ಬದಮನಿ, ವಾಣಿಬಾಯಿ ಮಾಂಡ್ರೆ, ವಿದ್ಯಾ ಗದಗ, ಸೌಮ್ಯ ಹುಯಿಲಗೋಳ, ಶ್ರೀದೇವಿ ಕಲಕೇರಿ, ಗೋಪಾಲ ಲಮಾಣಿ ಇದ್ದರು.