ಕುಷ್ಟಗಿ: ಕುಷ್ಟಗಿಯಿಂದ ಬೆಂಗಳೂರಿಗೆ ರೈಲು ಓಡಿಸುವಂತೆ ಮುಂದಾಗುವಂತೆ ಒತ್ತಾಯಿಸಿ ಬಾಗಲಕೋಟೆಯಲ್ಲಿ ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣಗೆ ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಕುಷ್ಟಗಿ, ಯಲಬುರ್ಗಾ, ಕುಕನೂರು ಜನತೆ ವ್ಯಾಪಾರ ವಹಿವಾಟು, ಶೈಕ್ಷಣಿಕ ಉದ್ದೇಶಗಳಿಗಾಗಿ ಸರ್ಕಾರಿ ಕೆಲಸಗಳಿಗಾಗಿ ರಾಜಧಾನಿ ಬೆಂಗಳೂರಿಗೆ ಸಂಚರಿಸಲು ರಸ್ತೆ ಸಾರಿಗೆ ಅವಲಂಬಿಸಿದ್ದು, ಹೆಚ್ಚುವರಿ ಹೊರೆಯಾಗುತ್ತಿದೆ ಆದ್ದರಿಂದ ಹೊಸದಾಗಿ ನಿರ್ಮಿಸಿದ ರೇಲ್ವೇ ಮಾರ್ಗ ಇನ್ನೂ ಲಾಭದಾಯಕ ಮಾಡಿಕೊಳ್ಳಲು ಮತ್ತು ಜನತೆಗೆ ಬೆಂಗಳೂರಿನಿಂದ ಹೊಸಪೇಟೆವರೆಗೆ ಬರುವ ರೈಲುಗಳನ್ನು ಕುಷ್ಟಗಿವರೆಗೆ ಓಡಿಸಲು ಮುಂದಾಗುವ ಮೂಲಕ ಈ ಭಾಗದ ಜನರಿಗೆ ಅನೂಕೂಲ ಮಾಡಬೇಕು ಎಂದು ಹೇಳಿದರು.
ಭರವಸೆ ನೀಡಿದ ಸಚಿವರು: ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯ ಮನವಿ ಸ್ವೀಕರಿಸಿದ ರಾಜ್ಯ ರೈಲ್ವೆ ಸಚಿವ ವಿ ಸೋಮಣ್ಣ ಮಾತನಾಡಿ, ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ರೈಲ್ವೇಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಇನ್ನೂ ಸಾಕಷ್ಟು ಕೆಲಸ ಮಾಡುವದು ಬಾಕಿ ಇದ್ದು, ಆದ್ಯತೆ ಮೇರೆಗೆ ಕುಷ್ಟಗಿ ಬೆಂಗಳೂರು ರೈಲು ಬಿಡಲಾಗುವದು ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಶರಣು ತಳ್ಳಿಕೇರಿ, ಮಹಾಂತಯ್ಯ ಅರಳೆಲಿಮಠ, ಬಾಬು ಘೋರ್ಪಡೆ, ಮಂಜುನಾಥ ಮಹಾಲಿಂಗಪುರ, ವಿರೇಶ ಕರಡಿ ಸೇರಿದಂತೆ ಅನೇಕರು ಇದ್ದರು.