ಮಲಪ್ರಭಾ ಬಲದಂಡೆ ಕಾಲುವೆಗೆ ನೀರು ಪೂರೈಸಲು ಮನವಿ

KannadaprabhaNewsNetwork |  
Published : Sep 01, 2026, 02:45 AM IST
ಮಲಪ್ರಭಾ ಕಾಲುವೆಗೆ ನೀರು ಪೂರೈಕೆ ಮಾಡಬೇಕೆಂದು ರೈತರು ಮನವಿ ನೀಡಿದರು. | Kannada Prabha

ಸಾರಾಂಶ

ತಾಲೂಕಿನ ಕೊನೆ ಗ್ರಾಮವಾದ ಕೊಣ್ಣೂರು ಗ್ರಾಮಕ್ಕೆ ಈ ಹಿಂದೆ ಕಾಲುವೆಗೆ ಬಿಟ್ಟಿರುವ ನೀರು ಮುಟ್ಟಿಲ್ಲ. ಆದ್ದರಿಂದ ಸದ್ಯ ಗ್ರಾಮಸ್ಥರು, ಜನ, ಜಾನುವಾರಗಳು ಕುಡಿಯುವ ನೀರಿನ ಹಾಹಾಕಾರ ಅನುಭವಿಸುತ್ತಿದ್ದಾರೆ.

ನರಗುಂದ: ತಾಲೂಕಿನಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಕುಡಿಯಲು ನೀರಿನ ಹಾಹಾಕಾರವಾಗಿದೆ. ಆದ್ದರಿಂದ ಬಲದಂಡೆ ಮಲಪ್ರಭಾ ಕಾಲುವೆಗೆ ನೀರು ಪೂರೈಕೆ ಮಾಡಬೇಕೆಂದು ತಾಲೂಕು ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ಉಮೇಶ ಮರ್ಚಪ್ಪನವರ ಆಗ್ರಹಿಸಿದರು.

ಸೋಮವಾರ ತಾಲೂಕಿನ ಕೊಣ್ಣೂರು ಗ್ರಾಮದಿಂದ 2 ಟ್ರ್ಯಾಕ್ಟರ್ ಮೂಲಕ ನೂರಾರು ರೈತರು ಪಟ್ಟಣದ ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿ ನಂತರ ಮಾತನಾಡಿ, ತಾಲೂಕಿನ ಕೊನೆ ಗ್ರಾಮವಾದ ಕೊಣ್ಣೂರು ಗ್ರಾಮಕ್ಕೆ ಈ ಹಿಂದೆ ಕಾಲುವೆಗೆ ಬಿಟ್ಟಿರುವ ನೀರು ಮುಟ್ಟಿಲ್ಲ. ಆದ್ದರಿಂದ ಸದ್ಯ ಗ್ರಾಮಸ್ಥರು, ಜನ, ಜಾನುವಾರಗಳು ಕುಡಿಯುವ ನೀರಿನ ಹಾಹಾಕಾರ ಅನುಭವಿಸುತ್ತಿದ್ದಾರೆ. ಆದ್ದರಿಂದ 5 ದಿನದೊಳಗೆ ಮಲಪ್ರಭಾ ಜಲಾಶಯದಿಂದ ಬಲದಂಡೆ ಕಾಲುವೆಗೆ ನೀರು ಪೂರೈಕೆ ಮಾಡದಿದ್ದರೆ ಉಗ್ರ ಹೋರಾಟ ಮಾಡುತ್ತೇವೆಂದು ಎಚ್ಚರಿಕೆ ನೀಡಿದರು.

ಕರ್ನಾಟಕ ರೈತಸೇನೆ ಅಧ್ಯಕ್ಷ ಶಂಕ್ರಣ್ಣ ಅಂಬಲಿ ಮಾತನಾಡಿ, ಬಹುದಿನಗಳಿಂದ ಕಾಲುವೆ ದುರಸ್ತಿ ಮತ್ತು ಗೇಟುಗಳು ರಿಪೇರಿಯಿಲ್ಲದೆ ಜಲಾಶಯದಿಂದ ಕಾಲುವೆ ನೀರು ಬಿಟ್ಟರೆ ಕೊಣ್ಣೂರು ಗ್ರಾಮಕ್ಕೆ ಬೇಗ ತಲುಪುವದಿಲ್ಲ. ಹಾಗಾಗಿ ಈ ಬಾರಿ ಬಲದಂಡೆ ಕಾಲುವೆಗೆ ನೀರು ಪೂರೈಕೆಯಾದರೂ ಗ್ರಾಮಕ್ಕೆ ನೀರು ಮುಟ್ಟಿಲ್ಲ. ಕುಡಿಯುವ ನೀರಿಗಾಗಿ ಕಾಲುವೆಗೆ ನೀರು ಪೂರೈಕೆ ಮಾಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಉಪತಹಸೀಲ್ದಾರ್ ಪರಶುರಾಮ ಕಲಾಲ ರೈತರ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಬಸವರಾಜ ಸಾಬಳೆ, ಚನ್ನು ನಂದಿ, ಬಾಪೂಗೌಡ ಪಾಟೀಲ, ಬಿ.ಬಿ. ಶೆಟ್ಟರ, ವೀರಣ್ಣ ಸೊಪ್ಪಿನ, ಎಸ್.ಎಸ್. ಪಾಟೀಲ, ಮುತ್ತು ಕಳಸಣ್ಣವರ, ಬಸವಣ್ಣಪ್ಪ ಯಲಿಗಾರ, ರೆಹಮಾನಸಾಬ ಅಲ್ಲಿಬಾಯಿ, ಮಹೇಶ ಪಾಟೀಲ, ಬಸರಾಜ ಶೆಲ್ಲಿಕೇರಿ, ಹನುಮಂತಗೌಡ ಭೂಸಣ್ಣವರ, ತುಳಸಿಗೇರಿ ತೋಟದ, ಶೇಕರಗೌಡ ಪಾಟೀಲ, ಬಸವರಾಜ ಕರಿಯಪ್ಪನವರ ಇದ್ದರು. ಮೀನುಗಾರಿಕೆಗಾಗಿ ಮರಿ ಪಡೆಯಲು ಅರ್ಜಿ

ಗದಗ: ಮೀನುಗಾರಿಕೆ ಇಲಾಖೆ ವತಿಯಿಂದ 2026- 27ನೇ ಸಾಲಿಗೆ ಒಳನಾಡು ಮೀನುಗಾರಿಕೆ ಅಭಿವೃದ್ಧಿಗೆ ಸಹಾಯ ಯೋಜನೆಯಡಿ ಕೃಷಿ, ಬಾವಿ ಹೊಂಡಗಳನ್ನು ಹೊಂದಿದ ಕೃಷಿಕರಿಗೆ ಉಚಿತವಾಗಿ 500 ಬಿತ್ತನೆ ಮೀನು ಮರಿಗಳನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆ. 11 ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರು ಗದಗ(ಮೊ. 8073649362) ಹಾಗೂ ಮೀನುಗಾರಿಕೆ ಸಹಾಯಕ ನಿರ್ದೇಶಕರು ಮುಂಡರಗಿ(ಮೊ. 8095792530) ಅವರನ್ನು ಕಚೇರಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನಕಗಿರಿಯಲ್ಲಿ ವಿವಾದಿತ ಸಮಾಧಿಗೆ ಮಂಟಪ ಇಟ್ಟು ಪೂಜೆ
ಗಂಗಾವತಿಯಲ್ಲಿ ಮತ್ತೆ ಮೊಬೈಲ್ ಟವರ್ ಏರಿದ ಭಗ್ನಪ್ರೇಮಿ