ಕುಮಟಾ: ಆಕಸ್ಮಿಕವಾಗಿ ಬಾವಿಯಲ್ಲಿ ಬಿದ್ದಿದ್ದ ಚಿರತೆಯನ್ನು ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸಿ ರಕ್ಷಿಸಿದ ಘಟನೆ ತಾಲೂಕಿನ ಕೂಜಳ್ಳಿ ಸನಿಹದ ಮಲ್ಲಾಪುರದ ಮನೆಯೊಂದರಲ್ಲಿ ಭಾನುವಾರ ನಡೆದಿದೆ.
ಸುಮಾರು ಒಂದೂವರೆ ವರ್ಷದ ಗಂಡು ಚಿರತೆಯಾಗಿದ್ದು ದೂರದ ಅರಣ್ಯಕ್ಕೆ ಸ್ಥಳಾಂತರಿಸಲಾಗಿದೆ. ಕಾರ್ಯಾಚರಣೆಯಲ್ಲಿ ಆರ್‌ಎಫ್‌ಒ ಪ್ರವೀಣಕುಮಾರ ನಾಯಕ, ಡಿಆರ್‌ಎಫ್‌ಒ ರಾಘವೇಂದ್ರ ನಾಯ್ಕ, ಸಿಬ್ಬಂದಿ ಸಂಗಮೇಶ, ಚಿದಂಬರ ಗೌಡ, ರವಿ, ಶಂಕರ, ಕನಕಪ್ಪ ಸದಾನಂದ, ಮಹೇಶ, ಸಂತೋಷ ಇತರರು ಇದ್ದರು. ಮುರುಡೇಶ್ವರ ಲಾಡ್ಜನಲ್ಲಿ ತಾಳಿಸರ, ನಗದು ಕಳುವು
ಭಟ್ಕಳ: ಮುರುಡೇಶ್ವರದ ವಸತಿಗೃಹವೊಂದರಲ್ಲಿ ತಂಗಿದ್ದ ಗ್ರಾಪಂ ಅಧ್ಯಕ್ಷರೊಬ್ಬರ ಪತ್ನಿಯ ಬಂಗಾರದ ತಾಳಿಸರ ಮತ್ತು ₹5 ಸಾವಿರ ನಗದು ಕದ್ದೊಯ್ದ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಈ ಕುರಿತು ಧಾರವಾಡದ ಕಲಘಟಕಿ ತಾಲೂಕಿನ ಲಿಂಗನಕೊಪ್ಪ ಗ್ರಾಪಂ ಅಧ್ಯಕ್ಷ ಬಸವರಾಜ ಮಾದೇವಪ್ಪ ನೇಸರ್ಗಿ ಅವರು ಠಾಣೆಯಲ್ಲಿ ನೀಡಿದ ದೂರಿನಲ್ಲಿ ಮುರುಡೇಶ್ವರದ ವಸತಿಗೃಹವೊಂದರಲ್ಲಿ ಸೆ. 13ರ ತಡರಾತ್ರಿ ತಂಗಿದಾಗ ಪತ್ನಿ ಮಾಧುರಿ ಕೊರಳಲ್ಲಿದ್ದ 55 ಗ್ರಾಂ ತೂಕದ ಅಂದಾಜು ₹2.20 ಲಕ್ಷ ಮೌಲ್ಯದ ತಾಳಿಸರವನ್ನು ಕಳುವು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಮುರುಡೇಶ್ವರ ಠಾಣೆಯ ಸಬ್ ಇನ್ಸಪೆಕ್ಟರ್ ಹಣಮಂತ ಬಿರಾದಾರ್ ತನಿಖೆ ಕೈಗೊಂಡಿದ್ದಾರೆ.