ಕನ್ನಡಪ್ರಭ ವಾರ್ತೆ ಕೆರೂರ
ಉಗಲವಾಟ ಗ್ರಾಮದಲ್ಲಿ ನಡೆದ ದಲಿತ ಅರ್ಜುನ ಮಾದರನ ಮೇಲೆ ನಡೆದ ಹಲ್ಲೆ ಕುರಿತು ಭಾನುವಾರ ಜರುಗಿದ ನಾಗರಿಕರ ಸಭೆಯಲ್ಲಿ ಮಾತನಾಡಿದ ಅವರು, ಕೆಲವರು ಮಾಡಿದ ತಪ್ಪಿಗೆ ಊರಿಗೆ ಊರೇ ಶಿಕ್ಷೆ ಅನುಭವಿಸುವಂತಾಗಬಾರದು. ನಾನು ಅಧಿಕಾರಿಗಳಿಗೆ ಸೂಕ್ತಕ್ರಮ ಕೈಕೊಂಡು ಗ್ರಾಮದಲ್ಲಿ ಮತ್ತೆ ಶಾಂತಿ ನೆಲೆಸುವಂತೆ ನೋಡಿಕೊಳ್ಳಬೇಕೆಂದು ತಿಳಿಸಿದ್ದೇನೆ. ಗ್ರಾಮಸ್ಥರು ಸಹ ಅಧಿಕಾರಿಗಳಿಗೆ ಸಹಕರಿಸಿ ಮೊದಲಿನಂತೆ ಒಗ್ಗಟ್ಟಿನಿಂದ ಸಹಬಾಳ್ವೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಡಿಸಿ ಕೆ.ಎಂ.ಜಾನಕಿ ಮಾತನಾಡಿ, ಕಾನೂನಿನ ದೃಷ್ಟಿಯಲ್ಲಿ ಯಾರೂ ಶ್ರೇಷ್ಠರಲ್ಲ ಯಾರೂ ಕನಿಷ್ಠರಲ್ಲ ಎಲ್ಲರೂ ಒಂದೇ ಎಂದು ಹೇಳುತ್ತ, ದಯವಿಟ್ಟು ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಎಲ್ಲ ಸಮಾಜದವರು ಸಮಾನತೆಯಿಂದ ಬದುಕಿದರೇ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ಗ್ರಾಮದ ಹಿರಿ ಕಿರಿಯರೆಲ್ಲರೂ ಒಂದಾಗಿ ಸೌಹಾರ್ದತೆಯಿಂದ ಬದುಕಬೇಕು. ತಪ್ಪಿತಸ್ತರನ್ನು ಕಾನೂನು ಶಿಕ್ಷಿಸುತ್ತದೆ, ಗಡಿಬಿಡಿ ಬೇಡ ಎಂದು ತಿಳಿಸಿದರು.ಎಸ್ಪಿ ಅಮರನಾಥ ರೆಡ್ಡಿ ಮಾತನಾಡಿ, ಗ್ರಾಮದಲ್ಲಿ ನಡೆದ ದುರ್ಘಟನೆಯನ್ನು ಉಸ್ತುವಾರಿ ಸಚಿವರು ಶಾಸಕರು ಜಿಲ್ಲಾಡಳಿತ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಈ ಘಟನೆಯಲ್ಲಿ 20 ಜನರ ಮೇಲೆ ಎಫ್‌ಐಆರ್ ಆಗಿದ್ದು, 6 ಜನರನ್ನು ಬಂಧಿಸಲಾಗಿದೆ. ದಲಿತ ಹಾಗೂ ಹಿಂದುಳಿದ ವರ್ಗದ ಜನರ ಮೇಲೆ ನಡೆಯುವ ದೌರ್ಜನ್ಯವನ್ನು ಸರ್ಕಾರ ಸಹಿಸುವುದಿಲ್ಲ. ಎಲ್ಲ ಸಮಾಜದವರು ಸಮಾನತೆಯಿಂದ ಬದುಕುವಂತಾಗಬೇಕೆಂಬುವುದು ಸರ್ಕಾರದ ಧ್ಯೇಯವಾಗಿದ್ದು, ಕಾನೂನು ಶಿಷ್ಠರನ್ನು ರಕ್ಷಿಸುತ್ತದೆ. ದುಷ್ಟರನ್ನು ಶಿಕ್ಷಿಸುತ್ತದೆ. ಈ ಘಟನೆ ಕುರಿತು ತನಿಖೆ ನಡೆಯುತ್ತಿದೆ. ಆತಂಕ ಪಡುವ ಕಾರಣವಿಲ್ಲ. ತಪ್ಪಿತಸ್ತರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಲ್ಲರೂ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಸೌಹಾರ್ದ ಬದುಕಿಗೆ ಮುಂದಾಗಬೇಕು ಎಂದು ಸೂಚಿಸಿದರು.ಸಭೆಯಲ್ಲಿ ಉಪವಿಭಾಗಾಧಿಕಾರಿ ಸಂತೋಷ ಜಗಲಾಸ್ಕರ, ತಹಸೀಲ್ದಾರ್ ಮಧುರಾಜ ಮೂಡಲಗಿ, ಸಿಪಿಐ ಕರಿಯಪ್ಪ ಬನ್ನೆ, ಕೆರೂರ ಪೊಲೀಸ್ ಸಿಬ್ಬಂದಿ ಹಾಗೂ ಪ್ರಮುಖರಾದ ಬಸವರಾಜ ಬ್ಯಾಹಟ್ಟಿ, ಪರಶುರಾಮ ನೀಲನಾಯಕ, ಪೀರಪ್ಪ ಮ್ಯಾಗೇರಿ, ವೆಂಕಣ್ಣ ಹೊಸಮನಿ ಸೇರಿದಂತೆ ಅನೇಕ ಇದ್ದರು.