ಕನ್ನಡಪ್ರಭ ವಾರ್ತೆ ದಾವಣಗೆರೆ ನಗರದ ಪಿ.ಬಿ. ರಸ್ತೆಯಲ್ಲಿರುವ ಜಿ.ಎಂ. ವಿಶ್ವವಿದ್ಯಾಲಯದಲ್ಲಿ ಜೂ.5ರಂದು ನೂತನ ಜಿಎಂಯು ರೀಸರ್ಚ್ ಸೆಂಟರ್, ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಅಗ್ರಿಕಲ್ಚರಲ್ ಅಂಡ್ ಫುಡ್ ಬಯೋಟೆಕ್ನಾಲಜಿ, ಇಂಟೆಲ್ ಉನ್ನತಿ ಡೇಟಾ ಸೆಂಟ್ರಿಕ್ ಲ್ಯಾಬ್ ಹಾಗೂ ಟ್ಯಾಲಿ ಎಜುಕೇಶನ್ ಸೆಂಟರ್ ಉದ್ಘಾಟನಾ ಸಮಾರಂಭವನ್ನು ವಿವಿಯ ನೂತನ ಶೈಕ್ಷಣಿಕ ಕಟ್ಟಡದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿ.ವಿ. ಸಂಶೋಧನಾ ಮತ್ತು ನಾವೀನ್ಯತೆ ಡೀನ್ ಡಾ. ಕೆ.ಎನ್.ಭರತ್ ತಿಳಿಸಿದರು.
ಇಆರ್‌ಪಿ ನಿರ್ದೇಶಕ ಕೀರ್ತಿ ಪ್ರಸಾದ್ ಮಾತನಾಡಿ, ಜಿ.ಎಂ. ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಜಿ.ಎಂ. ಲಿಂಗರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕುಲಪತಿಗಳಾದ ಡಾ. ಎಸ್.ಆರ್. ಶಂಕಪಾಲ್, ಸಹ ಉಪ ಕುಲಪತಿಗಳಾದ ಡಾ. ಎಂ.ವೇಣುಗೋಪಾಲ ರಾವ್, ಕುಲಸಚಿವ ಡಾ. ಬಿ.ಎಸ್. ಸುನಿಲ್ ಕುಮಾರ್ ಉಪಸ್ಥಿತರಿರುವರು ಎಂದು ಹೇಳಿದರು.
ವಿವಿ ಸಂಶೋಧನೆ, ನಾವೀನ್ಯತೆ, ಕೌಶಲ್ಯಾಭಿವೃದ್ಧಿ ಹಾಗೂ ಕೈಗಾರಿಕಾ ಸಹಭಾಗಿತ್ವವನ್ನು ಉತ್ತೇಜಿಸುವ ಉದ್ದೇಶದಿಂದ ಈ ಕೇಂದ್ರಗಳನ್ನು ಆರಂಭಿಸಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಉದ್ಯೋಗೋದ್ಯಮ ಕೌಶಲ್ಯಗಳ ತರಬೇತಿ ದೊರೆಯಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಬಯೋಟೆಕ್ನಾಲಜಿ ವಿಭಾಗದ ಮುಖ್ಯಸ್ಥ ಡಾ. ಕೆ.ಕೆ.ಪ್ರಕಾಶ್, ವಾಣಿಜ್ಯ ನಿರ್ವಹಣಾ ವಿಭಾಗದ ನಿರ್ದೇಶಕರಾದ ಡಾ. ಎಚ್.ಎಸ್. ಶ್ವೇತಾ, ಮಾರ್ಕೆಟಿಂಗ್ ಅಂಡ್ ಪ್ರಮೋಷನ್ ವಿಭಾಗದ ಡೀನ್ ಡಾ. ಟಿ.ಎಂ. ವೀರಗಂಗಾಧರ ಸ್ವಾಮಿ, ವಸಂತಕುಮಾರ್ ಇದ್ದರು.
-3ಕೆಡಿವಿಜಿ32: ದಾವಣಗೆರೆಯ ಜಿಎಂ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ, ಕೌಶಲ್ಯಾಭಿವೃದ್ಧಿ ಕೇಂದ್ರಗಳ ಉದ್ಘಾಟನೆ ಸಮಾರಂಭ ಆಯೋಜಿಸಿರುವ ಕುರಿತು ಡಾ. ಕೆ.ಎನ್.ಭರತ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.