ಪಠ್ಯಕ್ರಮದ ಜೊತೆಗೆ ಸಂಶೋಧನೆ ಅವಶ್ಯಕ: ಮಲ್ಲೇಶಕುಮಾರ್

KannadaprabhaNewsNetwork |  
Published : Apr 09, 2026, 02:45 AM IST
ಸಂಶೋಧನೆ ಮತ್ತು ಅಭಿವೃದ್ಧಿ ಕೋಶವನ್ನು ಧಾರವಾಡ ಕೃಷಿ ವಿವಿ ಕೆ-ಎಬಿಐ ಇನೋವೇಷನ್ ಮ್ಯಾನೇಜ್ಮೆಂಟ್ ಮ್ಯಾನೇಜರ್ ಮಲ್ಲೇಶಕುಮಾರ್ ಕೆ.ಎಸ್. ಉದ್ಘಾಟಿಸಿದರು. | Kannada Prabha

ಸಾರಾಂಶ

ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಜೊತೆಗೆ ಸಂಶೋಧನೆ ಅವಶ್ಯಕವಾಗಿದ್ದು, ಸರ್ಕಾರ ವಿವಿಧ ಸಂಶೋಧನೆಗೆ ಅನುದಾನ ನೀಡುತ್ತಿದೆ.

ಹಳಿಯಾಳ ಕೆ.ಎಲ್.ಎಸ್ ಪದವಿ ಕಾಲೇಜಿನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೋಶ ಉದ್ಘಾಟನೆಕನ್ನಡಪ್ರಭ ವಾರ್ತೆ ಹಳಿಯಾಳ

ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಜೊತೆಗೆ ಸಂಶೋಧನೆ ಅವಶ್ಯಕವಾಗಿದ್ದು, ಸರ್ಕಾರ ವಿವಿಧ ಸಂಶೋಧನೆಗೆ ಅನುದಾನ ನೀಡುತ್ತಿದೆ. ಈ ಸಂಶೋಧನಾ ಕೋಶದ ಸಹಕಾರದೊಂದಿಗೆ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಪೇಟೆಂಟ್ ಹಾಗೂ ಸಂಶೋಧನೆ ಕೈಗೊಳ್ಳಬೇಕು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯ ಕೆ-ಎಬಿಐ ಇನೋವೇಷನ್ ಮ್ಯಾನೇಜ್ಮೆಂಟ್ ಮ್ಯಾನೇಜರ್ ಮಲ್ಲೇಶಕುಮಾರ್ ಕೆ.ಎಸ್. ಹೇಳಿದರು.ಬುಧವಾರ ಪಟ್ಟಣದ ಕೆಎಲ್ಎಸ್ ಸಂಸ್ಥೆಯ ಪದವಿ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ನೂತನವಾಗಿ ಆರಂಭಗೊಳ್ಳುತ್ತಿರುವ ಸಂಶೋಧನೆ ಮತ್ತು ಅಭಿವೃದ್ಧಿ ಕೋಶ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಶ್ರೀನಿವಾಸ ಪ್ರಭು ಶಿಕ್ಷಣ ಮತ್ತು ಅಧ್ಯಯನದಲ್ಲಿ ಸಂಶೋಧನೆಯ ಮಹತ್ವದ ಕುರಿತು ಮಾತನಾಡಿದರು. ಕಾಲೇಜಿನ ಶೈಕ್ಷಣಿಕ ಸಂಯೋಜಕಿ ದೀಪಾ ನಾಯ್ಕ್, ಸಂಶೋಧನೆ ಮತ್ತು ಅಭಿವೃದ್ಧಿ ಕೋಶ ಸಂಯೋಜಕರಾದ ಶಾಂತಾರಾಮ ಚಿಬ್ಬುಲಕರ, ಕೆಎಲ್ಎಸ್ ವಿಡಿಐಟಿ ಪ್ರಾಧ್ಯಾಪಕರಾದ ಡಾ. ಸಮೀರ ಗಲಗಲಿ, ಡಾ. ವೆಂಕಟೇಶ್ ಎಸ್., ಡಾ. ಪೂರ್ಣಿಮಾ ರಾಯ್ಕರ್, ಡಾ. ಮಹೇಂದ್ರ ದೀಕ್ಷಿತ್ ಇದ್ದರು.ಪ್ರಾಧ್ಯಾಪಕರಾದ ಸಂಗೀತಾ ಪ್ರಭು, ಮಿನಾಜ್ ಶೇಖ್, ಪ್ರಗತಿ ಲಕ್ಕುಂಡಿ, ಅನುಷಾ ನಾಯ್ಕವಾಡ್, ಹನುಮಂತಿ ಪವಾರ್, ಪೂಜಾ ಪೇಡ್ನೆಕರ್, ಸಿಬ್ಬಂದಿಗಳಾದ ಲೀಲಾ ಅಂಬಿಗ, ಶೀತಲ್ ತೋರಸ್ಕರ್, ನಾಗೇಂದ್ರ ಖಂಡೇಕರ, ಅಲ್ತಾಪ್ ನರಗುಂದ ಹಾಗೂ ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರೊ. ಮೆಹ್ತಾಬ್ ಶೇಖ್ ಹಾಗೂ ಪ್ರೊ. ವರುಣ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್
ರಚನಾತ್ಮಕ ಸಮಾಜ ಕಟ್ಟಲು ಜನಪದ ಪಾತ್ರ ಹಿರಿದು: ಡಾ. ಸಿದ್ದರಾಮ ಸ್ವಾಮೀಜಿ