ಸಿಎಂ ಪದವಿಗೆ ರಾಜಿನಾಮೆ ನೀಡಿ, ತನಿಖೆ ಎದುರಿಸಿ: ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್

KannadaprabhaNewsNetwork |  
Published : Sep 26, 2024, 10:36 AM IST
25-ಎಂಎಸ್ಕೆ-1 | Kannada Prabha

ಸಾರಾಂಶ

ಸಾರ್ವಜನಿಕ ಬದುಕಿನಲ್ಲಿ ಆರೋಪಗಳು ಬಂದಾಗ ನಿರಾಕರಿಸುವುದು, ಸ್ವಪ್ರತಿಷ್ಠೆ ಮಾಡಿಕೊಳ್ಳುವದಕ್ಕಿಂತ ಕೋರ್ಟ್‌ ತೀರ್ಪನ್ನು ಜನಪ್ರತಿನಿಧಿಗಳಾದವರು ಗೌರವಿಸಿ ಪಾಲಿಸಬೇಕು

ಕನ್ನಡಪ್ರಭ ವಾರ್ತೆ ಮಸ್ಕಿ

ಸಿಎಂ ಸಿದ್ದರಾಮಯ್ಯ ಹಿರಿಯ ರಾಜಕಾರಣಿಯಾಗಿದ್ದು ಹೈಕೊರ್ಟ್ ಆದೇಶಕ್ಕೆ ಮನ್ನಣೆ ನೀಡಿ ಮುಖ್ಯಮಂತ್ರಿ ಪದವಿಗೆ ರಾಜಿನಾಮೆ ನೀಡಿ ತನಿಖೆ ಎದುರಿಸಲಿ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಿಂದ ಹಳೇ ಬಸ್ ನಿಲ್ದಾಣದ ಬಳಿ ಇರುವ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿವರೆಗೆ ಬುಧವಾರ ಬಿಜೆಪಿ ಕಾರ್ಯಕರ್ತರು ನಡೆಸಿದ ಪ್ರತಿಭಟನಾ ಬೈಕ್ ರ್‍ಯಾಲಿಯಲ್ಲಿ ಭಾಗವಹಿಸಿ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಮೈಸೂರಿನ ಮುಡಾ ಹಗರಣ ಈಗಗಾಲೇ ಜಗಜ್ಜಾಹೀರವಾಗಿದೆ. ಎಸ್ಟಿ ನಿಗಮದ ಹಗರಣದಲ್ಲಿ ಸಚಿವ ನಾಗೇಂದ್ರರ ರಾಜಿನಾಮೆ ಪಡೆದಿರುವ ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಡುವ ಮೂಲಕ ಮೇಲ್ಪಂಕ್ತಿ ಹಾಕಲಿ. ಸಾರ್ವಜನಿಕ ಬದುಕಿನಲ್ಲಿ ಆರೋಪಗಳು ಬಂದಾಗ ನಿರಾಕರಿಸುವುದು, ಸ್ವಪ್ರತಿಷ್ಠೆ ಮಾಡಿಕೊಳ್ಳುವದಕ್ಕಿಂತ ಕೋರ್ಟ್‌ ತೀರ್ಪನ್ನು ಜನಪ್ರತಿನಿಧಿಗಳಾದವರು ಗೌರವಿಸಿ ಪಾಲಿಸಬೇಕು ಎಂದರು. ಬಿಜೆಪಿ ಮಂಡಲ ಅಧ್ಯಕ್ಷ ಶರಣಬಸವ ಸೊಪ್ಪಿಮಠ ಮತಾನಾಡಿ, ಮುಖ್ಯಮಂತ್ರಿಗಳು ಕುರ್ಚಿಗೆ ಅಂಟಿಕೊಳ್ಳುವುದು ಶೋಭೆ ತರುವುದಿಲ್ಲ. ನಾನು ತಪ್ಪು ಮಾಡಿಲ್ಲ ಎನ್ನುವ ಮುಖ್ಯಮಂತ್ರಿಗಳು ತನಿಖೆಯಿಂದ ಮುಕ್ತರಾಗುವವರೆಗೂ ಮುಖ್ಯಮಂತ್ರಿ ಸ್ಥಾನ ತ್ಯಜಿಸಲಿ ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಅಪ್ಪಾಜಿಗೌಡ ಪಾಟೀಲ, ಡಾ.ಬಿ.ಎಚ್.ದಿವಟರ್, ಮಲ್ಲಪ್ಪ ಅಂಕುಶದೊಡ್ಡಿ, ಅಮರೇಶ ಅಡವಿಬಾವಿ ತಾಂಡ, ಶಿವಪುತ್ರಪ್ಪ ಅರಳಹಳ್ಳಿ, ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಪುರಸಭೆ ಸದಸ್ಯರಾದ ಮಲ್ಲಿಕಾರ್ಜುನ ಬ್ಯಾಳಿ, ಚೇತನ ಪಾಟೀಲ, ವೀರೇಶ ಕಮತರ್, ಸುಗಣ್ಣ ಬಾಳೆಕಾಯಿ, ಜಿ.ವೆಂಕಟೇಶ ಹಾಗೂ ಇತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ