ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.19ರ ಬೆಲಿಗ್ಗೆ 8.30ಕ್ಕೆ ತಾಲೂಕಿನ ಆಲೂರು ಗ್ರಾಮದಿಂದ ದೇಣಿಗೆ ಸಂಗ್ರಹ ಕಾರ್ಯಕ್ಕೆ ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ ಚಾಲನೆ ನೀಡಲಿದ್ದು, ಗ್ರಾಮದ ತಾಯಂದಿರು ಪೂರ್ಣಕುಂಭ ಸ್ವಾಗತ ಕೋರಲಿದ್ದು, ನಂತರ ವಿವಿಧ ಗ್ರಾಮಗಳಿಗೆ ದೇಣಿಗೆ ಸಂಗ್ರಹ ತಂಡ ಸಾಗಲಿದೆ ಎಂದರು.
ಬೆಂಗಳೂರು ವಿಭಾಗೀಯ ಮಟ್ಟದಲ್ಲಿ ಎಲ್ಲಾ ಜಿಲ್ಲೆಗಳ ತಾಲೂಕುಗಳನ್ನು ಒಳಗೊಂಡಂತೆ ಒಂದು ಸಾವಿರ ಹಳ್ಳಿಗಳಿಗೆ ಭೇಟಿ ನೀಡುವ ಐತಿಹಾಸಿಕ ಕಾರ್ಯವನ್ನು ಶ್ರೀಗಳು ಕೈಗೊಂಡಿದ್ದಾರೆ. ಸಮಾಜ ಬಾಂಧವರು ಇರುವಂತ ಗ್ರಾಮಗಳಿಗೆ ಭೇಟಿ ನೀಡುವ ಮೂಲಕ ಶ್ರೀಮಠ ಹಾಗೂ ಸಮಾಜದ ಅಭಿವೃದ್ಧಿ ಕುರಿತಂತೆ ಮುಖಂಡರೊಂದಿಗೆ ಚರ್ಚೆ, ಸಂವಾದ, ಸಲಹೆ, ಸಹಕಾರ, ಪ್ರಗತಿ ಬಗ್ಗೆ ಮಾತನಾಡುವರು ಎಂದು ಅವರು ಹೇಳಿದರು.ಕನಕ ಪೀಠ ಶಾಖಾ ಮಠವಾದ ಹೊಸದುರ್ಗದ ಕನಕ ಧಾಮದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಮಾಲೋಚನೆ, ಆರ್ಥಿಕ ಸಂಪನ್ಮೂಲ ಕ್ರೋಢೀ ಕರಣ ಇತ್ಯಾದಿ ವಿಚಾರದ ಬಗ್ಗೆ ಸಮಾಜದ ಮುಖಂಡರು, ಸಮಾಜ ಬಾಂಧವರೊಂದಿಗೆ ಚರ್ಚಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಶ್ರೀಮಠವು ಈಗಾಗಲೇ 60 ಎಕರೆ ಜಮೀನು ಹೊಂದಿದ್ದು, 30 ಎಕರೆ ಪ್ರದೇಶದಲ್ಲಿ ವಿಶ್ವದಲ್ಲೇ ಅತೀ ಎತ್ತರವಾದ ಏಕಶಿಲಾ ಕನಕ ಪುತ್ಥಳಿ ಪ್ರತಿಷ್ಠಾಪಿಸಲು ಸಿದ್ಥತೆ ನಡೆಸ ಲಾಗಿದೆ ಎಂದು ಅವರು ತಿಳಿಸಿದರು.
ಕುರುಬ ಸಮಾಜದ ಮುಖಂಡರಾದ ಬಿ.ಎಂ.ಸತೀಶ ಕೊಳೇನಹಳ್ಳಿ, ಮಾಯಕೊಂಡ ಎಸ್.ವೆಂಕಟೇಶ, ಬಿ.ಟಿ.ಹನುಮಂತಪ್ಪ, ಎನ್.ಜೆ.ನಿಂಗಪ್ಪ, ಎಸ್.ಎಸ್.ಗಿರೀಶ, ಕೆ.ಪರಶುರಾಮ, ಮುದಹದಡಿ ದಿಳ್ಯಪ್ಪ, ಎಚ್.ಜಿ.ಸಂಗಪ್ಪ ಪೈಲ್ವಾನ್, ಟಿ.ಬಿ.ಮಹಾಂತೇಶ ಇತರರು ಇದ್ದರು.
.