ಡಂಬಳ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನಿರ್ಮಾಣ ಹಂತದಲ್ಲಿರುವ ಗ್ರಿಡ್ ಕಾಮಗಾರಿಗೆ ರೈತರು ಮತ್ತು ಕಂಪನಿಯವರು ಮಾಡಿಕೊಂಡಿರುವ ಒಪ್ಪಂದದಂತೆ ಪರಿಹಾರ ನೀಡದ ಹಿನ್ನೆಲೆ ಗುರುವಾರ ಸಹ ಪ್ರತಿಭಟನೆ ಮುಂದುವರಿದಿತ್ತು. ಆದರೆ ಇಲಾಖೆ ಅಧಿಕಾರಿಗಳು ಒಪ್ಪಿಗೆ ಪತ್ರದ ಮೂಲಕ ಪರಿಹಾರ ನೀಡಲು ಒಂದು ವಾರ ಕಾಲವಕಾಶ ಪಡೆದ ಹಿನ್ನೆಲೆ ರೈತರ ಹೋರಾಟ ಒಂದು ವಾರದವರಿಗೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಇಲಾಖೆಯ ಅಧಿಕಾರಿಗಳು ಒಪ್ಪಿಗೆ ಪತ್ರದ ಮೂಲಕ ಕರಾರು ಮಾಡಿ ಒಂದು ವಾರದಲ್ಲಿ ರೈತರಿಗೆ ಪರಿಹಾರ ನೀಡುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ. ಒಪ್ಪಿಗೆ ಪತ್ರ ನೀಡಿದ್ದರಿಂದ ಪರಿಹಾರ ಒಂದು ವಾರದಲ್ಲಿ ಬರುತ್ತದೆ ಎನ್ನುವ ಆಶಾಭಾವನೆ ನಮಗೂ ಇದೆ. ಒಂದು ವಾರದ ನಂತರ ರೈತರ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯದೆ ಹೋದರೆ ಮತ್ತೆ ನೂರಾರು ಸಂಖ್ಯೆ ರೈತರ ಕಾಮಗಾರಿ ಬಂದ್ ಮಾಡಿ ಉಗ್ರ ಹೋರಾಟ ಮಾಡುತ್ತೇವೆ ಎನ್ನುತ್ತಾರೆ ರೈತರಾದ ನಾಗಪ್ಪ ಚುಂಗಿನ ಮತ್ತು ಪ್ರಭು ಕೊರ್ಲಹಳ್ಳಿ.
ರೈತರಾದ ಶೇಖಪ್ಪ ಯಾವಗಲ್, ನಾಗಪ್ಪ ಚುಂಗಿನ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಶಿವಾನಂದ ಇಟಗಿ, ಮುತ್ತಪ್ಪ ಗೋಡಿ, ಪ್ರಭು ಕೊರ್ಲಹಳ್ಳಿ, ಹನುಮಪ್ಪ ಚುಂಗಿನ, ಶರಣಪ್ಪ ಕೊರ್ಲಹಳ್ಳಿ, ಮಂಜಪ್ಪ ಹಾರೂಗೇರಿ, ಮುತ್ತಪ್ಪ ಕೊರ್ಲಹಳ್ಳಿ, ದೇವೆಂದ್ರಗೌಡ ಪಾಟೀಲ, ಬಸವರಾಜ ಆನಿಯವರು, ಶಿವಶಂಕರಪ್ಪ ಮುದಿಯಜ್ಜನವರ, ಸಿದ್ದಪ್ಪ ಮಟ್ಟಿ, ಬಸವರಾಜ ಸೂಗಿ, ಶೇಖಪ್ಪ ಮಟ್ಟಿ, ಚಿದಾನಂದ ಪಾಟೀಲ, ಮಲ್ಲಪ್ಪ ಮಲ್ಲಪ್ಪನವರ, ಹನುಮಪ್ಪ ಪೂಜಾರ, ರಾಮಣ್ಣ ರೋಣದ, ಮಹಾಂತೇಶ ಚುಂಗಿನ, ಹಾಲಪ್ಪ ಚುಂಗಿನ, ಶಿವಕುಮಾರ ಲಕ್ಕುಂಡಿ, ಕನಕಪ್ಪ ನಾಡಗೌಡ್ರ, ಹೊನ್ನಪ್ಪ ಪೂಜಾರ ಸೇರಿದಂತೆ ಮೇವುಂಡಿ ಹಾಗೂ ಹೈತಾಪುರ ಗ್ರಾಮದ ರೈತರು ಭಾಗವಹಿಸಿದ್ದರು.