ಜಾತಿ ಗಣತಿಯಲ್ಲಿ ಉಂಟಾಗುತ್ತಿರುವ ತಾಂತ್ರಿಕ ತೊಂದರೆ ಪರಿಹರಿಸಿ

KannadaprabhaNewsNetwork |  
Published : Sep 25, 2025, 01:01 AM IST
ಮ | Kannada Prabha

ಸಾರಾಂಶ

ಕಳೆದೆರಡು ರಾಜ್ಯ ಸರ್ಕಾರ ನಡೆಸುತ್ತಿರುವ ದಿನಗಳಿಂದ ಜಾತಿ ಗಣತಿ ಪ್ರಾರಂಭವಾಗಿದ್ದು ತಾಂತ್ರಿಕ ತೊಂದರೆಗಳಿಂದ ನಿರೀಕ್ಷಿತ ಗುರಿ ಸಾಧನೆ ಆಗುತ್ತಿಲ್ಲ. ಹೀಗಾಗಿ ಶಿಕ್ಷಕರು ಹೈರಾಣಾಗಿದ್ದು, ಕೂಡಲೇ ಆಗುತ್ತಿರುವ ಸಮಸ್ಯೆಯನ್ನು ಪರಿಹರಿಸುವಂತೆ ಆಗ್ರಹ.

ಬ್ಯಾಡಗಿ: ಜಾತಿಗಣತಿಯಲ್ಲಿ ಉಂಟಾಗುತ್ತಿರುವ ತಾಂತ್ರಿಕ ತೊಂದರೆ ಪರಿಹರಿಸುವಂತೆ ಆಗ್ರಹಿಸಿ ನೂರಾರು ಶಿಕ್ಷಕರು ಬಿಸಿಎಂ ಇಲಾಖೆ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.

ಕಳೆದೆರಡು ರಾಜ್ಯ ಸರ್ಕಾರ ನಡೆಸುತ್ತಿರುವ ದಿನಗಳಿಂದ ಜಾತಿ ಗಣತಿ ಪ್ರಾರಂಭವಾಗಿದ್ದು ತಾಂತ್ರಿಕ ತೊಂದರೆಗಳಿಂದ ನಿರೀಕ್ಷಿತ ಗುರಿ ಸಾಧನೆ ಆಗುತ್ತಿಲ್ಲ. ಹೀಗಾಗಿ ಶಿಕ್ಷಕರು ಹೈರಾಣಾಗಿದ್ದು, ಕೂಡಲೇ ಆಗುತ್ತಿರುವ ಸಮಸ್ಯೆಯನ್ನು ಪರಿಹರಿಸುವಂತೆ ಆಗ್ರಹಿಸಿದರು. ಬೆಳಗ್ಗೆ 11 ಗಂಟೆಗೆ ಸುಮಾರಿಗೆ ಬಿಸಿಎಂ ಕಚೇರಿಗೆ ತೆರಳಿದ ಶಿಕ್ಷಕರು ಏಕಾಏಕಿ ಘೋಷಣೆ ಕೂಗಲು ಆರಂಭಿಸಿದರು.

ಈ ವೇಳೆ ಮಾತನಾಡಿದ ಶಿಕ್ಷಕ ಬಿ. ಸುಭಾಷ, ಜಾತಿ ಗಣತಿ ಮಾಡಲು ಸಿದ್ಧರಿದ್ದೇವೆ ಆದರೆ ಇಲ್ಲಿ ಆಗುತ್ತಿರುವ ತಾಂತ್ರಿಕ ಸಮಸ್ಯೆಗಳು ನಮ್ಮನ್ನು ಕೆಲಸದಿಂದ ಹಿಂದೇಟು ಹಾಕುವಂತೆ ಮಾಡಿದೆ. ಗಣತಿದಾರನಿಗೆ ಒಂದು ಊರಿನಲ್ಲಿ ಒಂದು ಮನೆ, ಮತ್ತೊಂದು ಊರಿನಲ್ಲಿ ಒಂದು ಮನೆ ಗಣತಿಗೆ ನೀಡಲಾಗಿದೆ, ಇದರಿಂದ ದಿನಕ್ಕೆ ಒಂದು ಮನೆ ಗಣತಿ ನಡೆಸಲು ಸಾಧ್ಯವಾಗುತ್ತಿಲ್ಲ ಇದನ್ನು ಸರಿಪಡಿಸಿ ಎಂದು ಆಗ್ರಹಿಸಿದರು.

ಸರ್ವರ ಸಮಸ್ಯೆಗೆ ಪರಿಹಾರ ಬೇಕಿದೆ: ಜಿ.ಬಿ. ಬೂದಿಹಾಳ ಮಾತನಾಡಿ, ಜಾತಿಗಣತಿ ಆರಂಭಿಸಿ 2 ದಿನಗಳಾಗಿಲ್ಲ ಆದರೆ, ಗಣತಿಗೆ ಸರ್ವರ್ ಸಮಸ್ಯೆಯಾಗುತ್ತಿದೆ, ಇದಲ್ಲದೇ ಓಟಿಪಿ ಸಮಸ್ಯೆ ಸಹ ಹೆಚ್ಚು ಕಾಡುತ್ತಿದೆ, ಅಲ್ಲದೇ ಜಿಯೋ ಟ್ಯಾಗ್ ಅಂಟಿಸಿದ ಮನೆ ಸಮೀಕ್ಷೆ ಲೋಕೆಶನ್ ಮೂಲಕ ಸರ್ಚ್ ಮಾಡಲು ಶಿಕ್ಷಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದರು.

75 ಮನೆ ನಿಗದಿಗೊಳಿಸಿ: ಮಹೇಶ ನಾಯಕ ಮಾತನಾಡಿ, ಒಬ್ಬ ಗಣತಿದಾರನಿಗೆ 150 ಮನೆಗಳನ್ನ ಗಣತಿ ಮಾಡಲು ನೀಡಲಾಗಿದೆ ಇದರಿಂದ ಸಾಕಷ್ಟು ತೊಂದರೆಗಳಾಗುತ್ತಿದ್ದು ಒಬ್ಬರಿಗೆ 75 ಮನೆಗಳನ್ನು ನಿಗದಿ ಮಾಡಿದಲ್ಲಿ ನಿಗದಿತ ಸಮಯದಲ್ಲಿ ಕೆಲಸ ಮುಗಿಸಲು ಸಾಧ್ಯವಾಗಲಿದೆ ಎಂದರು.

ಕರೆ ಸ್ವೀಕರಿಸಿದ ಅಧಿಕಾರಿಗಳು: ಸುರೇಶ ಪೂಜಾರ ಮಾತನಾಡಿ, ಗಣತಿಯಲ್ಲಿ ಊಟಾಗುತ್ತಿರುವ ಸಮಸ್ಯೆಗಳ ಕುರಿತಂತೆ ಏನೇ ಮಾಹಿತಿ ಬೇಕಿದ್ದರೂ ಸಹ ಬಿಸಿಎಂ ಅಧಿಕಾರಿಗಳಿಗೆ ಕರೆ ಮಾಡುತ್ತೇವೆ. ಆದರೆ, ಇಲ್ಲಿ ಒಬ್ಬ ತಾಂತ್ರಿಕ ತಜ್ಞರಿಲ್ಲ ಸಮಸ್ಯೆ ಪರಿಹಾರಕ್ಕೆ ಕರೆ ಮಾಡಿದರೆ ಅಧಿಕಾರಿಗಳು ಕರೆ ಸ್ವೀಕರಿಸಲ್ಲ ಆದ್ದರಿಂದ ನಮ್ಮ ಬೇಡಿಕೆ ಈಡೇರುವ ವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಬಳಿಕ ಗಣತಿದಾರರು ಬಿಸಿಎಂ ಇಲಾಖೆಯಿಂದ ತಹಸೀಲ್ದಾರ್ ಕಚೇರಿಯ ವರೆಗೂ ಪ್ರತಿಭಟನೆ ನಡೆಸಿ ಅಲ್ಲಿಯೂ ಸಹ ಧರಣಿ ನಡೆಸಿದರು.

ತಹಸೀಲ್ದಾರ್ ಚಂದ್ರಶೇಖರ ನಾಯ್ಕ, ತಾಪಂ ಟಿಇಓ ಮಲ್ಲಿಕಾರ್ಜುನ ಹಾಗೂ ಬಿಸಿಎಂ ಇಲಾಖೆ ಪ್ರಸಾದಿಮಠ ಗಣತಿದಾರರ ಮನವೊಲಿಸಲು ಮುಂದಾದರೂ ಯಾವುದೇ ಪ್ರಯೋಜವಾಗಲಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮಾಹಿತಿ ಅಧಿಕಾರಿ ಡಾ. ಸುಬ್ರಾಯ ನಾಯ್ಕ ಬಿಸಿಎಂ ಜಿಲ್ಲಾಧಿಕಾರಿ ಅವರನ್ನು ಸ್ವತಃ ಕರೆದುಕೊಂಡು ಪಟ್ಟಣದ ಹಲವು ವಾರ್ಡ್‌ಗಳಿಗೆ ತೆರಳಿ ವಾಸ್ತವ ಸಮಸ್ಯೆ ಅನಾವರಣ ಮಾಡಿದ ಶಿಕ್ಷಕರು ಇಷ್ಟೆಲ್ಲ ಸಮಸ್ಯೆಗಳನ್ನು ಇಟ್ಟು ಯಾವಾಗ ಗಣತಿ ಮುಕ್ತಾಯ ಮಾಡಬೇಕು ನೀವೆ ಹೇಳಿ ಎಂದರು.

ಈ ವೇಳೆ ಶಿಕ್ಷಕರಾದ ಎಂ.ವೈ. ಸಾಳುಂಕೆ, ಕೆ.ಯು. ಶಿವಪೂಜಿ, ಎಸ್.ಪಿ. ಬ್ಯಾಡಗಿ, ರೇವಣಸಿದ್ದೇಶ್ವರ ಮಜ್ಜಗಿ, ಡಿ.ಎನ್. ಅಲ್ಲಾಪುರ ಎ.ಎಂ. ಸೌದಾಗರ, ಎಸ್.ಪಿ. ರೇಣುಕಾ ಮಂಗಳಾ ಕಂಬಿ, ನಸರಿನಬಾನು, ರೇಷ್ಮಾಬಾನು, ಆಯೇಷಾ ಬಾನು, ರಜಿಯಾ ಬ್ಯಾಡಗಿ, ಬೈರನಪಾದಮಠ, ಹನುಮನಹಳ್ಳಿಮಠ, ಎಂ.ಪಿ. ಉದಾಸಿಮಠ, ಸವಿತಾ ಲಮಾಣಿ, ಸವಿತಾ ನಾಯ್ಕ. ಈ.ಎಸ್.ಹರಳಿಹಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ