ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ನಡೆದ ೩೭ನೇ ರಾಷ್ಟ್ರೀಯ ರಸ್ತೆ ಸುರಕ್ಷತೆ ಮಾಸಾಚರಣೆ ರಸ್ತೆ ಸುರಕ್ಷೆ -ಜೀವದ ರಕ್ಷೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿಗಷ್ಟೇ ಮೈಸೂರು- ಬೆಂಗಳೂರು ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಿ ವಾಹನಗಳಿಗೆ ವೇಗದ ಮಿತಿ ಆಳವಡಿಸಲಾಯಿತು ಆದರೂ ಸಹ ಅಪಘಾತಗಳ ಪ್ರಕರಣಗಳು ಹೆಚ್ಚಾಗುತ್ತಿವೆ. ಬೆಂಗಳೂರಿನಂತಹ ಮಹಾ ನಗರಗಳಲ್ಲಿ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳಿಂದ ಅಪಘಾತಗಳು ಸಂಭವಿಸುತ್ತಿವೆ. ಆದರೆ, ಮಂಡ್ಯದಲ್ಲಿ ಅಂತಹ ರಸ್ತೆಗಳು ಹೆಚ್ಚು ಇಲ್ಲ. ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ ರಸ್ತೆ ಸುರಕ್ಷತಾ ಮಾಸಾಚರಣೆಗೆ ಕಾರ್ಯಕ್ರಮದ ಕುರಿತು ಜಾಗೃತಿ ಮೂಡಿಸಬೇಕು ಎಂದರು.೧೮ ವರ್ಷ ಮೇಲ್ಪಟ್ಟವರಿಗೆ ಮಾತ್ರ ವಾಹನ ಪರವಾಗಿ ನೀಡಲಾಗುತ್ತದೆ. ಆದರೆ, ತಂದೆ ತಾಯಿಗಳು ತಮ್ಮ ಮಕ್ಕಳು ವಾಹನ ಚಾಲನೆಯನ್ನು ಕಲಿಯಲಿ ಎಂಬ ಉದ್ದೇಶದಿಂದ ಅಪ್ರಾಪ್ತ ಮಕ್ಕಳಿಗೆ ವಾಹನವನ್ನು ನೀಡುತ್ತಿದ್ದಾರೆ. ಇದರಿಂದ ಅದೆಷ್ಟು ಅಪ್ರಾಪ್ತ ಮಕ್ಕಳು ಅಪಘಾತಕ್ಕೆ ಬಲಿಯಾಗಿದ್ದಾರೆ ಎಂಬ ಬಡ್ಗಿೆ ತಂದೆ-ತಾಯಿ ಜಾಗೃತಿ ವಹಿಸಬೇಕು. ಅಪ್ರಾಪ್ತ ಮಕ್ಕಳಿಗೆ ವಾಹನ ಪರವಾನಿಗಿ ಇಲ್ಲದೆ ವಾಹನಗಳನ್ನು ನೀಡುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ. ಇದರಡಿ ೨೫,೦೦೦ ರು. ದಂಡ ಹಾಗೂ ಪೋಷಕರಿಗೆ ಜೈಲು ಶಿಕ್ಷೆಯನ್ನು ವಿಧಿಸಬಹುದು ಎಂದರು.
ಸಂಚಾರಿ ನಿಯಮಗಳನ್ನು ಪಾಲಿಸುವುದರಿಂದ ಸರ್ಕಾರಕ್ಕೆ ದಂಡವನ್ನು ಕಟ್ಟುವ ಅನಿವಾರ್ಯತೆ ಇರುವುದಿಲ್ಲ. ವಾಹನ ಚಲಾವಣೆ ಮಾಡುವಾಗ ಎಚ್ಚರಿಕೆ ವಹಿಸಿ ಜಾಗೃತವಾಗಿ ವಾಹನ ಚಲಾಯಿಸಿ. ರಸ್ತೆ ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ಅಪಘಾತಗಳನ್ನು ಕಡಿಮೆ ಮಾಡೋಣ ಎಂದು ಸಲಹೆ ನೀಡಿದರು.
ಅನೇಕ ಅಪಘಾತಗಳು ಸಂಚಾರಿ ನಿಯಮಗಳನ್ನು ಪಾಲಿಸದೆ ಹೋದ ಸಂದರ್ಭದಲ್ಲಿ ಸಂಭವಿಸಿದೆ. ವಾಹನ ಚಲಾಯಿಸುವಾಗ ನಾವು ನಮ್ಮ ಬಗ್ಗೆ ಯೋಚಿಸಬೇಕು ಹಾಗೂ ನಮ್ಮ ಕುಟುಂಬದ ಕುರಿತಾಗಿಯೂ ಯೋಚಿಸಬೇಕು. ವಾಹನವನ್ನು ನಿಧಾನವಾಗಿ ಚಲಾಯಿಸಬೇಕು. ಅತಿಯಾದ ವೇಗದಲ್ಲಿ ವಾಹನ ಚಲಾಯಿಸುವುದರಿಂದ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೂ ಅಪಾಯ ಉಂಟಾಗುತ್ತದೆ. ಪೋಷಕರು ತಮ್ಮ ಮಕ್ಕಳಿಗೆ ೧೮ ವರ್ಷದ ಬಳಿಕ ವಾಹನಗಳನ್ನು ನೀಡುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಮಾವತಿ, ಮೋಟಾರ್ ವಾಹನ ಅಧೀಕ್ಷಕರಾದ ಚಿಕ್ಕಮಾದೇಗೌಡ, ಅಶೋಕ್, ನಿವೃತ್ತ ಅಧೀಕ್ಷಕ ಪ್ರಸಾದ್ ಮಂಗಲ ಯೋಗೇಶ್ ಇತರರಿದ್ದರು.