ಸಂವಿಧಾನವನ್ನು ಗೌರವಿಸಿ, ಪಾಲಿಸಿ: ತಹಸೀಲ್ದಾರ್

KannadaprabhaNewsNetwork |  
Published : Nov 28, 2025, 02:15 AM IST
ಮಧುಗಿರಿಯ ಕನ್ನಡ ಭವನದಲ್ಲಿ ತಾಲೂಕು ಆಡಳಿತ ,ತಾಪ,ಪುರಸಭೆ ಹಾಗೂ ವಿವಿಧ ದಲಿತಪರ ಸಂಘಟನೆಗಳಿಂದ ಆಯೋಜಿಸಿದ್ದ ಸಂವಿಧಾನ ದಿನ ಕಾರ್ಯಕ್ರಮವನ್ನು ತಹಸೀಲ್ದಾರ್ ಎಚ್.ಶ್ರೀನಿವಾಸ್ ,ಇಓ ಲಕ್ಷ್ಮಣ್ ಹಾಗೂ ವಿವಿಧ ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಉದ್ಘಾಟಿಸಿದರು.  | Kannada Prabha

ಸಾರಾಂಶ

ಹಕ್ಕುಗಳನ್ನು ಕೇಳುವಂತಯೇ ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಎಚ್ಚರದ ಪ್ರಜ್ಞೆ ಜನರಲ್ಲಿದ್ದಾಗ ಪ್ರಜಾಪ್ರಭತ್ವ ಯಶಸ್ವಿಯಾಗುತ್ತದೆ.

ಮಧುಗಿರಿ: ಸಂವಿಧಾನವನ್ನು ಪ್ರತಿಯೊಬ್ಬರು ಗೌರವಿಸಿ ಪಾಲಿಸಬೇಕು. ಜನತೆಯ ಸರ್ವತೋಮುಖ ಅಭಿವೃದ್ಧಿ ಮತ್ತು ದೇಶದ ಪ್ರಗತಿಗಾಗಿ ಎಲ್ಲರ ಹಿತ ರಕ್ಷಣೆಗಾಗಿ ಚಿಂತಿಸಿ ರೂಪಿಸಿದ ಸಂವಿಧಾನ ಸಾರ್ವಜನಿಕರ ಏಳಿಗೆಯನ್ನು ಗಮನದಲ್ಲಿರಿಸಿಕೊಂಡು ಎಲ್ಲರ ಅಶೋತ್ತರಗಳನ್ನು ಮೈಗೂಡಿಸಿ ಕೊಂಡಿದೆ ಎಂದು ತಹಸೀಲ್ದಾರ್ ಎಚ್.ಶ್ರೀನಿವಾಸ್ ತಿಳಿಸಿದರು.

ತಾಲೂಕು ಆಡಳಿತ, ಪುರಸಭೆ ತಾಪಂ ಹಾಗೂ ದಲಿತರಪರ ಸಂಘಟನೆಗಳಿಂದ ಪಾವಗಡ ವೃತ್ತದಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಮೆರವಣಿಗೆ ನಡೆಸಿ ನಂತರ ಕನ್ನಡ ಭವನದಲ್ಲಿ ಆಯೋಜಿಸಿದ್ದ ಸಂವಿಧಾನ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಕ್ಕುಗಳನ್ನು ಕೇಳುವಂತಯೇ ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಎಚ್ಚರದ ಪ್ರಜ್ಞೆ ಜನರಲ್ಲಿದ್ದಾಗ ಪ್ರಜಾಪ್ರಭತ್ವ ಯಶಸ್ವಿಯಾಗುತ್ತದೆ. ಎಲ್ಲರಿಗೂ ಮತದಾನದ ಹಕ್ಕು ನೀಡುವ ಮೂಲಕ ಸಂವಿಧಾನ ವ್ಯಕ್ತಿ ಸ್ವಾತಂತ್ರ್ಯಕ್ಕೆ ಕೆಲವು ಅವಕಾಶಗಳನ್ನು ಕಲ್ಪಿಸಿ ಕೊಟ್ಟು ದೇಶದ ಅಭ್ಯುದಯಕ್ಕೆ ಸಹಕಾರಿಯಾಗಿದೆ ಎಂದರು.

ತಾಲೂಕು ಪಂಚಾಯಿತಿ ಇಒ ಲಕ್ಷ್ಮಣ್‌ ಮಾತನಾಡಿ, ವಿದ್ಯಾರ್ಥಿಗಳು ಮತ್ತು ನಾಗರಿಕರು ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಅರಿತು ಪ್ರತಿಯೊಬ್ಬ ನಾಗರಿಕರು ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು ಸಂವಿಧಾನದಿಂದ ಸಾರ್ವತ್ರಿಕ ಶಿಕ್ಷಣ ಮತ್ತು ಮತದಾನದ ಹಕ್ಕು ಸಿಕ್ಕಿದೆ ಸಮಾನ ಅವಕಾಶ ಕಲ್ಪಿಸಿದೆ ಎಂದರು. ಸಮಾರಂಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಎಸ್.ಸುರೇಶ್, ಅರಣ್ಯಾಧಿಕಾರಿ ಸುರೇಶ್, ಬಿಸಿಎಂ ಇಲಾಖೆ ಜಯರಾಮ್, ನೌಕರರ ಸಂಘದ ಅಧ್ಯಕ್ಷ ರಂಗಪ್ಪ, ಶಂಕರಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದಿನೇಶ್‌, ನಿಲಯ ಪಾಲಕರಾದ ಚಿಕ್ಕರಂಗಪ್ಪ, ರಾಮಾಂಜಿನಪ್ಪ, ಚಂದ್ರಶೇಖರರೆಡ್ಡಿ, ನಿವೇದಿತಾ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತರ್ಜಾತಿ ವಿವಾಹಿತರಿಗೆ ಪೊಲೀಸರ ರಕ್ಷಣೆ : ಗೃಹ ಮಂತ್ರಿ
ಮುಂಬೈ ಮೇಯರ್‌ ಹುದ್ದೆಗೆ ಶಿಂಧೆ ಲಡಾಯಿ?