ಹಾಸ್ಯಗಾರ್ತಿ ಡಾ.ಸುಧಾ ಬರಗೂರು ಸಲಹೆ । ವಿವೇಕಾನಂದ ಸಂಸ್ಥೆಯ 27 ನೇ ವರ್ಷದ ಶಾಲಾ ವಾರ್ಷಿಕೋತ್ಸವ
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಂ.ಆರ್. ಮಂಜುನಾಥ್ ಮಾತನಾಡಿ, ಪ್ರತಿ ವರ್ಷ ಮಕ್ಕಳ ಪ್ರತಿಭೆ ಮತ್ತು ಸಾಧನೆಯನ್ನು ಗುರುತಿಸುವ ಕಾರ್ಯಕ್ರಮ ಇದಾಗಿದೆ. ನಮ್ಮ ಹನೂರು ತಾಲೂಕಿನಲ್ಲಿ ಸ್ವಾಮಿ ವಿವೇಕಾನಂದರ ಹೆಸರಿನ ಶಿಕ್ಷಣ ಸಂಸ್ಥೆ ಇರುವುದು ಹೆಮ್ಮೆಯ ವಿಷಯ. ಈ ಶಾಲೆಯೂ ಶೈಕ್ಷಣಿಕ ಮಟ್ಟದಲ್ಲಿ ತಾಲೂಕಿನಲ್ಲಿ ಅಗ್ರ ಸ್ಥಾನ ಪಡೆದು ಸಾಧನೆಗೈದು ಕೀರ್ತಿ ಪಡೆಯಲಿ ಎಂದು ತಿಳಿಸಿ ಜೊತೆಗೆ ಕ್ಷೆತ್ರದಲ್ಲಿ ಜಿಲ್ಲಾ ಶಿಕ್ಷಣ ಇಲಾಖೆಯ ಜೊತೆಗೂಡಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಮಕ್ಕಳಿಗೆ ಭರವಸೆ ತುಂಬುವ ಕಾರ್ಯಕ್ರಮಗಳನ್ನು ಮಾಡುತ್ತೇವೆ ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಾಧನೆ ಮಾಡಲು ನನ್ನ ಪ್ರೋತ್ಸಾಹ ಸದಾ ಇರುತ್ತದೆ ಎಂದು ಮಾತನಾಡಿದರು.ಎಲ್ಲರನ್ನು ರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ: ನರ್ಸರಿ ಮಕ್ಕಳಿಂದ ದ್ವಿತೀಯ ಪಿಯುಸಿ ಮಕ್ಕಳ ತನಕ ಅದ್ಭುತ ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ಪೋಷಕರು ಮತ್ತು ಸಾರ್ವಜನಿಕರನ್ನು ಎಲ್ಲಾ ಮಕ್ಕಳು ರಂಜಿಸಿದರು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ವೇದಿಕೆ ಮೇಲಿದ್ದ ಗಣ್ಯರುಗಳಿಂದ ಪ್ರಶಸ್ತಿ ಪ್ರಧಾನ ಮಾಡಲಾಯಿತು. 2022-2023 ಸಾಲಿನಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಚಾಮರಾಜನಗರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು 600ಕ್ಕೆ 586 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದ ಕೌದಳ್ಳಿ ಗ್ರಾಮದ ಸಾಜಿದ ಮತ್ತು ಅವರ ತಾಯಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ರಾಮಕೃಷ್ಣ ಆಶ್ರಮ ಮೈಸೂರು ಜಯಾನಂದ ಮಹಾರಾಜ್, ಬಿಇಓ ಶಿವರಾಜ್, ಸಂಸ್ಥೆ ಅಧ್ಯಕ್ಷರು ಉಮಾರಾಜೇಂದ್ರನ್, ಸುರೇಶ್ ನಾಯ್ಡು, ರಾಜೇಂದ್ರನ್, ಪ್ರಾಂಶುಪಾಲ ಮಧುಸೂದನ್, ಮುಖ್ಯ ಶಿಕ್ಷಕಿ, ಸತ್ಯ ಪ್ರಿಯ, ನಾಗೇಂದ್ರ, ಪದ್ಮಕ್ಸಿ, ರಾಣಿ, ಗಂಗಾಧರ್ ನಾಯ್ಡು, ಆಶೋಕ್, ಪಟ್ಟಣ ಪಂಚಾಯತ್ ಸದಸ್ಯರು ಮಹೇಶ್, ಗಿರೀಶ್, ಹಾಗೂ ಪೋಷಕರು ಸಾರ್ವಜನಿಕರು ಹಾಜರಿದ್ದರು.
------------------------------10ಸಿಎಚ್‌ಎನ್17ಹನೂರು ಪಟ್ಟಣದ ಶ್ರೀ ವಿವೇಕಾನಂದ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ 161ನೇ ಜಯಂತಿ ಕಾರ್ಯಕ್ರಮವನ್ನು ಶಾಸಕ ಎಂ.ಆರ್. ಮಂಜುನಾಥ್ ಉದ್ಘಾಟಿಸಿದರು. ಸುಧಾ ಬರಗೂರು ಮತ್ತಿತರರು ಇದ್ದರು.10ಸಿಎಚ್‌ಎನ್18 ಮತ್ತು19
ಹನೂರು ಪಟ್ಟಣದ ವಿವೇಕಾನಂದ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ 161ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಗಣ್ಯರು.