ವಂದೇ ಮಾತರಂ ಗೀತೆ ಪಕ್ಷಾತೀತವಾಗಿ ಗೌರವಿಸಿ: ಶಾಸಕ ಸಿ.ಸಿ. ಪಾಟೀಲ

KannadaprabhaNewsNetwork |  
Published : Nov 10, 2025, 01:45 AM IST
ಗದುಗಿನ ತೋಂಟದಾರ್ಯ ಮಠದ ಎದುರಿಗೆ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಬಂಗಾಳಿಯ ಬಂಕೀಮಚಂದ್ರ ಚಟರ್ಜಿ ಅವರು ರಚಿಸಿರುವ 150 ವರ್ಷ ತುಂಬಿರುವ ವಂದೇ ಮಾತರಂ ಗೀತೆಯ ಸಂಭ್ರಮಾಚರಣೆ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ದೇಶದ ಸ್ವತಂತ್ರ ಚಳವಳಿಯಲ್ಲಿ ವಂದೇ ಮಾತರಂ ಗೀತೆ ಭಾರಿ ಪ್ರಭಾವ ಬೀರುವ ಮೂಲಕ ದೇಶಾದ್ಯಂತ ದೇಶಪ್ರೇಮವನ್ನು ಪಸರಿಸಿತ್ತು.

ಗದಗ: ಬಂಗಾಳಿಯ ಬಂಕಿಮಚಂದ್ರ ಚಟರ್ಜಿ ಅವರು ರಚಿಸಿರುವ 150 ವರ್ಷ ತುಂಬಿರುವ ವಂದೇ ಮಾತರಂಅನ್ನು ದೇಶದ ಎಲ್ಲ ರಾಜಕೀಯ ಪಕ್ಷಗಳು ಪಕ್ಷಾತೀತವಾಗಿ ಹಾಡಿ ಗೌರವಿಸಬೇಕೆಂದು ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.

ನಗರದ ತೋಂಟದಾರ್ಯ ಮಠದ ಎದುರಿಗೆ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ನಡೆದ ಬಂಗಾಳಿಯ ಬಂಕೀಮಚಂದ್ರ ಚಟರ್ಜಿ ಅವರು ರಚಿಸಿರುವ 150 ವರ್ಷ ತುಂಬಿರುವ ವಂದೇ ಮಾತರಂ ಗೀತೆಯ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದ ಸ್ವತಂತ್ರ ಚಳವಳಿಯಲ್ಲಿ ವಂದೇ ಮಾತರಂ ಗೀತೆ ಭಾರಿ ಪ್ರಭಾವ ಬೀರುವ ಮೂಲಕ ದೇಶಾದ್ಯಂತ ದೇಶಪ್ರೇಮವನ್ನು ಪಸರಿಸಿತ್ತು ಎಂದರು.ಬಿಜೆಪಿ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಮಲ್ಲಿಕಾರ್ಜುಜನ ಬಾಳಿಕಾಯಿ ಮಾತನಾಡಿ, ದೇಶದ ಸ್ವತಂತ್ರ ಚಳವಳಿಯಲ್ಲಿ ಪ್ರಮುಖ ಪಾತ್ರದಲ್ಲಿರುವ ಮಂದಗಾಮಿ ಮತ್ತು ಉಗ್ರಗಾಮಿಗಳಿಗೆ ಪ್ರೇರಣೆ ನೀಡಿರುವ ಗೀತೆ ವಂದೇ ಮಾತರಂ ಆಗಿತ್ತು. ಬ್ರಿಟಿಷರ ವಿರುದ್ಧ ದೇಶಭಕ್ತರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿರುವ ಗೀತೆಯಾಗುವ ಮೂಲಕ ದೇಶಗೀತೆ ಆಯಿತು. ದೇಶದಲ್ಲಿರುವ ಅನೇಕ ರಾಜಕೀಯ ಪಕ್ಷಗಳಿವೆ. ಆದರೆ ಯಾರು ಆ ಗೀತೆಯನ್ನು ಸ್ಮರಿಸುತ್ತಿಲ್ಲ. ಇಂದು ಬಿಜೆಪಿ ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಯ ಮೂಲಕ ಗೌರವ ನೀಡುತ್ತಿದೆ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಬಂಕಿಮಚಂದ್ರ ಚಟರ್ಜಿ ಅವರು ರಚಿಸಿರುವ ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿದೆ. ಈ ಅಮರ ಗೀತೆಯ 150ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಭಾರತ ಸರ್ಕಾರ ನ. 7ರಿಂದ ಒಂದು ವರ್ಷದವರೆಗೆ ರಾಷ್ಟ್ರವ್ಯಾಪಿ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಿರುವುದು ಸ್ವಾಗತಾರ್ಹ ಎಂದರು.ಈ ವೇಳೆ ಮಾಜಿ ಸಚಿವ ಕಳಕಪ್ಪ ಬಂಡಿ, ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಲಿಂಗರಾಜ ಪಾಟೀಲ, ಆರ್.ಕೆ. ಚವಾಣ, ಫಕೀರೇಶ ರಟ್ಟಿಹಳ್ಳಿ, ನಿರ್ಮಲಾ ಕೊಳ್ಳಿ, ಬಿ.ಎಚ್. ಲದ್ವಾ, ತೋಟೊಸಾ ಭಾಂಡಗೆ, ನಾಗರಾಜ ಕುಲಕರ್ಣಿ, ಜಗನ್ನಾಥಸಾ ಭಾಂಡಗೆ, ಸುರೇಶ ಮರಳಪ್ಪನವರ, ಬೂದಪ್ಪ ಹಳ್ಳಿ, ವಿಜಯಕುಮಾರ ಗಡ್ಡಿ, ರಮೇಶ ಸಜ್ಜಗಾರ, ಸಂತೋಷ ಅಕ್ಕಿ, ನವೀನ ಕೊಟೆಕಲ್, ಮಂಜುನಾಥ ಶಾಂತಗೇರಿ, ಶಂಕರ ಕಾಕಿ, ಸಂಜೀಕುಮಾರ ಖಟವಟೆ, ಪ್ರಶಾಂತ ನಾಯ್ಕರ, ಶಿವು ಹಿರೇಮನಿಪಾಟೀಲ, ಉಷಾ ದಾಸರ, ವಿದ್ಯಾವತಿ ಗಡಗಿ, ವಿಜಯಲಕ್ಷ್ಮೀ ದಿಂಡೂರ, ಶಶಿಧರ ದಿಂಡೂರ, ವಿನಾಯಕ ಮಾನ್ವಿ, ಚಂದ್ರು ತಡಸದ, ಅನೀಲ ಅಬ್ಬಿಗೇರಿ, ಅಶೋಕ ನವಲಗುಂದ, ಶ್ರೀಪತಿ ಉಡುಪಿ ಹಾಗೂ ಪ್ರಮುಖರು ಇದ್ದರು.

PREV

Recommended Stories

ಇಂದು ಹಂಡ್ಲಿ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ
ಯಯೂದಿ ತತ್ವಗಳಿಗೂ, ಗೀತೆಗೂ ಸಾಮ್ಯತೆ ಇದೆ: ಪ್ರೊ.ಆ್ಯಲನ್‌