ದಿ.ಡಿ.ಬಿ.ವೆಂಕಟಸುಬ್ಬಾ ಜೋಯಿಸ್-ನರಸಮ್ಮ ವೆಂಕಟಸುಬ್ಬಾ ಜೋಯಿಸ್ ಕಂಚಿನ ಪುತ್ಧಳಿ ಅನಾವರಣ
ಹಿರಿಯರನ್ನು ಗೌರವಿಸುವುದು ಒಳ್ಳೆಯ ಕಾರ್ಯ, ಅವರನ್ನು ನೆನಪು ಮಾಡಿಕೊಳ್ಳುವ ಜತೆಗೆ ಆದರ್ಶಗಳನ್ನು ಮೈಗೂಡಿಸಿ ಕೊಳ್ಳಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯ ಪಟ್ಟರು.
ಕಳಸ ತಾಲೂಕಿನ ಹೊರನಾಡು ಆಧಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಆವರಣದಲ್ಲಿ ಗುರುವಾರ ದಿ.ಡಿ.ಬಿ.ವೆಂಕಟಸುಬ್ಬಾ ಜೋಯಿಸ್ ಮತ್ತು ನರಸಮ್ಮ ವೆಂಕಟಸುಬ್ಬಾ ಜೋಯಿಸ್ ಅವರ ಕಂಚಿನ ಪುತ್ಥಳಿ ಅನಾವರಣ ಗೊಳಿಸಿ ನಂತರ ಲಲಿತಾ ಕಲಾಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಶ್ರೀ ಕ್ಷೇತ್ರದಲ್ಲಿ ಜಿ. ಭೀಮೇಶ್ವರ ಜೋಷಿಯವರ ಅಜ್ಜ ದಿ.ಡಿ.ಬಿ.ವೆಂಕಸುಬ್ಬಾ ಜೋಯಿಸ್ ಮತ್ತು ಅವರ ಧರ್ಮಪತ್ನಿ ನರಸಮ್ಮ ಅವರ ಪ್ರತಿಮೆ ಲೋಕರ್ಪಣೆ ಮಾಡುವ ಭಾಗ್ಯ ನನಗೆ ದೊರಕಿದೆ. ಅವರ ವ್ಯಕ್ತಿತ್ವ ಮತ್ತು ಕಾಲಜ್ಞಾನದ ಬಗ್ಗೆ ಪುಸ್ತಕದಲ್ಲಿ ಪ್ರಕಟವಾಗಿದ್ದು ನೋಡಿದ್ದೇನೆ ಎಂದರು.
ಸನಾತನ ಧರ್ಮ, ಸಾಧು ಪರಂಪರೆಯ ದೇಶ ನಮ್ಮದು ನಾನು ಸೌಭಾಗ್ಯ ಶಾಲಿಯಾಗಿದ್ದೇನೆ. ಶ್ರೀಕ್ಷೇತ್ರದ ಧರ್ಮಕರ್ತರು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕ್ಷೇತ್ರಗಳೆಂದರೆ ಹೇಗಿರಬೇಕೆಂಬುದನ್ನು ನಿರೂಪಿಸಿದ್ದಾರೆ. ಇತರೆ ಮಂದಿರಗಳು ಬರಿ ಪೂಜೆಯ ಕೇಂದ್ರವಾಗದೆ ಸಾಮಾಜಿಕ ಕಾರ್ಯಗಳಲ್ಲಿ ತೊಡೆದುಕೊಳ್ಳಬೇಕು ಎಂದರು.
ಸಾನಿಧ್ಯ ವಹಿಸಿದ್ದ ಹರಿಹರ ಪೀಠದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷೀನರಸಿಂಹ ಪೀಠಂನ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾ ಸ್ವಾಮಿ ಶ್ರೀ ಅನ್ನಪೂರ್ಣಾ ಪಾದ ಸೇವಾ ದುರಂಧರ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿ ಶ್ರೀ ಕ್ಷೇತ್ರದ ಧರ್ಮಕರ್ತರಾದ ಜಿ.ಭಿಮೇಶ್ವರ ಜೋಷಿ ಕುಟುಂಬ ಪಿತೃ ಋಣಾ ತೀರಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ನಮ್ಮಲ್ಲಿ ಐದು ಋಣಗಳಿವೆ. ಅದರಲ್ಲಿ ಮೊದಲನೆಯದೇ ಪಿತೃಋಣ, ವೆಂಕಟಸುಬ್ಬಾ ಜೋಯಿಸ್ ಅವರು ಐದನೆಯ ಧರ್ಮಕರ್ತರಾಗಿ ಶ್ರೀಕ್ಷೇತ್ರ ಎಂದರೇ ಏನು ಎಂಬುವುದನ್ನು ತೋರಿಸುವ ಮೂಲಕ ಅಂದಿನ ಕಾಲದಲ್ಲಿ ಶಾಲಾ ಮಕ್ಕಳಿಗೆ ಅನ್ನದಾಸೋಹದಂತಹ ಕಾರ್ಯಕ್ರಮ ಹಮ್ಮಿಕೊಳ್ಳುವುದರೊಂದಿಗೆ ಪ್ರತಿಯೊಬ್ಬರಿಗೂ ಜೀವನ ಎಂದರೇ ಏನು ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ. ಅವರ ಆದರ್ಶವನ್ನು ಮುಂದಿನ ಪೀಳಿಗೆಗೆ ನೆನಪಿಸುವ ನಿಟ್ಟಿನಲ್ಲಿ ಜಿ.ಭೀಮೇಶ್ವರ ಜೋಷಿ ತಮ್ಮ ಅಜ್ಜಾ ಅಜ್ಜಿಯ ಪುತ್ಥಳಿ ನಾವರಣಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಕಾವತ್ ಅವರಿಗೆ ಸೇನೆಗಾಗಿ ಕ್ಷೇತ್ರದಿಂದ ₹10 ಲಕ್ಷ ದ ಚೆಕ್ಕನ್ನು ನೀಡಲಾಯಿತು.
8 ಕೆಸಿಕೆಎಂ 1ಹೊರನಾಡಿನ ದಿ.ಡಿ.ಬಿ.ವೆಂಕಟಸುಬ್ಬಾ ಜೋಯಿಸ್ ಮತ್ತು ನರಸಮ್ಮ ವೆಂಕಟಸುಬ್ಬಾ ಜೋಯಿಸ್ ಅವರ ಕಂಚಿನ ಪುತ್ಥಳಿಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನಾವರಣಗೊಳಿಸಿದರು. ಡಾ.ಜಿ.ಭೀಮೇಶ್ವರ ಜೋಷಿ, ರಾಜಲಕ್ಷ್ಮೀ ಬಿ. ಜೋಷಿ, ನಯನಾ ಮೋಟಮ್ಮ ಇದ್ದರು.