ಆಳಂದ ಹಿರೇಮಠದ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಚಾಲನೆ
ಆಳಂದ: ಸಿದ್ಧಲಿಂಗ ಶಿವಾಚಾರ್ಯ ಸಂಸ್ಥಾನ ಹಿರೇಮಠದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದ ಅಡಿ ₹25 ಲಕ್ಷ ವೆಚ್ಚದ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಪೀಠಾಧಿಪತಿ ಸಿದ್ಧೇಶ್ವರ ಶಿವಾಚಾರ್ಯರು ಹಾಗೂ ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಆರ್.ಕೆ.ಪಾಟೀಲ ಅವರು ಶ್ರೀಮಠದ ಬಹುದಿನಗಳ ಬೇಡಿಕೆಯನ್ನು ಶಾಸಕರು ಅನುದಾನ ಒದಗಿಸುವ ಮೂಲಕ ಭವನ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಉತ್ತಮ ಭವನ ನಿರ್ಮಾಣವಾಗಿ ಭಕ್ತರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.ಪಂಚಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವುಪುತ್ರಪ್ಪ ಪಾಟೀಲ, ಗುತ್ತಿಗೆದಾರ ರೇವಣಸಿದ್ಧಪ್ಪ ನಾಗೂರೆ, ಶಿವಲಿಂಗಯ್ಯಾ ಸ್ವಾಮಿ ಹೆಬಳಿ, ಬ್ರಹ್ಮಾನಂದ ಖಂಡಾಳ, ರತ್ನಾಕರ್ ಕುಂಬಾರ, ದಿನೇಶ ಪಾಟೀಲ, ಶಿವಾ ನಾಗೂರೆ, ಸೈಯದ್ ಖಲೀಮೋದ್ದೀನ್, ಸಂತೋಷ ವಾಲೆ, ಸೋಮಯ್ಯಾ ಸ್ವಾಮಿ, ಬಾಬುರಾವ್ ಹತ್ತಿ, ವೈಜನಾಥ ಪಾಟೀಲ, ರಘಪ್ಪ ಎಸ್. ಹತ್ತರಕಿ, ಕಲ್ಲಪ್ಪ ಹತ್ತರಕಿ, ಚನ್ನಪ್ಪ ಹತ್ತರಕಿ ಶ್ರೀಮಠದ ಭಕ್ತರು ಇದ್ದರು.
ಸಿದ್ಧಲಿಂಗ ಶಿವಾಚಾರ್ಯ ಸಂಸ್ಥಾನ ಹಿರೇಮಠದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದ ಅಡಿ ₹25 ಲಕ್ಷ ವೆಚ್ಚದ ಆಳಂದ ಹಿರೇಮಠದ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಚಾಲನೆ ಪೀಠಾಧಿಪತಿ ಸಿದ್ಧೇಶ್ವರ ಶಿವಾಚಾರ್ಯರು, ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ ಪೂಜೆ ನೆರವೇರಿಸಿದರು.