ಪಕ್ಷ ಸಂಘಟನೆಯಲ್ಲಿ ಕಾರ್ಯಕರ್ತರ ಜವಾಬ್ದಾರಿ ಮುಖ್ಯ

KannadaprabhaNewsNetwork |  
Published : Jun 28, 2026, 03:00 AM IST
26 ಟಿವಿಕೆ 2 - ತುರುವೇಕೆರೆಯ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ತಾಲ್ಲೂಕು ಬಿಜೆಪಿ ಘಟಕದಿಂದ ಎಸ್.ಐ.ಆರ್ ಬಗ್ಗೆ ಕಾರ್ಯಗಾರ ಹಾಗೂ ಬಿಎಲ್.ಒ 2 ಸಮಾವೇಶ ಸಭೆಯನ್ನು ನಡೆಸಲಾಯಿತು. | Kannada Prabha

ಸಾರಾಂಶ

ಸುವಲ್ಲಿ ಕಾರ್ಯಕರ್ತರ ಜವಾಬ್ದಾರಿ ಅತ್ಯಂತ ಪ್ರಮುಖವಾಗಿದೆ ಎಂದು ಬಿಜೆಪಿ ಮುಖಂಡ ಮತ್ತು ಮಾಜಿ ಎಂ ಎಲ್‌ ಸಿ ಸಚ್ಚಿದಾನಂದ ಮೂರ್ತಿ ತಿಳಿಸಿದರು.

ಕನ್ನಡಪ್ರಭವಾರ್ತೆ ತುರುವೇಕೆರೆ

ಭಾರತೀಯ ಜನತಾ ಪಕ್ಷದ ಸಂಘಟನೆ ಮತ್ತು ಮುಂಬರುವ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನ ಗಳಿಸಿ ಸರ್ಕಾರ ರಚಿಸುವಲ್ಲಿ ಕಾರ್ಯಕರ್ತರ ಜವಾಬ್ದಾರಿ ಅತ್ಯಂತ ಪ್ರಮುಖವಾಗಿದೆ ಎಂದು ಬಿಜೆಪಿ ಮುಖಂಡ ಮತ್ತು ಮಾಜಿ ಎಂ ಎಲ್‌ ಸಿ ಸಚ್ಚಿದಾನಂದ ಮೂರ್ತಿ ತಿಳಿಸಿದರು.

ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ತಾಲೂಕು ಬಿಜೆಪಿ ಘಟಕದಿಂದ ಆಯೋಜಿಸಿದ್ದ ಎಸ್.ಐ.ಆರ್ ಬಗ್ಗೆ ಕಾರ್ಯಾಗಾರ ಹಾಗೂ ಬೂತ್ ಮಟ್ಟದ ಅಧ್ಯಕ್ಷರ, ಬಿ ಎಲ್ ಎ 2 ಸಮಾವೇಶದಲ್ಲಿ ಮಾತನಾಡಿದ ಅವರು ಕ್ಷೇತ್ರದ ಬಿಎಲ್.ಓ 2 ಗಳ ಮೇಲೆ ಗುರುತರ ಜವಾಬ್ದಾರಿ ಇದೆ. ಈಗಾಗಲೇ ಮತದಾರ ಪಟ್ಟಿಯ ಪರಿಷ್ಕರಣೆ ದೇಶದಾದ್ಯಂತ ಆಗುತ್ತಿದೆ. ಜನ ಸಾಮಾನ್ಯರಿಗೆ ವಿರೋಧ ಪಕ್ಷಗಳು ತಪ್ಪು ಸಂದೇಶ ಸಾರುತ್ತಿವೆ. ಎಸ್‌ ಐ ಆರ್‌ ನ ವಾಸ್ತವತೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸವನ್ನು ಬಿ ಎಲ್ ಎ 2 ನ ಕಾರ್ಯಕರ್ತರು, ಅಧ್ಯಕ್ಷರು ಮತ್ತು ಪದಾದಿಕಾರಿಗಳು ಮಾಡಬೇಕೆಂದು ತಿಳಿಸಿದರು.

ಎಲ್ಲಾ ಬೂತ್‌ ಗಳಲ್ಲಿ ಸಂಚರಿಸಿ ನಿಜವಾದ ಮತದಾರ ಯಾರು?. ಮತದಾರರೇ ಅಲ್ಲದವರ ಹೆಸರು ಪಟ್ಟಿಯಲ್ಲಿದೆಯೇ ಎಂಬುದನ್ನು ಗಮನಿಸಬೇಕು. ಈಗಾಗಲೇ ಹಲವಾರು ರಾಜ್ಯಗಳಲ್ಲಿ ನಕಲಿ ಮತದಾರರನ್ನು ಗುರುತಿಸಿ ಮತದಾರಪಟ್ಟಿಯಿಂದ ಹೊರಹಾಕುವ ಪ್ರಕ್ರಿಯೆ ನಡೆದಿದೆ. ಹಾಗೆಯೇ ನಮ್ಮ ರಾಜ್ಯದಲ್ಲಿ ಅನಧಿಕೃತ ಮತದಾರರನ್ನು ಮತದಾರ ಪಟ್ಟಿಯಿಂದ ತೆಗೆಯುವ ಕೆಲಸ ಆಗಬೇಕು. ಓರ್ವ ಮತದಾರ ಒಂದೇ ಮತಕ್ಷೇತ್ರದಲ್ಲಿ ತನ್ನ ಹೆಸರನ್ನು ನಮೂದಿಸಿಕೊಳ್ಳಲು ಅವಕಾಶವಿದೆ. ಗ್ರಾಮದಲ್ಲಿ ಇಲ್ಲದವರ ಹೆಸರನ್ನು ನಿರ್ಭೀತಿಯಿಂದ ತೆಗೆಸಿ ಎಂದು ಅವರು ಹೇಳಿದರು. ಎಸ್.ಐ.ಆರ್ ಜಾರಿಯಿಂದ ನೈಜ ಮತದಾರರನ್ನು ತೆಗೆಯಲು ಸಾಧ್ಯವಿಲ್ಲ. ಇದರ ಬಗ್ಗೆ ಜನರಿಗೆ ತಿಳಿಸಬೇಕಿದೆ. ದೇಶದಲ್ಲಿ 13 ರಾಜ್ಯಗಳಲ್ಲಿ ಎಸ್.ಐ.ಆರ್ ಮಾಡಲಾಗಿದೆ. ಉಳಿದ 12 ರಾಜ್ಯಗಳಲ್ಲಿ ಪ್ರಾರಂಭವಾಗಿದೆ. ಕರ್ನಾಟಕದಲ್ಲಿ ಇದೇ ತಿಂಗಳ 30 ರಿಂದ ಎಸ್.ಐ.ಆರ್ ಆರಂಭವಾಗಲಿದೆ. ಎಲ್ಲರಿಗೂ ಈಗಾಗಲೇ ತರಬೇತಿ ನೀಡಲಾಗಿದೆ. ತಾಲೂಕಿನ 224 ಭೂತ್ ಗಳಲ್ಲಿ ಸರ್ಕಾರಿ ಅಧಿಕಾರಿ ನೇಮಕವಾಗಿದೆ. ಅವರಿಗೆ ನಿಮ್ಮ ಬೂತ್ ನ ಮತದಾರರ ಬಗ್ಗೆ ಸರಿಯಾದ ಮಾಹಿತಿ ನೀಡಿ. ಅರ್ಹ ಮತದಾರರನ್ನು ಉಳಿಸಿ ಎಂದರು. ಮಾಜಿ ಶಾಸಕ ಮಸಾಲಜಯರಾಮ್ ಮಾತನಾಡಿ ಬಿಜೆಪಿ ಕಾರ್ಯಕರ್ತರು ಪಕ್ಷದ ಸಂಘಟನೆಯಲ್ಲಿ ತೊಡಗಬೇಕಿದೆ. ಮುಂದಿನ 2028 ರ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ರಾಜ್ಯದಲ್ಲಿ 150 ಸೀಟು ಗೆಲ್ಲುವ ಮೂಲಕ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲಿದೆ. ತಾಲೂಕಿನಲ್ಲಿಯೂ ಬಿಜೆಪಿ ಎಂಎಲ್.ಎ ಆಯ್ಕೆಯಾಗಲಿದ್ದಾರೆ. ಬಿಜೆಪಿಯವರೇ ಮುಖ್ಯಮಂತ್ರಿ ಆಗಲಿದ್ದಾರೆಂದು ಹೇಳಿದರು. ಕಾರ್ಯಕರ್ತರು ಯಾವುದೇ ಅಪಪ್ರಚಾರಕ್ಕೆ ಕಿವಿಗೊಡಬಾರದು. ಗೊಂದಲಕ್ಕೆ ಒಳಗಾಗದೆ ಸಂಘಟನೆ ಮಾಡಬೇಕು. ನಾನು ಸೋತರೂ ಸಹ ಕ್ಷೇತ್ರದಲ್ಲಿ ಜನರ ಜೊತೆ ಒಡನಾಟದಲ್ಲಿದ್ದೇನೆ. ಎಸ್.ಐ.ಆರ್.ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡಿ, ನಕಲಿ ಮತದಾರನ್ನು ತೆಗೆದುಹಾಕಿ, ಅರ್ಹ ಮತದಾರರು ಉಳಿಯುವಂತೆ ಮಾಡಬೇಕು. ನಾನು ಸಹ ನಿಮ್ಮ ಬೂತ್ ಗಳಿಗೂ ಭೇಟಿ ನೀಡುತ್ತೇನೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಪ್ರಕಾಶ್ ವಹಿಸಿದ್ದರು. ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿ ಮಾತನಾಡಿದರು.

ಜಿಲ್ಲಾ ಉಪಾಧ್ಯಕ್ಷ ರುದ್ರೇಶ್, ಬಸವರಾಜು, ಪದವೀಧರ ಕ್ಷೇತ್ರದ ಎಂ.ಎಲ್.ಸಿ ಅಭ್ಯರ್ಥಿ ಕೆ.ಎನ್.ಸುರೇಶ್, ದುಂಡ ನವೀನ್, ಕೊಂಡಜ್ಜಿ ವಿಶ್ವನಾಥ್, ಅನಿತಾ ನಂಜುಂಡಯ್ಯ, ಪದ್ಮಾ ವೆಂಕಟೇಶ್, ಎಂ.ಡಿ.ಮೂರ್ತಿ, ವಿ.ಟಿ.ವೆಂಕಟರಾಮಯ್ಯ, ಕಡೇಹಳ್ಳಿ ಸಿದ್ದೇಗೌಡ, ಮುತ್ತುಗದಹಳ್ಳಿ ಕೆಂಪೇಗೌಡ, ಮಂಜೇಗೌಡ, ಶಿವಲಿಂಗೇಗೌಡ, ಸಂತೋಷ್ ಕಂಟ್ಲಿ, ಹರಿದಾಸನಹಳ್ಳಿ ಸಿದ್ದಪ್ಪಾಜಿ, ಪ್ರಸಾದ್, ಮಹೇಶ್, ಯೋಗಾನಂದ್, ನವೀನ್ ಬಾಬು ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು. ಮಹೇಶ್‌ ಸ್ವಾಗತಿಸಿದರು. ಯೋಗಾನಂದ್‌ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾರಾಂತ್ಯ ರಜೆ: ಪ್ರವಾಸಿ ತಾಣದಲ್ಲಿ ಟ್ರಾಫಿಕ್
ಶಾಸಕ ಪ್ರದೀಪ್‌ ಮೇಲೆ ಚಪ್ಪಲಿ ಎಸೆತ