ಕನ್ನಡಪ್ರಭ ವಾರ್ತೆ ಹೊನ್ನಾವರ
ಈ ಹಿನ್ನೆಲೆ ಮೀನುಗಾರಿಕೆ ಸುಸೂತ್ರವಾಗಿ ನಡೆಯಲಿ ಮತ್ತು ಸಮುದ್ರದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಿರಲಿ ಎಂದು ಪ್ರಾರ್ಥಿಸಿ, ಕರಾವಳಿ ಮೀನುಗಾರ ಕಾರ್ಮಿಕರ ಸಂಘದ ವತಿಯಿಂದ ಭಕ್ತಿಪೂರ್ವಕವಾಗಿ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸುದೀರ್ಘ ಬಿಡುವಿನ ನಂತರ ಸಾಗರಕ್ಕಿಳಿಯುವ ಮುನ್ನ ಮೀನುಗಾರರು ತಮ್ಮ ಸ್ಥಳೀಯ ಪರಿವಾರ ದೇವರಿಗೆ ಹಾಗೂ ಗ್ರಾಮದೇವತೆಯಾದ ಶ್ರೀ ದುರ್ಗಾದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಕೃಪೆ ತೋರುವಂತೆ ಪ್ರಾರ್ಥಿಸಿದರು. ತದನಂತರ, ಜೀವನಾಧಾರ ನೀಡುವ ಸಮುದ್ರ ದೇವಿ (ಕಡಲಮ್ಮ) ಹಾಗೂ ಮತ್ಸ್ಯರಾಜನಿಗೆ ಸಾಂಪ್ರದಾಯಿಕವಾಗಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ನೆರವೇರಿಸಿ, ಸಮೃದ್ಧ ಮತ್ಸ್ಯ ಕ್ಷೇಮ ಮತ್ತು ಸುರಕ್ಷಿತ ಮೀನುಗಾರಿಕೆಗಾಗಿ ಆಶೀರ್ವಾದ ಪಡೆದರು.ಕಳೆದ ಎರಡು ತಿಂಗಳುಗಳಿಂದ ದಂಡೆಯಲ್ಲಿ ವಿಶ್ರಮಿಸುತ್ತಿದ್ದ ಬೋಟ್‌ಗಳ ಬಲೆಗಳನ್ನು ಸರಿಪಡಿಸಿಕೊಂಡು, ಡೀಸೆಲ್ ಹಾಗೂ ಐಸ್ ತುಂಬಿಸಿಕೊಂಡು ಮೀನುಗಾರರು ಕಡಲಿಗೆ ಧುಮುಕಲು ಸಂಪೂರ್ಣ ಸಜ್ಜಾಗಿದ್ದಾರೆ. ಆ.1ರಿಂದ ಕಡಲತಡಿಯಲ್ಲಿ ಮರಳಿ ಚಟುವಟಿಕೆಗಳು ಗರಿಗೆದರಲಿದ್ದು, ಕರಾವಳಿ ತೀರದಲ್ಲಿ ಹೊಸ ಭರವಸೆ ಮತ್ತು ಸಂಭ್ರಮದ ವಾತಾವರಣ ಮನೆಮಾಡಿದೆ.