ಮತ್ತೆ ಉಕ್ಕಿದ ಕೃಷ್ಣೆ: ಸುರಕ್ಷತೆ ಸ್ಥಳದತ್ತ ಜನತೆ

KannadaprabhaNewsNetwork |  
Published : Aug 30, 2024, 01:03 AM IST
ಮತ್ತೇ ಉಕ್ಕಿದ ಕೃಷ್ಣೆ : ನದಿ ಪಾತ್ರದ ಜನ ವಾಪಸ್ ಸುರಕ್ಷತೆ ಸ್ಥಳದತ್ತ. | Kannada Prabha

ಸಾರಾಂಶ

ಈಗಷ್ಟೇ ಪ್ರವಾಹದ ಭೀತಿಯಿಂದ ನಿರಾಳತೆ ಕಂಡಿದ್ದ ಕೃಷ್ಣಾ ನದಿ ಪಾತ್ರದ ಗ್ರಾಮಸ್ಥರಿಗೆ ಮತ್ತೆ ಇದೀಗ ಆತಂಕ ಶುರುವಾಗಿದ್ದು, ಶಾಂತವಾಗಿದ್ದ ಕೃಷ್ಣೆ ಮತ್ತೆ ಭೋರ್ಗರೆಯುತ್ತಿದ್ದು, ನದಿತೀರದ ಜನತೆ ಸುರಕ್ಷತೆ ಸ್ಥಳದತ್ತ ವಾಲುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಈಗಷ್ಟೇ ಪ್ರವಾಹದ ಭೀತಿಯಿಂದ ನಿರಾಳತೆ ಕಂಡಿದ್ದ ಕೃಷ್ಣಾ ನದಿ ಪಾತ್ರದ ಗ್ರಾಮಸ್ಥರಿಗೆ ಮತ್ತೆ ಇದೀಗ ಆತಂಕ ಶುರುವಾಗಿದ್ದು, ಶಾಂತವಾಗಿದ್ದ ಕೃಷ್ಣೆ ಮತ್ತೆ ಭೋರ್ಗರೆಯುತ್ತಿದ್ದು, ನದಿತೀರದ ಜನತೆ ಸುರಕ್ಷತೆ ಸ್ಥಳದತ್ತ ವಾಲುತ್ತಿದ್ದಾರೆ.

ಮಹಾರಾಷ್ಟçದ ಕೃಷ್ಣಾ ಕೊಳ್ಳದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕೃಷ್ಣಾ ನದಿ ಮತ್ತೆ ಉಕ್ಕೇರುತ್ತಿದೆ. ಬಿರು ಬಿಸಿಲಿಗೆ ಸೋತು ಸೊರಗಿದ್ದ ಕೃಷ್ಣೆ ಇದೀಗ ವರುಣನ ಕೃಪೆಯಿಂದ ಒಡಲು ತುಂಬಿಕೊಂಡಿದ್ದಾಳೆ. ಈಗಾಗಲೇ ಕುಡಚಿ ಸೇತುವೆ ನೀರಿನಲ್ಲಿ ಮುಳುಗಿದೆ. ಇದೀಗ ತಾಲೂಕಿನ ಅಸ್ಕಿ ಗ್ರಾಮದ ಸುತ್ತುವರೆಯುವ ಎಲ್ಲ ಲಕ್ಷಣಗಳಿದ್ದು, ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳ ತಂಡ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ.

ಗುರುವಾರ ೬ ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿರುವ ಸಮೀಪದ ಹಿಪ್ಪರಗಿ ಜಲಾಶಯದಲ್ಲಿನ ಎಲ್ಲ ೨೨ ಗೇಟ್‌ಗಳನ್ನು ಮತ್ತೆ ತೆರೆಯಲಾಗಿದೆ. ಜಲಾಶಯದ ಒಳ ಹರಿವು ೧.೧೩ ಲಕ್ಷ ಕ್ಯುಸೆಕ್‌ನಷ್ಟಿದ್ದು, ಅಷ್ಟೇ ಪ್ರಮಾಣದಲ್ಲಿ ಜಲಾಶಯದಿಂದ ಹೊರ ಹಾಕಲಾಗುತ್ತಿದೆ.

ಜಲಾಶಯದ ೫೨೪.೭೮ ಮೀ ಸಾಮರ್ಥ್ಯ ಹೊಂದಿರುವ ಹಿಪ್ಪರಗಿಯಲ್ಲಿ ಇದೀಗ ೫೨೩.೩೫ ಮೀ.ನಷ್ಟು ಸಂಗ್ರಹವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ