ಕನ್ನಡಪ್ರಭ ವಾರ್ತೆ ಮೈಸೂರು
ನಗರ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲಿ ನಗರ ಪೊಲೀಸ್, ಅಶ್ವರೋಹಿ ದಳ, ಕರ್ನಾಟಕ ಪೊಲೀಸ್ಅಕಾಡೆಮಿ, ದಕ್ಷಿಣ ವಲಯ, ಜಿಲ್ಲಾ ಪೊಲೀಸ್, ಕೆಎಸ್ಆರ್ ಪಿ 5ನೇ ಪಡೆ, ಪೊಲೀಸ್ತರಬೇತಿ ಶಾಲೆ, ರಾಜ್ಯ ಗುಪ್ತ ವಾರ್ತೆ, ಡಿಸಿಆರ್ ಇ, ಸೆಸ್ಕ್ ಜಾಗೃತ ದಳ, ಐಎಸ್ ಡಿ, ಲೋಕಾಯುಕ್ತ ಇಲಾಖೆ ಸಂಯುಕ್ತವಾಗಿ ಮಂಗಳವಾರ ಆಯೋಜಿಸಿದ್ದ ಪೊಲೀಸ್ಧ್ವಜ ದಿನಾಚರಣೆಯಲ್ಲಿ ಅವರು ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.
ಶಿಸ್ತು ಸಂಯಮ, ಸಮಯ ಪಾಲನೆಯು ಪೊಲೀಸ್ ಇಲಾಖೆಯ ಬೆನ್ನೆಲುಬು. ಇದರ ಪಾಲನೆಯಿಂದ ವೈಯಕ್ತಿಕ ಬೆಳವಣಿಗೆಯೂ ಆಗುತ್ತದೆ. ನಿವೃತ್ತ ಅಧಿಕಾರಿಗಳ ಕಲ್ಯಾಣಕ್ಕಾಗಿ ಪೊಲೀಸ್ ಧ್ವಜ ಮಾರಾಟ ಮಾಡುತ್ತಿದ್ದು, ಕರ್ತವ್ಯ ನಿರತರು ಹೆಚ್ಚಿನ ಧ್ವಜ ಮಾರಾಟ ಮಾಡುವಂತೆ ಅವರು ಸಲಹೆ ನೀಡಿದರು.ಅಶ್ವದಳ, ಸಿಎಆರ್, ಡಿಎಆರ್, ಕೃಷ್ಣರಾಜ, ನರಸಿಂಹರಾಜ, ದೇವರಾಜ, ಸಂಚಾರ ಉಪ ವಿಭಾಗ, ಮಹಿಳಾ ಪೊಲೀಸ್, ಕೆಎಸ್ಆರ್ ಪಿ ತುಕಡಿಗಳ ಶಿಸ್ತುಬದ್ಧ ಪಥಸಂಚಲನಕ್ಕೆ ಪೊಲೀಸ್ ಬ್ಯಾಂಡ್ ಸಾಥ್ ನೀಡಿದವು.
ದಕ್ಷಿಣ ವಲಯ ಡಿಐಜಿ ಅಮಿತ್ ಸಿಂಗ್, ನಗರ ಪೊಲೀಸ್ಆಯುಕ್ತ ರಮೇಶ್ಬಾನೋತ್, ಕೆಪಿಎ ನಿರ್ದೇಶಕ ಲೋಕೇಶ್ ಭ ಜಗಲಾಸರ್, ಮೈಸೂರು ಎಸ್ಪಿ ಸೀಮಾ ಲಾಟ್ಕರ್, ಡಿಸಿಆರ್ ಇ ಎಸ್ಪಿ ಡಾ.ಬಿ.ಟಿ. ಕವಿತಾ, ಡಿಸಿಪಿಗಳಾದ ಎಂ. ಮುತ್ತುರಾಜು, ಎಸ್. ಜಾಹ್ನವಿ, ಮಾರುತಿ, ಹೆಚ್ಚುವರಿ ಎಸ್ಪಿ ಡಾ.ಬಿ.ಎನ್. ನಂದಿನಿ ಮೊದಲಾದವರು ಇದ್ದರು.