ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಿವೃತ್ತ ನೌಕರರ ಪ್ರತಿಭಟನೆ

KannadaprabhaNewsNetwork |  
Published : Mar 29, 2026, 02:15 AM IST
ಹರಪನಹಳ್ಳಿಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಸರ್ಕಾರಿ ನಿವೃತ್ತ ನೌಕರರು ಪ್ರತಿಭಟನೆ ನಡೆಸಿ ತಹಶೀಲ್ದಾರ ರವರಿಗೆ ಮನವಿ ಪತ್ರ ಸಲ್ಲಿಸಿದರು. | Kannada Prabha

ಸಾರಾಂಶ

ಐಬಿ ವೃತ್ತದಿಂದ ತಾಲೂಕು ಆಡಳಿತ ಸೌಧಕ್ಕೆ ಮೆರವಣಿಗೆ ಮೂಲಕ ತೆರಳಿ ಬಹಿರಂಗ ಸಭೆ ನಡೆಸಿದರು.

ಹರಪನಹಳ್ಳಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಗರದಲ್ಲಿ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದಿಂದ ಬುಧವಾರ ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ನಡೆಸಿ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಲಾಯಿತು.ಇಲ್ಲಿಯ ಐಬಿ ವೃತ್ತದಿಂದ ತಾಲೂಕು ಆಡಳಿತ ಸೌಧಕ್ಕೆ ಮೆರವಣಿಗೆ ಮೂಲಕ ತೆರಳಿ ಬಹಿರಂಗ ಸಭೆ ನಡೆಸಿದರು.

ಕೇಂದ್ರ ಸರ್ಕಾರ ತರಬಯಸಿರುವ ಪಿಂಚಣಿ ತಡೆಹಿಡಿಯುವ ಶಾಸನಬದ್ದ ಆದೇಶ ಮಾಡಬಾರದು, ನಿವೃತ್ತ ನೌಕರರ ಪಿಂಚಣಿ, ತುಚ್ಚಿಭತ್ಯೆಯನ್ನು ವೇತನ ಆಯೋಗದ ಶಿಪಾರಸನ್ವಯ ಹೆಚ್ಚುವರಿ ಮಾಡುವುದನ್ನು ತಡೆಹಿಡಿಯಬಾರದು, ನಗದು ರಹಿತ ಜ್ಯೋತಿ ಸಂಜೀವಿನಿ (ಆರೋಗ್ಯ ಭಾಗ್ಯ) ಕೂಡಲೇ ಜಾರಿಗೊಳಿಸಬೇಕು, ಸರ್ಕಾರಿ ನಿವೃತ್ತ ಪಿಂಚಣಿದಾರರು ಅಥವಾ ಕುಟುಂಬ ಪಿಂಚಣಿದಾರರಿಗೆ 65 ರಿಂದ 70 ವರ್ಷಕ್ಕೆ ಶೇ.5 ರಷ್ಟು , 70 ರಿಂದ 80 ವರ್ಷಕ್ಕೆ ಶೇ.10 ರಷ್ಟು ಹೆಚ್ಚುವರಿ ಪಿಂಚಣಿಯನ್ನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರಿ ನಿವೃತ್ತ ನೌಕರರು ಮರಣ ಹೊಂದಿದಲ್ಲಿ ಶವ ಸಂಸ್ಕಾರಕ್ಕೆ 10 ಸಾವಿರ ಗಳನ್ನು ನೀಡಬೇಕು, ರಾಜ್ಯ ಸರ್ಕಾರಿ ನಿವೃತ್ತ ನೌಕರರಿಗೆ ಬಸ್‌ ಪ್ರಯಾಣದಲ್ಲಿ ರಿಯಾಯಿತಿಯನ್ನು ಶೇ.25 ಬದಲಾಗಿ ಶೇ.50 ಕ್ಕೆ ಹೆಚ್ಚಿಸಬೇಕು, ರೈಲ್ವೆ ಪ್ರಯಾಣದಲ್ಲಿ ನಿವೃತ್ತಿ ನೌಕರರಿಗೆ ಶೇ.50 ರಷ್ಟು ರಿಯಾಯಿತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಬೇಕು 1-7-2022 ರಿಂದ 31-7-2024 ರೊಳಗೆ ನಿವೃತ್ತಿ ಯಾದವರಿಗೆ ನೀಡುವ ಪಿಂಚಣಿ ತಾರತಮ್ಯ ಸರಿಪಡಿಸಬೇಕು ಎಂಬ ಬೇಡಿಕೆಗಳ ಮನವಿ ಪತ್ರವನ್ನು ತಹಶೀಲ್ದಾರ ಗಿರೀಶಬಾಬು ಅವರಿಗೆ ಸಲ್ಲಿಸಿದರು.

ನಿವೃತ್ತ ನೌಕರರ ಸಂಘದ ತಾಲೂಕು ಅಧ್ಯಕ್ಷ ಶೇಖರಗೌಡ ಪಾಟೀಲ್, ಕಾರ್ಯದರ್ಶಿ ಕೆ.ಕೊಟ್ರಪ್ಪ, ಉಪಾದ್ಯಕ್ಷರುಗಳಾದ ಬಸವನಗೌಡ, ಭೀಮಪ್ಪ, ಖಜಾಂಚಿ ರೇವಣಸಿದ್ದಪ್ಪ, ಜಂಟಿ ಕಾರ್ಯದರ್ಶಿ ಆನಂದ, ವಾಮದೇವಪ್ಪ, ಸಂಘಟನಾ ಕಾರ್ಯದರ್ಶಿಗಳಾದ ಎಚ್.ಕೊಟ್ರಪ್ಪ, ಗಾಯಿತ್ರಿದೇವಿ, , ಸಾಂಸ್ಕೃತಿಕ ಕಾರ್ಯದರ್ಶಿ ಚೆನ್ನಬಸಪ್ಪ, ಕ್ರೀಡಾ ಕಾರ್ಯದರ್ಶಿ ಶೇಖರಪ್ಪ, ಆಂತರಿಕ ಲೆಕ್ಕ ಪರಿಶೋಧಕ ಕೆ.ಚೆನ್ನಬಸಪ್ಪ, ಸದಸ್ಯರುಗಳಾದ ಪಕ್ಕೀರಪ್ಪ, ಭೀಮನಾಯ್ಕ, ಅಬ್ದುಲ್‌ ಸಲಾಂ ಸೇರಿದಂತೆ ಅನೇಕ ನಿವೃತ್ತ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳಾ ನೌಕರರ ಆರೋಗ್ಯ ಆಡಳಿತದ ಅಡಿಪಾಯ: ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ
ಮೇ 9,10ರಂದು ಅಖಿಲ ಭಾರತ ದೇವಾಂಗ ಜಾಗೃತ ಸಮಾವೇಶ: ಶ್ರೀನಿವಾಸ ಕಂಟ್ಲಿ