ಕವಿವಿ ಪಠ್ಯದಿಂದ ಸಂವಿಧಾನ ವಿರೋಧಿ ಬರಹ ಹಿಂಪಡೆಯಿರಿ: ಹಿರಿಯ ನ್ಯಾಯವಾದಿ ಅರುಣ ಜೋಶಿ

KannadaprabhaNewsNetwork |  
Published : Jan 23, 2025, 12:46 AM IST
44 | Kannada Prabha

ಸಾರಾಂಶ

ಕರ್ನಾಟಕ ವಿಶ್ವವಿದ್ಯಾಲಯದ ಬಿಎ ಪ್ರಥಮ ಸೆಮಿಸ್ಟರ್‌ ಕನ್ನಡ ಭಾಷೆಯ ಬೆಳಕು ಪಠ್ಯದಲ್ಲಿ ರಾಷ್ಟ್ರ, ಸಂವಿಧಾನ ವಿರೋಧಿ ಬರಹವಿದ್ದು ತಕ್ಷಣ ಇದನ್ನು ಹಿಂಪಡೆಯಬೇಕೆಂದು ಹಿರಿಯ ನ್ಯಾಯವಾದಿ ಅರುಣ ಜೋಶಿ ಒತ್ತಾಯಿಸಿದ್ದಾರೆ.

ಧಾರವಾಡ:

ಕರ್ನಾಟಕ ವಿಶ್ವವಿದ್ಯಾಲಯ ಬಿಎ ಪ್ರಥಮ ಸೆಮಿಸ್ಟರ್​ ಕನ್ನಡ ಭಾಷೆಯ "ಬೆಳಕು'''' ಎಂಬ ಪಠ್ಯ ಪುಸ್ತಕದಲ್ಲಿನ ರಾಷ್ಟ್ರ, ಸಮಾಜ ಹಾಗೂ ಸಂವಿಧಾನ ವಿರೋಧಿ ಪಠ್ಯ ಬರಹಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಕುಲಪತಿಗೆ ಹಿರಿಯ ನ್ಯಾಯವಾದಿ ಅರುಣ ಜೋಶಿ ಪತ್ರ ಬರೆದಿದ್ದಾರೆ.

ಪಠ್ಯದಲ್ಲಿನ ಬರಹಗಳು ಹದಿ ವಯಸ್ಸಿನ ವಿದ್ಯಾರ್ಥಿಗಳಿಗೆ ಕಲಿಸುವುದರಿಂದ ಆಗುವ ಅನಾಹುತಗಳ ಬಗ್ಗೆ ಮನಗಾಣಬೇಕು. ಪುಸ್ತಕದ ಪಠ್ಯದಲ್ಲಿ ಭಾರತ ಮಾತೆಯನ್ನು ಅವಹೇಳನ ಮಾಡುವ, ಭಾರತವನ್ನು ಒಂದು ರಾಷ್ಟ್ರವಲ್ಲ ಎಂದು ಬಿಂಬಿಸುವ, ಧರ್ಮ ಮತ್ತು ಜಾತಿಗಳ ನಡುವೆ ವೈಮನಸ್ಸು ತಂದು ಸಂವಿಧಾನದ ಆಶಯಕ್ಕೆ ವಿರುದ್ಧವಾದ ಬರಹಗಳಿವೆ. ದೇಶ ವಿರೋಧಿ, ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ, ರಾಮಮಂದಿರ ನಿರ್ಮಾಣ ವಿರೋಧಿ, ಸುಳ್ಳು ಅಂಶ ಒಳಗೊಂಡ ಬರಹಗಳಾಗಿವೆ. ಇದು ಕಮ್ಯುನಿಷ್ಟ್‌ ಮನಸ್ಥಿತಿಯ ಲೇಖಕರು ಸಾಮಾನ್ಯ ವಯಸ್ಸಿನ ವಿದ್ಯಾಥಿರ್ಗಳಲ್ಲಿ ವಿಷಬೀಜ ತುಂಬುವ ಕೃತ್ಯದ ಒಂದು ಭಾಗವಾಗಿದೆ ಎಂದು ದೂರಿದ್ದಾರೆ.

ಸೋನಿಯಾ ಗಾಂಧಿಗೆ ಪ್ರಧಾನಿ ಸ್ಥಾನ ಸಿಗದೆ ಇರುವುದು ತಪ್ಪ್ಪುಎಂಬ ಭಾವನೆ ಬರುವ ಲೇಖನಗಳಿರುವುದು ಆಶ್ಚರ್ಯ ತಂದಿದೆ. ಲೇಖಕರು ಇದು ಪಠ್ಯ ಪುಸ್ತಕ ಎಂಬುದನ್ನು ಮರೆತು ರಾಜಕೀಯ ಲೇಖನದಂತೆ "ಪರಿವಾರ'''''''''''''''' ಎಂಬ ಶಬ್ದ ಉಪಯೋಗಿಸಿ ಆರ್​ಎಸ್​ಎಸ್​ ಮತ್ತು ಕೇಂದ್ರ ಸರ್ಕಾರದ ಸಮಾನ ಮನಸ್ಕರ ಸಂಸ್ಥೆಗಳನ್ನು ಹೀಗಳೆವ ಹಾಗೂ ಈ ಸಂಸ್ಥೆಗಳ ವಿರುದ್ಧ ಅಪಪ್ರಚಾರ ಮಾಡುವ ಲೇಖನ ಪಠ್ಯದಲ್ಲಿ ತುಂಬಿರುವುದು ಅಪರಾಧ ಕೃತ್ಯವಾಗಿದೆ. ಇಂತಹ ಬರಹಗಳು ಪಠ್ಯದಲ್ಲಿ ಸೇರ್ಪಡೆಯಾಗಲು ಕಾರಣೀಕರ್ತರಾದವರ ಮೇಲೆ, ಸಂಬಂಧಿಸಿದ ಬರಹಗಾರರು ಹಾಗೂ ಪಠ್ಯ ಪುಸ್ತಕ ಸಮಿತಿ ಸದಸ್ಯರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೂಡಲೇ ಈ ಪಠ್ಯ ಪುಸ್ತಕವನ್ನು ವಾಪಸ್​ ಪಡೆಬೇಕು. ಈ ವಿಷಯ ಗಮನಕ್ಕೆ ಬಂದ ಮೇಲೂ ಕ್ರಮಕೈಗೊಳ್ಳದಿದ್ದಲ್ಲಿ, ಉದ್ದೇಶಪೂರ್ವಕ ದೇಶ ವಿರೋಧಿ ಪಠ್ಯ ಪ್ರಸರಣಕ್ಕೆ ಸಹಕಾರ ನೀಡಲಾಗಿದೆ ಎಂದು ಕುಲಪತಿ ಸಹಿತ ಎಲ್ಲರ ಮೇಲೆ ಸಿವಿಲ್​ ಹಾಗೂ ಕ್ರಿಮಿನಲ್​ ಸ್ವರೂಪದ ಕಾನೂನು ಕ್ರಮ ಜರುಗಿಸುವುದು ಅನಿವಾರ್ಯವಾಗಲಿದೆ ಎಂದು ಅರುಣ ಜೋಶಿ ಎಚ್ಚರಿಸಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ