ಏಷ್ಯನ್‌ನಲ್ಲಿ ಬೆಳ್ಳಿ ಗೆದ್ದ ರೇವಾ ವಿವಿ ವಿದ್ಯಾರ್ಥಿನಿಗೆ ಸನ್ಮಾನ

KannadaprabhaNewsNetwork |  
Published : Oct 10, 2026, 03:30 AM IST
19 | Kannada Prabha

ಸಾರಾಂಶ

ಜಪಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಅಮೋಘ ಸಾಧನೆ ಮಾಡಿದ ರೇವಾವಿವಿ ಸಂಸ್ಥೆಯ ವಿದ್ಯಾರ್ಥಿನಿಯಾದ ತಿಲೋತ್ತಮಾ ಸೇನ್ ಅವರನ್ನು ವಿವಿ ವತಿಯಿಂದ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು ಜಪಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಅಮೋಘ ಸಾಧನೆ ಮಾಡಿದ ರೇವಾವಿವಿ ಸಂಸ್ಥೆಯ ವಿದ್ಯಾರ್ಥಿನಿಯಾದ ತಿಲೋತ್ತಮಾ ಸೇನ್ ಅವರನ್ನು ವಿವಿ ವತಿಯಿಂದ ಸನ್ಮಾನಿಸಲಾಯಿತು.

ಮಹಿಳೆಯರ 50 ಮೀ. ರೈಫಲ್ಸ್ 3 ವಿಭಾಗದಲ್ಲಿ ಭಾರತ ತಂಡವು ಬೆಳ್ಳಿ ಪದಕ ಜಯಿಸುವುದಕ್ಕೆ ತಮ್ಮ ಕೊಡುಗೆಯನ್ನೂ ನೀಡಿದ ತಿಲೋತ್ತಮಾ ಸೇನ್ ಅವರ ಸಾಧನೆಯನ್ನು ಸ್ಮರಿಸಲಾಯಿತು. ಚೀನಾದ ನಂತರ ಸ್ಥಾನದಲ್ಲಿ ಭಾರತದ ತಂಡ 1763-90x ಸರಾಸರಿಯಲ್ಲಿ ಬೆಳ್ಳಿ ಪದಕ ತನ್ನದಾಗಿಸಿಕೊಂಡಿತು. ವಿದರ್ಶಾ ಕೆ. ವಿನೋದ್, ಅಶಿ ಚೌಕ್ಸಿ ಹಾಗೂ ತಿಲೋತ್ತಮಾ ಅವರನ್ನು ಒಳಗೊಂಡ ತಂಡವು ಅತ್ಯುತ್ತಮ ಪ್ರದರ್ಶನ ನೀಡಿದ್ದರಿಂದ ಪದಕ ಸಾಧನೆಗೆ ಕಾರಣವಾಯಿತು. 590 ಪಾಯಿಂಟ್ಸ್ ಗಳಿಸುವುದರ ಮೂಲಕ ತಿಲೋತ್ತಮಾ ಸೇನ್ ಅವರು ತಂಡಗಳ ಸ್ಪರ್ಧೆಯಲ್ಲಿ ಭಾರತದ ಟಾಪ್ ಪರ್ಫಾರ್ಮರ್ ಆಗಿ ಹೊರಹೊಮ್ಮಿದರು. ನೀಲಿಂಗ್ 197, ಪ್ರೋನ್ 199 ಹಾಗೂ ಸ್ಟ್ಯಾಂಡಿಂಗ್ 194 ಪಾಯಿಂಟ್ಸ್ ಗಳನ್ನು ತಿಲೋತ್ತಮಾ ಗಳಿಸಿದ್ದರು. ಅವರು ವೈಯಕ್ತಿಕ ವಿಭಾಗದಲ್ಲಿಯೂ 50 ಮೀ. ರೈಫಲ್ 3 ಪೊಸಿಷನ್ಸ್ ಫೈನಲ್‌ಗಾಗಿ ಅರ್ಹತಾ ಸುತ್ತಿನಲ್ಲಿ 3ನೇ ಸ್ಥಾನವನ್ನು ಪಡೆದರು.ರೇವಾ ವಿವಿ ಕುಲಪತಿ ಡಾ.ಪಿ.ಶ್ಯಾಮ ರಾಜು ಅವರು ಮಾತನಾಡಿ, ತಿಲೋತ್ತಮ ಅವರು ರೇವಾ ವಿಶ್ವವಿದ್ಯಾಲಯದಲ್ಲಿ ನಾವೆಲ್ಲರೂ ವಿಶಿಷ್ಟ್ಯಪೂರ್ಣವಾಗಿ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಆಕೆಯ ಪಯಣವು ಶಿಸ್ತು, ಸಂಕಲ್ಪಶಕ್ತಿ ಹಾಗೂ ಧೈರ್ಯವನ್ನು ಪ್ರತಿಫಲಿಸುತ್ತದೆ. ಆಕೆಯ ಕನಸುಗಳಿಗೆ ಬೆಂಬಲ ನೀಡಿದ್ದಕ್ಕಾಗಿ ನಮಗೆ ತುಂಬ ಸಂತೋಷವಾಗಿದೆ. ಆಕೆಯ ಈ ಸಾಧನೆ ರೇವಾದ ಇನ್ನೂ ಹಲವು ಯುವ ವಿದ್ಯಾರ್ಥಿಗಳಿಗೆ ದೊಡ್ಡದಾಗಿ ಕನಸು ಕಾಣುವುದಕ್ಕೆ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದರು. ರೇವಾ ವಿವಿ ರಿಜಿಸ್ಟ್ರಾರ್ ಡಾ.ಎಂ.ಧನಂಜಯ್ ಅವರು ತಿಲೋತ್ತಮಾ ಸಾಧನೆ ಬಗ್ಗೆ ಶ್ಲಾಘಿಸಿದರು. ಸದ್ಯ ತಿಲೋತ್ತಮಾ ಅವರು ರೇವಾ ವಿಶ್ವವಿದ್ಯಾಲಯದ ಸೈಕಲಾಜಿಕಲ್ ಮತ್ತು ಬಿಹೇವಿಯರಲ್ ಸೈನ್ಸಸ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಜೆಪಿ ಪ್ರತಿಭಟನೆಯಲ್ಲಿ ಧ್ರುವ್‌ ರಾಠಿವೀಸಾ ನಿಯಮ ಪರಿಶೀಲಿಸಲು ಆಗ್ರಹ
- ಜಲಸಂಕಷ್ಟಕ್ಕೆ ಪರಿಹಾರಾತ್ಮಕ, ಮಾರ್ಗದರ್ಶಕ ಎಂದ ಕೇಂದ್ರ ತಂಡ । ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ತಂಡ ಭೇಟಿ, ಅಧ್ಯಯನ