ಕಂದಾಯ ಇಲಾಖೆ: ಜಿಲ್ಲೆಯಲ್ಲಿ 73 ಲಕ್ಷ ಪುಟ ಡಿಜಿಟಲೀಕರಣ ಪೂರ್ಣ

KannadaprabhaNewsNetwork | Published : Jun 28, 2025 12:18 AM

ಕೊಪ್ಪಳ ಜಿಲ್ಲೆಯ 6 ತಾಲೂಕುಗಳಲ್ಲಿ ಒಟ್ಟು 2,26,491 ಕಡತಗಳಲ್ಲಿ 1,45,378 ಕಡತಗಳ 45,31,451 ಪುಟ ಹಾಗೂ ಒಟ್ಟು 30,237 ವಹಿಗಳಲ್ಲಿ 8,927 ವಹಿಗಳ 13,05,775 ಪುಟಗಳು ಸೇರಿದಂತೆ ಒಟ್ಟು 58,37,226 ಪುಟಗಳ ದಾಖಲೆ ಡಿಜಿಟಲೀಕರಣಗೊಳಿಸಲಾಗಿದೆ. ಇನ್ನೂ ಬಾಕಿ ಉಳಿದ ಕಡತಗಳು ಹಾಗೂ ವಹಿಗಳ ಡಿಜಿಟಲೀಕರಣ ಕಾರ್ಯವು ಪ್ರಗತಿಯಲ್ಲಿದೆ.

ಕೊಪ್ಪಳ:

ಕಂದಾಯ ಇಲಾಖೆಯ ಹಳೆಯ ದಾಖಲೆ ಸುರಕ್ಷಿತಗೊಳಿಸಲು ಹಾಗೂ ಸುಳ್ಳು ದಾಖಲೆ ಸೃಷ್ಟಿ ತಡೆಗಟ್ಟಲು ಸರ್ಕಾರ ಜಾರಿಗೊಳಿಸಿರುವ ಭೂ ಸುರಕ್ಷಾ ಯೋಜನೆಯಡಿ ಜಿಲ್ಲೆಯಲ್ಲಿ ಈ ವರೆಗೆ 73,07,700 ಪುಟ ಡಿಜಿಟಲೀಕರಣಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೊಪ್ಪಳ ತಾಲೂಕಿನಲ್ಲಿ 37,994 ಕಡತಗಳಲ್ಲಿ 13,869 ಕಡತಗಳ 9,77,904 ಪುಟ ಹಾಗೂ ಒಟ್ಟು 11,684 ವಹಿಗಳಲ್ಲಿ(ರಿಜಿಸ್ಟರ್) 2,882 ವಹಿಗಳ 45,679 ಪುಟ ಸೇರಿದಂತೆ ಒಟ್ಟು 10,23,583 ಪುಟ ಡಿಜಿಟಲೀಕರಣಗೊಳಿಸಲಾಗಿದೆ. ಕುಷ್ಟಗಿ ತಾಲೂಕಿನಲ್ಲಿ ಒಟ್ಟು 48,375ರಲ್ಲಿ 40,857 ಕಡತಗಳ 14,69,295 ಪುಟ ಹಾಗೂ ಒಟ್ಟು 5,321 ವಹಿಗಳಲ್ಲಿ 499 ವಹಿಗಳ 60,151 ಪುಟ ಸೇರಿದಂತೆ ಒಟ್ಟು 15,29,446 ಪುಟ, ಕುಕನೂರು ತಾಲೂಕಿನಲ್ಲಿ ಒಟ್ಟು 25,000ರಲ್ಲಿ 19,471 ಕಡತಗಳ 2,79,881 ಪುಟ ಹಾಗೂ ಒಟ್ಟು 5,000 ವಹಿಗಳಲ್ಲಿ 911 ವಹಿಗಳ 2,06,002 ಪುಟ ಸೇರಿದಂತೆ ಒಟ್ಟು 4,85,883 ಪುಟ ಡಿಜಿಟಲೀಕರಣಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.ಕನಕಗಿರಿ ತಾಲೂಕಿನನಲ್ಲಿ 26,300 ಕಡತಗಳಲ್ಲಿ 18,402 ಕಡತಗಳ 4,53,988 ಪುಟ ಹಾಗೂ ಒಟ್ಟು 3,200 ವಹಿಗಳಲ್ಲಿ 1,823 ವಹಿಗಳ 3,67,942 ಪುಟ ಸೇರಿದಂತೆ ಒಟ್ಟು 8,21,930 ಪುಟ, ಯಲಬುರ್ಗಾ ತಾಲೂಕಿನಲ್ಲಿ ಒಟ್ಟು 54,300 ಕಡತಗಳಲ್ಲಿ 36,641 ಕಡತಗಳ 9,05,242 ಪುಟ ಹಾಗೂ ಒಟ್ಟು 1,949 ವಹಿಗಳಲ್ಲಿ 708 ವಹಿಗಳ 1,67,654 ಪುಟ ಸೇರಿದಂತೆ ಒಟ್ಟು 10,72,896 ಪುಟ, ಗಂಗಾವತಿ ತಾಲೂಕಿನಲ್ಲಿ ಒಟ್ಟು 34,572 ಕಡತಗಳಲ್ಲಿ 16,138 ಕಡತಗಳ 4,45,141 ಪುಟ ಹಾಗೂ ಒಟ್ಟು 3,083 ವಹಿಗಳಲ್ಲಿ 2,104 ವಹಿಗಳ 4,58,374 ಪುಟ ಸೇರಿದಂತೆ ಒಟ್ಟು 9,03,488 ಪುಟ ಡಿಜಿಟಲೀಕರಣಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಜಿಲ್ಲೆಯ 6 ತಾಲೂಕುಗಳಲ್ಲಿ ಒಟ್ಟು 2,26,491 ಕಡತಗಳಲ್ಲಿ 1,45,378 ಕಡತಗಳ 45,31,451 ಪುಟ ಹಾಗೂ ಒಟ್ಟು 30,237 ವಹಿಗಳಲ್ಲಿ 8,927 ವಹಿಗಳ 13,05,775 ಪುಟಗಳು ಸೇರಿದಂತೆ ಒಟ್ಟು 58,37,226 ಪುಟಗಳ ದಾಖಲೆ ಡಿಜಿಟಲೀಕರಣಗೊಳಿಸಲಾಗಿದೆ. ಇನ್ನೂ ಬಾಕಿ ಉಳಿದ ಕಡತಗಳು ಹಾಗೂ ವಹಿಗಳ ಡಿಜಿಟಲೀಕರಣ ಕಾರ್ಯವು ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.ಕಾರಟಗಿಯನ್ನು ಸರ್ಕಾರವು 2024ರಲ್ಲಿ ತಾಲೂಕನ್ನಾಗಿ ಪರಿಗಣಿಸಿ ಡಿಜಿಟಲೀಕರಣ ಮಾಡುವ ಕಾರ್ಯಕ್ಕೆ ಆದೇಶ ನೀಡಿತ್ತು. ಅದರಂತೆ ರಾಜ್ಯದಲ್ಲಿ ಮೊದಲನೆಯದಾಗಿ ಕಾರಟಗಿ ತಾಲೂಕಿನ ಎಲ್ಲ ದಾಖಲೆಗಳ ಡಿಜಿಟಲೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. 42,688 ಕಡತಗಳ 7,95,700 ಪುಟ ಹಾಗೂ ಒಟ್ಟು 4,361 ವಹಿಗಳ 6,74,774 ಪುಟ ಸೇರಿದಂತೆ ಒಟ್ಟು 14,70,474 ಪುಟಗಳ ಡಿಜಿಟಲೀಕರಣ ಕಾರ್ಯ ಪೂರ್ಣಗೊಂಡಿದೆ. ಜಿಲ್ಲೆಯಾದ್ಯಂತ ಈ ವರೆಗೆ ಎಲ್ಲ ತಾಲೂಕುಗಳ ಒಟ್ಟು 73,07,700 ಪುಟ ಡಿಜಿಟಲೀಕರಣಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.ಈ ವರೆಗೆ ಡಿಜಿಟಲೀಕರಣಗೊಂಡ ಕಡತ ಮತ್ತು ವಹಿಗಳಲ್ಲಿನ ದಾಖಲೆಗಳ ನಕಲುಗಳನ್ನು ಸಾರ್ವಜನಿಕರು https://recordroom.karnataka.gov.in/ERECORDROOM/ ತಂತ್ರಾಂಶದ ಮೂಲಕ ನಿಗದಿತ ಶುಲ್ಕ ಪಾವತಿಸಿ ದಾಖಲೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.