ಕೆರೆಕಟ್ಟೆ ನಿರ್ಮಿಸಿದ ಸರದಾರ ಕೆಂಪೇಗೌಡ್ರು ನಾಡಿದ ಮನೆ ಮನದ ಪ್ರಭು: ಚಂದ್ರಮೋಹನ್

KannadaprabhaNewsNetwork |  
Published : Jun 28, 2025, 12:18 AM IST
27ಕೆಎಂಎನ್ ಡಿ29 | Kannada Prabha

ಸಾರಾಂಶ

ಯಲಹಂಕವನ್ನು ಬೆಂದಕಾಳೂರಾಗಿಸಿ ನಗರಕಟ್ಟಿ, 347 ದೊಡ್ಡಕೆರೆ, 1200 ಕ್ಕೂ ಹೆಚ್ಚು ಸಣ್ಣಕೆರೆಕಟ್ಟೆ, ಕಲ್ಯಾಣಿ ನಿರ್ಮಿಸಿದರು. ಗಿಡಮರ ನೆಟ್ಟು ಉದ್ಯಾನನಗರಿಯಾಗಿಸಿದರು. ಯಲಹಂಕ ನಗರಕ್ಕೆ ಸೇರಿದ್ದ ಗ್ರಾಮವನ್ನು ಬೆಂಗಳೂರು ನಗರವಾಗಿಸಿದರು. ವರ್ತಕ, ವೃತ್ತಿ ಕಸುಬಿನ ಆಧಾರದಲ್ಲಿ 64 ವಿವಿಧ ಪೇಟೆ ನಿರ್ಮಿಸಿದರು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಜೀವ ಸಂಕುಲದ ಉಸಿರಾದ ಕೆರೆಕಟ್ಟೆ ನಿರ್ಮಾತೃ ಕೆಂಪೇಗೌಡರು ನಾಡಿನ ಮನೆ ಮನದ ಪ್ರಭುವಾಗಿದ್ದಾರೆ ಎಂದು ವಿಶ್ರಾಂತ ಪ್ರಾಂಶುಪಾಲ ಚಂದ್ರಮೋಹನ್ ತಿಳಿಸಿದರು.

ಪಟ್ಟಣದ ಹಳೆ ಬಸ್‌ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಗೆಳೆಯರ ಬಳಗ ಏರ್ಪಡಿಸಿದ್ದ ಕೆಂಪೇಗೌಡರ ಜಯಂತಿಯಲ್ಲಿ ಮಾತನಾಡಿ, ವಿಜಯನಗರದ ಸಾಮಂತ ದೊರೆಗಳಲ್ಲಿ ಅತ್ಯಂತ ಪ್ರಭಾವಿ, ಪರಾಕ್ರಮಿ, ಜನರ ನಾಡಿಮಿಡಿತ, ಆರ್ಥಿಕ ನೀತಿ ತಿಳಿದ ಪಾಳೇಗಾರರು ಕೆಂಪೇಗೌಡರು. ತಮ್ಮ 50 ವರ್ಷದ ಆಡಳಿತಾವಧಿಯಲ್ಲಿ ಅಚ್ಚಳಿಯದೆ ಉಳಿಯುವ ಜನೋಪಯೋಗಿ ಕೆಲಸ ಮಾಡಿ ನಾಡಿನ ಮನೆ ಮನದ ಪ್ರಭುವಾಗಿದ್ದಾರೆ ಎಂದರು.

ಯಲಹಂಕವನ್ನು ಬೆಂದಕಾಳೂರಾಗಿಸಿ ನಗರಕಟ್ಟಿ, 347 ದೊಡ್ಡಕೆರೆ, 1200 ಕ್ಕೂ ಹೆಚ್ಚು ಸಣ್ಣಕೆರೆಕಟ್ಟೆ, ಕಲ್ಯಾಣಿ ನಿರ್ಮಿಸಿದರು. ಗಿಡಮರ ನೆಟ್ಟು ಉದ್ಯಾನನಗರಿಯಾಗಿಸಿದರು. ಯಲಹಂಕ ನಗರಕ್ಕೆ ಸೇರಿದ್ದ ಗ್ರಾಮವನ್ನು ಬೆಂಗಳೂರು ನಗರವಾಗಿಸಿದರು. ವರ್ತಕ, ವೃತ್ತಿ ಕಸುಬಿನ ಆಧಾರದಲ್ಲಿ 64 ವಿವಿಧ ಪೇಟೆ ನಿರ್ಮಿಸಿದರು ಎಂದು ಸ್ಮರಿಸಿದರು.

ರಾಜಾಳ್ವಿಕೆಯಲ್ಲಿ ಪಾಳೇಗಾರರಾಗಿ ಕೋಟೆ, ಪೇಟೆ, ಕೆರೆ, ಕೊತ್ತಲ, ಗುಡಿ, ಗೋಪುರ, ಉದ್ಯಾನವನ ನಗರ ನಿರ್ಮಿಸಿದ ಏಕೈಕ ಪ್ರಭು. ನಗರ ಸುರಕ್ಷತೆಗೆಕೋಟೆ ನಿರ್ಮಾಣಕ್ಕೆ ಮುಂದಾದರು. ಸಾವನದುರ್ಗಕೋಟೆ, ಉತ್ತರದುರ್ಗದ ಕೋಟೆ, ಮಾಗಡಿ ಕೋಟೆ, ನೆಲಪಟ್ಟಣ, ಹುಲಿದುರ್ಗ ಕೋಟೆ, ರಾಮದುರ್ಗ ಕೋಟೆ ಕಟ್ಟಿಸಿದ ನಾಡಿನ ಸರದಾರ ಎಂದು ನುಡಿದರು.

ವಿವಿಧ ಕ್ಷೇತ್ರದ ಸೇವಾ ಗಣ್ಯರಾದ ಸಿಪಾಯಿ ವೆಂಕಟೇಶ್, ನೈಸರ್ಗಿಕ ಕೃಷಿಕ ಹೊನ್ನೇಗೌಡ, ನಲ್ಲಿಕೃಷ್ಣ, ದೇಸಿ ಗೋವು ಸಂರಕ್ಷಕ ಶಿಕ್ಷಕ ಜಯರಾಂ, ಪೋಸ್ಟ್ ಶ್ರೀನಿವಾಸ, ಶಿಕ್ಷಕ ಎಸ್.ಎಂ.ಬಸವರಾಜು ಅವರನ್ನು ಗೌರವಿಸಲಾಯಿತು. ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಪಟಾಕಿ ಸಿಡಿಸಿ, ಸಿಹಿ ಹಂಚಲಾಯಿತು.

ಈ ವೇಳೆ ಕೆಪಿಸಿಸಿ ಸದಸ್ಯ ಸುರೇಶ್, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಪ್ರಭಾಕರ್, ಮುಖಂಡರಾದ ಕಾಯಿ ಮಂಜೇಗೌಡ, ಕಾಯಿ ಸುರೇಶ್, ಕೆ.ವೈ.ಹರೀಶ್, ಮಧುಕರ್, ಕೆ.ಜಿ.ಪುಟ್ಟರಾಜು, ತಮ್ಮಣ್ಣ, ಪುನೀತ್, ಮಂಜು, ಸತ್ಯ, ಭಾರತೀಪುರ ಪುಟ್ಟಣ್ಣ, ಕಡಹೆಮ್ಮಿಗೆ ರಮೇಶ್, ಗ್ಯಾಸ್ ಶ್ರೀನಾಥ್, ಮಾದಾಪುರ ರಾಮಕೃಷ್ಣೇಗೌಡ, ಎಲ್.ಪಿ.ನಂಜಪ್ಪ, ಸಿಪಾಯಿ ಲೋಕೇಶ್, ವೆಂಕಟೇಶ್, ಕೆ.ವಿ.ಅರುಣ ಕುಮಾರ್, ಕೆ.ಟಿ.ಪರಮೇಶ್, ವಡ್ರಳ್ಳಿ ರವಿ, ಉಮೇಶ್, ಶೇಖರ್, ಜಯರಾಂ, ಚಂದ್ರೇಗೌಡ, ರಘು, ಶಿಕ್ಷಕ ಎಸ್.ಎಂ.ಬಸವರಾಜು, ಎಲ್.ಎಸ್.ಧರ್ಮಪ್ಪ, ಅಕ್ಷಯ್, ಐನೋರಹಳ್ಳಿ ಮಲ್ಲೇಶ್, ಮಂಜೇಗೌಡ, ಜಾಣೇಗೌಡ, ನಾಗರಾಜು, ಮಹದೇವು ಇದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌