ಹಾನಗಲ್ಲ: ಕಂದಾಯ ಇಲಾಖೆ ರೈತರ ಪಾಲಿಗೆ ಉರುಳಾಗುತ್ತಿದ್ದು, ದಾಖಲೆಗಳನ್ನು ರೈತರ ಜಮೀನಿನ ದಾಖಲೆಗಳನ್ನು ಅಧಿಕಾರಿಗಳು ಮನ ಬಂದಂತೆ ಬದಲಾಯಿಸಿ ರೈತರನ್ನು ಗೋಳು ಹಾಕಿಸಿಕೊಳ್ಳುತ್ತಿದ್ದಾರೆ. ವಿದ್ಯುತ್ ಇಲಾಖೆ ಸಮಸ್ಯೆಗಳ ಆಗರವಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ಶಿವಪೂಜಿ ಕಿಡಿ ಕಾರಿದರು.
ನೂತನ ತಾಲೂಕು ಅಧ್ಯಕ್ಷ ಬಸವಣ್ಣೆಯ್ಯ ಸಾಲಿಮಠ ಮಾತನಾಡಿ, ಅನ್ನದಾತನ ಪಾಲಿಗೆ ಸರಕಾರದ ಇಲಾಖೆಗಳು ಇಲ್ಲದಂತಾಗಿವೆ. ಬೆಳೆ ವಿಮೆ, ಬೆಳೆ ಪರಿಹಾರಗಳು ಸಕಾಲಕ್ಕೆ ದಕ್ಕುವುದಿಲ್ಲ. ರೈತರು ಸರಕಾರಿ ಕಚೇರಿಗಳಿಗೆ ಅಲೆದಾಡಿ ಕೆಲಸವಾಗದೆ ಹಿಡಿಶಾಪ ಹಾಕುವಂತಾಗಿದೆ. ಈಗ ನಮ್ಮ ಸಂಘಟನೆ ರೈತರ ಸಮಸ್ಯೆಗಳಿಗೆ ಹೋರಾಡಲು ಬದ್ಧವಾಗಿದ್ದು, ಎಲ್ಲರೂ ಒಟ್ಟಾಗಿ ನಮ್ಮ ಹಕ್ಕುಗಳನ್ನು ಪಡೆಯಲು ಮುಂದಾಗೋಣ ಎಂದು ರೈತ ಬಂಧುಗಳಿಗೆ ಮನವಿ ಮಾಡಿದರು.
ಸಭೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ, ಮಾಜಿ ತಾಲೂಕು ಅಧ್ಯಕ್ಷ ರಾಮಣ್ಣ ಹವಳಣ್ಣನವರ, ಜಿಲ್ಲಾ ಉಪಾಧ್ಯಕ್ಷ ಸುನೀಲಕುಮಾರ ಬಂಕಾಪೂರ, ಜಿಲ್ಲಾ ಕಾರ್ಯದರ್ಶಿ ಮಹದೇವಪ್ಪ ತಾವರಗೊಪ್ಪ, ಧಾರವಾಡ ಜಿಲ್ಲಾ ಉಪಾಧ್ಯಕ್ಷ ಗುರುನಾಥಗೌಡ, ನಾಗಣ್ಣ ಬೆಳ್ಳಿಗಟ್ಟಿ, ಕಾರ್ಯದರ್ಶಿ ಗುರು ಖೀರನವರ ಮೊದಲಾದವರು ಇದ್ದರು.ಪದಾಧಿಕಾರಿಗಳು: ಬಸವಣ್ಣೆಯ್ಯ ಸಾಲಿಮಠ (ಅಧ್ಯಕ್ಷ ), ನಾಗರಾಜ ಜಾಡರ, ಮಲ್ಲನಗೌಡ ಪಾಟೀಲ ( ಉಪಾಧ್ಯಕ್ಷರು ), ಮಾಲತೇಶ ನಿಂಬನಗೌಡರ (ಕಾರ್ಯದರ್ಶಿ), ಉಮೇಶ ಸಾಗರವಳ್ಳಿ (ಸಹಕಾರ್ಯದರ್ಶಿ), ಪ್ರಮೋದ ಹೆಬ್ಬಳ್ಳಿ (ಯುವಪ್ರಮುಖ), ವೀರೇಶ ಕಾಡಪ್ಪನವರ, ಯೋಗೇಶ ಪಾಟೀಲ, ಪುಟ್ಟರಾಜ ಬೇಲೂರ, ವೀರೇಶ ಬಾಳಂಬೀಡ, ಶಿವಾಜಪ್ಪ ಮದ್ದಾನಿ, ಡಾ. ಅಶೋಕ ಯಮನೂರ, ನಂದೀಶ ತೊಗರಳ್ಳಿ, ಯಲ್ಲನಗೌಡ ಹೊಳಲಪ್ಪನವರ, ಪ್ರಶಾಂತ ಸಾಬರದ, ಮಂಜುನಾಥ ತಿಪ್ಲಾಪೂರ, ನಿಂಗಪ್ಪ ಹುಡೇದವರ ನಿರ್ದೇಶಕರಾಗಿದ್ದಾರೆ.