ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಗಣೇಶೋತ್ಸವ ಸಮಿತಿ ಅಧ್ಯಕ್ಷ ಜನಾರ್ದನ್ ರಾವ್ ಪಾಡಿಮನೆ ವಹಿಸಿದ್ದರು. ಉದ್ಯಮಿ ಭಾಸ್ಕರ್ ಎಸ್. ಕೋಟ್ಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಶ್ರೀ ಕ್ಷೇತ್ರ ಹೊಯ್ಪಾಲ ಬೆಟ್ಟ ಅನುವಂಶೀಯ ಮೊಕ್ತೇಸರ ರಾಜೇಶ್ ಬಲ್ಲಾಳ್, ವಿಶ್ರಾಂತ ಮುಖ್ಯ ಅಧ್ಯಾಪಕ ನೋರ್ಬಟ್ ಪಿರೇರಾ, ಎಸ್.ಕೆ.ಎಫ್. ನಿರ್ದೇಶಕರಾದ ಪ್ರಜ್ವಲ್ ಆಚಾರ್, ಜ್ಞಾನವಿಕಾಸ ಸಂಯೋಜಕಿ ವಿದ್ಯಾ, ಮೂಡ ಅಧ್ಯಕ್ಷ ಹರ್ಷವರ್ಧನ್ ಪಡಿವಾಳ್, ಚಂದ್ರಹಾಸ್ ಸನಿಲ್, ರಾಯರ ಮನೆ ಹೇಮರಾಜ ರಾವ್ ಅತಿಥಿಗಳಾಗಿ ಭಾಗವಹಿಸಿದ್ದರು.ಶನೀಶ್ವರ ಪೂಜಾ ಸಮಿತಿ ಅಧ್ಯಕ್ಷ ರಮೇಶ್ ಶೆಟ್ಟಿ ಪಣರೊಟ್ಟು, ವಿಘ್ನೇಶ್ವರ ಫ್ರೆಂಡ್ಸ್ ಅಧ್ಯಕ್ಷ ಆಶಿಸ್ ಕುಮಾರ್, ಭಜನಾ ಮಂಡಳಿ ಅಧ್ಯಕ್ಷ ರಾಘು ಜಾರಿಗೆದಡಿ, ಮಹಿಳಾ ಮಂಡಳಿ ಅಧ್ಯಕ್ಷ ಸುರೇಖಾ, ಫ್ರೆಂಡ್ಸ್ ಅಧ್ಯಕ್ಷ ಸುಧಾಕರ್, ಚೇತನ ಯುವಕ ಮಂಡಲ ಅಧ್ಯಕ್ಷ ನಾಗೇಶ್ ಆಚಾರ್ಯ, ಭಜನಾ ಮಂಡಳಿ ಪ್ರಧಾನ ಅರ್ಚಕ ಓಬಯ ಸುವರ್ಣ ವೇದಿಕೆಯಲ್ಲಿದ್ದರು.
ಗೌರವಾಧ್ಯಕ್ಷ ದೇವರಾಜ್ ಸುವರ್ಣ ಪೊಸಲಾಯಿ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಮೋದ್ ಕರ್ಕೇರ ವರದಿ ಮಂಡಿಸಿದರು. ಸಂಚಾಲಕ ನವೀನ್ ಬಂಗೇರ ನಿರೂಪಿಸಿದರು. ಹರಿದೀಪ್ ಬಿಲ್ಲುಗುಡ್ಡೆ ದಾನಿಗಳ ಪಟ್ಟಿ ವಾಚಿಸಿದರು. ಸಂತೋಷ, ಅನಿಲ್ ಅಂಚನ್ ಸನ್ಮಾನ ಪತ್ರ ಓದಿದರು. ಕೋಶಾಧಿಕಾರಿ ಸುಜಿತ್ ವಂದಿಸಿದರು.