ವಾಣಿಜ್ಯ ಮಳಿಗೆಗಳಿಂದ ನಗರಸಭೆಗೆ ಆದಾಯ: ಬಾಲಕೃಷ್ಣ

KannadaprabhaNewsNetwork |  
Published : Nov 27, 2026, 02:00 AM IST
ಫೋಟೋ: 25 ಹೆಚ್ ಎಸ್‌ಕೆ 4ಹೊಸಕೋಟೆ ನಗರಸಭೆಗೆ ಬೇಟಿ ನೀಡಿದ ಸಚಿವ ಮಾಗಡಿ ಬಾಲಕೃಷ್ಣ ರವರು ನಗರಸಭೆ ಆಯುಕ್ತರಿಂದ ಮಾಹಿತಿ ಪಡೆದರು. | Kannada Prabha

ಸಾರಾಂಶ

ಹೊಸಕೋಟೆ: ದಶಕಗಳಷ್ಟು ಹಳೆಯದಾದ ನಗರಸಭೆ ವಾಣಿಜ್ಯ ಕಟ್ಟಡಗಳನ್ನು ತೆರವುಗೊಳಿಸಿ ಅವುಗಳ ಜಾಗದಲ್ಲಿ ನೂತನ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿ, ಬಾಡಿಗೆಗೆ ನೀಡುವುದರಿಂದ ನಗರಸಭೆಯ ಆದಾಯ ಗಣನೀಯವಾಗಿ ಹೆಚ್ಚಿಸಿಕೊಳ್ಳಬಹುದು, ಇದಕ್ಕೆ ಕೇಂದ್ರ ಸರ್ಕಾರ ಶೇ.25ರಷ್ಟು ಅನುದಾನ ಹಾಗೂ ರಾಜ್ಯ ಸರ್ಕಾರವೂ ಅನುದಾನ ನೀಡಲಿದೆ ಎಂದು ಪೌರಾಡಳಿತ ಇಲಾಖೆ ಸಚಿವ ಎಚ್‌.ಸಿ.ಬಾಲಕೃಷ ತಿಳಿಸಿದರು

ಹೊಸಕೋಟೆ: ದಶಕಗಳಷ್ಟು ಹಳೆಯದಾದ ನಗರಸಭೆ ವಾಣಿಜ್ಯ ಕಟ್ಟಡಗಳನ್ನು ತೆರವುಗೊಳಿಸಿ ಅವುಗಳ ಜಾಗದಲ್ಲಿ ನೂತನ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿ, ಬಾಡಿಗೆಗೆ ನೀಡುವುದರಿಂದ ನಗರಸಭೆಯ ಆದಾಯ ಗಣನೀಯವಾಗಿ ಹೆಚ್ಚಿಸಿಕೊಳ್ಳಬಹುದು, ಇದಕ್ಕೆ ಕೇಂದ್ರ ಸರ್ಕಾರ ಶೇ.25ರಷ್ಟು ಅನುದಾನ ಹಾಗೂ ರಾಜ್ಯ ಸರ್ಕಾರವೂ ಅನುದಾನ ನೀಡಲಿದೆ ಎಂದು ಪೌರಾಡಳಿತ ಇಲಾಖೆ ಸಚಿವ ಎಚ್‌.ಸಿ.ಬಾಲಕೃಷ ತಿಳಿಸಿದರು.ನಗರಸಭೆ ಕಚೇರಿಗೆ ದಿಢೀರನೆ ಭೇಟಿ ನೀಡಿದ ಸಚಿವರು, ನಗರಸಭೆ ಕಚೇರಿಯ ಕಾರ್ಯವೈಖರಿ ಆಡಳಿತ ಯಂತ್ರವನ್ನು ಪರಿಶೀಲಿಸಿ, ಕಚೇರಿಯಲ್ಲಿ ನಗರಸಭೆ ಆಯುಕ್ತರು ಹಾಗೂ ಎಂಜಿನಿಯರ್ ಆಸನಗಳು ಖಾಲಿ ಇರುವುದನ್ನು ಕಂಡು, ನಗರಸಭೆ ವ್ಯವಸ್ಥಾಪಕರನ್ನು ಕರೆಸಿ ಮಾಹಿತಿ ಪಡೆದು ಅಧಿಕಾರಿಗಳು ಬೇರೆಡೆಗೆ ತೆರಳಿದ್ದರೆ ''''''''ಮೂಮೆಂಟ್ ರಿಜಿಸ್ಟರ್''''''''ನಲ್ಲಿ ಏಕೆ ದಾಖಲಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ನಗರಾಯುಕ್ತರು ಪ್ರತಿದಿನ ಮಧ್ಯಾಹ್ನ 3 ರಿಂದ ಸಂಜೆ 5.30ರವರೆಗೆ ಕಡ್ಡಾಯವಾಗಿ ಕಚೇರಿಯಲ್ಲಿದ್ದು ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಬೇಕು. ಅನಿವಾರ್ಯ ಕಾರಣಗಳಿಂದ ಕಚೇರಿಯಲ್ಲಿ ಲಭ್ಯವಿಲ್ಲದಿದ್ದರೆ, ಒಂದು ದಿನ ಮುಂಚಿತವಾಗಿಯೇ ಸೂಚನಾ ಫಲಕದಲ್ಲಿ ಮಾಹಿತಿ ಪ್ರಕಟಿಸಿ ಸಾರ್ವಜನಿಕರಿಗೆ ತಿಳಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಸಚಿವರಿಗೆ ಮಾಹಿತಿ ನೀಡಿದ ನಗರಸಭೆ ಆಯುಕ್ತ ಗಂಗಾಧರ್, ನೆಲಮಂಗಲ ಹಾಗೂ ಹೊಸಕೋಟೆ ಈ ಎರಡೂ ನಗರಸಭೆಗಳನ್ನು ನಿಭಾಯಿಸುವ ಜವಾಬ್ದಾರಿ ಇದ್ದ ಕಾರಣ ಇಂದು ನೆಲಮಂಗಲದಲ್ಲಿ ಇ ಖಾತೆ ಆಂದೋಲನ ಆಯೋಜಿಸಿದ್ದ ಕಾರಣಕ್ಕೆ ನೆಲಮಂಗಲದಲ್ಲಿ ಕಾರ್ಯ ನಿರ್ವಹಿಸುತಿದ್ದೆ. ಮಧ್ಯಾಹ್ನ ಜಿಲ್ಲಾಧಿಕಾರಿಗಳ ಭೇಟಿ ಸಂದರ್ಭದಲ್ಲಿ ಸಚಿವರು ಹೊಸಕೋಟೆಗೆ ಬಂದಿರುವ ಮಾಹಿತಿ ದೊರೆತು ಕೂಡಲೆ ಬಂದಿರುವುದಾಗಿ ತಿಳಿಸಿ, ಇದೇ ವಾರದಲ್ಲಿ ಹೊಸಕೋಟೆಯಲ್ಲಿಯೂ ಇ-ಖಾತೆ ಆಂದೋಲನ ಮಾಡುವುದಾಗಿ ತಿಳಿಸಿದರು.

ಫೋಟೋ: 25 ಹೆಚ್ ಎಸ್‌ಕೆ 4

ಹೊಸಕೋಟೆ ನಗರಸಭೆಗೆ ಬೇಟಿ ನೀಡಿದ ಸಚಿವ ಮಾಗಡಿ ಬಾಲಕೃಷ್ಣ ರವರು ನಗರಸಭೆ ಆಯುಕ್ತರಿಂದ ಮಾಹಿತಿ ಪಡೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿತ್ತರಂಜನ್ ಬೋಳಾರ್‌ಗೆ ರಾಜ್ಯದ ಶ್ರೇಷ್ಠ ಸಾಧಕ ಪುರಸ್ಕಾರ ‘ಕರುನಾಡ ರತ್ನ’ ಪ್ರಶಸ್ತಿ
ಸೌಜನ್ಯಾ ಪ್ರಕರಣದಲ್ಲಿ ಸಿಎಂ ಡಿಕೆಶಿ ನ್ಯಾಯ ಕೊಡಿಸಬೇಕು: ತಿಮರೋಡಿ