ಕೃಷಿಯಲ್ಲಿ ಅಧ್ಯಾತ್ಮಿಕ ಚಿಂತನೆ ಇದೆ, ಕೃಷಿಯನ್ನು ಪೂಜೆ ಎಂಬಂತೆ ಮಾಡಬೇಕು ಎಂದು ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.
ಉಡುಪಿ : ಕೃಷಿಯಲ್ಲಿ ಅಧ್ಯಾತ್ಮಿಕ ಚಿಂತನೆ ಇದೆ, ಕೃಷಿಯನ್ನು ಪೂಜೆ ಎಂಬಂತೆ ಮಾಡಬೇಕು ಎಂದು ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.ಅವರು ಭಾನುವಾರ ಸಂಜೆ, ಸೋದೆ ವಾದಿರಾಜ ಮಠದ ಬಾವಿ ಪರ್ಯಾಯೋತ್ಸವದ ಬಾಳೆ ಮೂಹೂರ್ತ ಪ್ರಯುಕ್ತ ನಡೆಯುತ್ತಿರುವ ಕದಳೀ ವಿಶ್ವದರ್ಶನದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತಿದ್ದರು.
ನಮ್ಮ ದೇಶಕ್ಕೆ ಸನಾತನ ಧರ್ಮದ ಹಿನ್ನೆಲೆ ಇದೆ. ಆದ್ದರಿಂದ, ವಿಶ್ವದ ದೊಡ್ಡಣ್ಣ ಅನೇಕ ಬಿಕ್ಕಟ್ಟುಗಳಿಂದ ನರಳುತಿದ್ದರೂ, ನಮ್ಮ ದೇಶ ಇನ್ನೂ ಸುಭಿಕ್ಷವಾಗಿದೆ, ಈ ಸುಭಿಕ್ಷೆಯಲ್ಲಿ ಕೃಷಿಯ ಪಾತ್ರ ದೊಡ್ಡದಿದೆ ಎಂದ ಶ್ರೀಗಳು, ಕೃಷಿಗೆ ಬೇಡಿಕೆ ಇದೆ ಗ್ರಾಹಕರೂ ಇದ್ದಾರೆ ಎಂಬುದನ್ನು ಸೋದೆ ಶ್ರೀಗಳು ಈ ಮೇಳದ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದವರು ಶ್ಲಾಘಿಸಿದರು. ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಕಿರಣ್ ಕುಮಾರ್ ಕೊಡ್ಗಿ ಅವರು ಭಾಗವಹಿಸಿದರು.
ಕಲಾವಿದ ಕರಣ್ ಆಚಾರ್ಯ ರಚಿಸಿದ ವಾದಿರಾಜರ ಮತ್ತು ಭೂತರಾಜರ ತೈಲವರ್ಣ ಕಲಾಕೃತಿಗಳನ್ನು ಅನಾವರಣಗೊಳಿಸಲಾಯಿತು.
ಉಪನ್ಯಾಸ: ಇದಕ್ಕೆ ಮೊದಲು ಎಲ್ಲಾಪುರದ ಬಾಳೆ ತಳಿ ಸಂಗ್ರಹಕ - ಕೃಷಿಕ ಪ್ರಸಾದ್ ರಾಮ್ ಅವರು ಬಾಳು ಬೆಳಗಿಸುವ ಬಾಳೆ ಮತ್ತು ಮೈಸೂರಿನ ನವೀನ್ ಕುಮಾರ್ ಎಚ್. ಎಂ. ಅವರು ಬಾಕಾಹು - ಕೃಷಿಯಿಂದ ಕೈಗಾರಿಕೆಯ ಕ್ರಾಂತಿಯ ಕಥೆ ಎಂಬ ಬಗ್ಗೆ ಉಪನ್ಯಾಸ ನೀಡಿದರು. ನಾರಾಯಣ ಹೆಗಡೆ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.