ರಬಕವಿ-ಬನಹಟ್ಟಿ: ರಬಕವಿ-ಮಹಾಲಿಂಗಪುರ ರಸ್ತೆ ಮಧ್ಯೆ ಕವಟಿ ತೋಟದ ಬಳಿ ನ.೧೯ರಂದು ಅಪಘಾತದಲ್ಲಿ ಗಾಯಗೊಂಡಿದ್ದ ರಬಕವಿಯ ಪ್ರಶಾಂತ ಯಶವಂತ ಗೊಲಬಾವಿ (20) ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ರಬಕವಿ-ಬನಹಟ್ಟಿ: ರಬಕವಿ-ಮಹಾಲಿಂಗಪುರ ರಸ್ತೆ ಮಧ್ಯೆ ಕವಟಿ ತೋಟದ ಬಳಿ ನ.೧೯ರಂದು ಕೆಲಸ ಮುಗಿಸಿ ಮನೆಗೆ ಮರಳುವ ವೇಳೆ ನಡೆದ ರಸ್ತೆ ಅಪಘಾತದಲ್ಲಿ ತಲೆಗೆ ಬಲವಾದ ಪೆಟ್ಟು ಬಿದ್ದು ರಬಕವಿಯ ಪ್ರಶಾಂತ ಯಶವಂತ ಗೊಲಬಾವಿ (20) ಗಂಭೀರ ಗಾಯಗೊಂಡಿದ್ದ. ತಕ್ಷಣ ಮಹಾಲಿಂಗಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿಯ ಬೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನ.೨೮ರಂದು ಪ್ರಶಾಂತ ಕೊನೆಯುಸಿರೆಳೆದಿದ್ದಾರೆ. ಬನಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರಿಗೆ ಯುವಕ ತಂದೆ, ತಾಯಿ, ಓರ್ವ ಸಹೋದರ, ಸಹೋದರಿ ಇದ್ದಾರೆ.