ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ಸ್ ಇಂಟರ್‌ನ್ಯಾಷನಲ್ ವತಿಯಿಂದ ಪ್ರಾಂತೀಯ ಕ್ಲಬ್ ಗಳ ಪರಿಶೀಲನಾ ಸಭೆಯು ಉಡುಪಿಯ ಕಾರ್ತಿಕ್ ಎಸ್ಟೇಟ್ ಹಾಲ್ ನಲ್ಲಿ ಆ. 10ರಂದು ನಡೆಯಿತು.
ಹೆಬ್ರಿ: ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ಸ್ ಇಂಟರ್‌ನ್ಯಾಷನಲ್ ವತಿಯಿಂದ ಪ್ರಾಂತೀಯ ಕ್ಲಬ್ ಗಳ ಪರಿಶೀಲನಾ ಸಭೆಯು ಉಡುಪಿಯ ಕಾರ್ತಿಕ್ ಎಸ್ಟೇಟ್ ಹಾಲ್ ನಲ್ಲಿ ಆ. 10ರಂದು ನಡೆಯಿತು.ಅಲಯನ್ಸ್ ಕ್ಲಬ್ ಗಳ ಪದಾಧಿಕಾರಿಗಳು ಏಪ್ರಿಲ್ ನಿಂದ ಜುಲೈ ತನಕದ ಪ್ರಗತಿ ವರದಿಯನ್ನು ಮಂಡಿಸಿದರು. ಜಿಲ್ಲಾ ಅಲಯನ್ಸ್ ಕ್ಲಬ್ ನ ಪ್ರಾಂತೀಯ ಅಧ್ಯಕ್ಷ ಅಲೈ ಡಾ. ಸಂತೋಷ ಕುಮಾರ್ ಬೈಲೂರ್ ಅವರು ಒಂದು ಮತ್ತು ಎರಡು ವಲಯದ ಕ್ಲಬ್ ಗಳ ಪದಾಧಿಕಾರಿಗಳು ಮಂಡಿಸಿದ ಸಮಾಜ ಸೇವಾ ಕಾರ್ಯ ಚಟುವಟಿಕೆಗಳ ವರದಿಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸದಸ್ಯತ್ವ ಶುಲ್ಕದ ಸಂಗ್ರಹಣೆ, ಹೊಸ ಸದಸ್ಯರ ಸೇರ್ಪಡೆ, ಎಲ್ಲ ಕ್ಲಬ್ ಗಳು ಒಂದೊಂದು ಹೊಸ ಕ್ಲಬ್ ಗಳನ್ನು ಮಾಡುವತ್ತ ಗಮನ ಹರಿಸಬೇಕು. ಪ್ರತಿ ತಿಂಗಳ 5ನೇ ತಾರೀಕಿನೊಳಗೆ ಪ್ರಗತಿಯ ವರದಿ ಒಪ್ಪಿ ಸುವ ಬಗ್ಗೆ ಅವರು ಸಲಹೆ, ಸೂಚನೆ ನೀಡಿದರು.
ಅಲಯನ್ಸ್ ಕ್ಲಬ್ ಚಿಟ್ಪಾಡಿ, ಮಂಗಳೂರು, ಅಂಬಲ್ಪಾಡಿ, ಉಡುಪಿ ರಾಯಲ್, ಕಡೆಕಾರ್, ಕೋಟ ಬ್ರಹ್ಮಾವರ, ಹೆಬ್ರಿ, ಹೆಬ್ರಿ ಸಿಟಿ, ಮೊದಲಾದ ವಲಯ ಒಂದು ಮತ್ತು ಎರಡರ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ, ಉಪಾಧ್ಯಕ್ಷರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಐಪಿಡಿಜಿ ಸುನಿಲ್ ಸಾಲಿಯಾನ್, ದ್ವಿತೀಯ ವಿಡಿಜಿ ಡಾ. ಅಶೋಕ್ ಕುಮಾರ್ ವೈ.ಜಿ. ಮಾತನಾಡಿ, ಸಲಹೆ ಸೂಚನೆ ನೀಡಿದರು. ಜಿಲ್ಲಾ ಚೀಫ್ ಕೋರ್ಡಿನೇಟರ್ ಸುದರ್ಶನ್ ಹೆಗ್ಡೆ ಅನಿಸಿಕೆ ವ್ಯಕ್ತಪಡಿಸಿದರು. ಜಿಲ್ಲಾ ಸಂಪುಟ ಕಾರ್ಯದರ್ಶಿ ಕೆ. ರಾಮಚಂದ್ರ ಭಟ್ ಅವರು ಅಲಯನ್ಸ್ ಕ್ಲಬ್ ಗಳ ಕಾರ್ಯನಿರ್ವಹಣೆ, ಹೊಸ ಕ್ಲಬ್ ಗಳ ಸ್ಥಾಪನೆ, ಆಜೀವ ಸದಸ್ಯರನ್ನಾಗಿ ಮಾಡುವ ಬಗ್ಗೆ, ತಿಂಗಳ ರಿಪೋರ್ಟ್ ನೀಡುವ ಬಗ್ಗೆ ಮಾತನಾಡಿದರು.ವಲಯ ಒಂದರ ವಲಯ ಅಧ್ಯಕ್ಷ ಡಾ. ಗಾಯತ್ರಿ ಸ್ವಾಗತಿಸಿದರು. ಜಿಲ್ಲಾ ಚೀಫ್ ಕೋಆಡಿನೇಟರ್ ಕೆ. ಜಯರಾಮ ಆಚಾರ್ಯ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.