ಫ.ಗು.ಹಳಕಟ್ಟಿರಿಂದ ವಚನ ಸಾಹಿತ್ಯ ಮರು ಹುಟ್ಟು: ಕುಲಪತಿ ಡಾ.ಹೂವಿನಭಾವಿ

KannadaprabhaNewsNetwork |  
Published : Jul 07, 2025, 11:48 PM IST
ಫೋಟೋ- ಹಲಕಟ್ಟಿ ಮತ್ತು ಹಲಕಟ್ಟಿ  | Kannada Prabha

ಸಾರಾಂಶ

ವಚನ ಸಂಶೋಧನಾ ಪಿತಾಮಹ ಡಾ.ಫ ಗು ಹಳಕಟ್ಟಿ ಅವರ ಪರಿಶ್ರಮದಿಂದ ಬಸವಾದಿ ಶರಣರ ವಚನ ಸಾಹಿತ್ಯ ಸಂರಕ್ಷಿಸಿದ ಪರಿಣಾಮ ಅದು ಮರು ಹುಟ್ಟು ಪಡೆದುಕೊಂಡಿತು ಎಂದು ಗುವಿವಿ ಕುಲಪತಿ ಡಾ.ಬಾಬಣ್ಣ ಹೂವಿನಭಾವಿ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ವಚನ ಸಂಶೋಧನಾ ಪಿತಾಮಹ ಡಾ.ಫ ಗು ಹಳಕಟ್ಟಿ ಅವರ ಪರಿಶ್ರಮದಿಂದ ಬಸವಾದಿ ಶರಣರ ವಚನ ಸಾಹಿತ್ಯ ಸಂರಕ್ಷಿಸಿದ ಪರಿಣಾಮ ಅದು ಮರು ಹುಟ್ಟು ಪಡೆದುಕೊಂಡಿತು ಎಂದು ಗುವಿವಿ ಕುಲಪತಿ ಡಾ.ಬಾಬಣ್ಣ ಹೂವಿನಭಾವಿ ಹೇಳಿದರು.

ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಜಂಟಿಯಾಗಿ ಭಾನುವಾರ ಆಯೋಜಿಸಿದ 2025ನೇ ಸಾಲಿನ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ವಚನ ಸಾಹಿತ್ಯದಿಂದ ಕನ್ನಡ ಸಾಹಿತ್ಯ ಮತ್ತು ಸಂಸ್ಕøತಿ ಹೆಚ್ಚಿಸಿದ ಕೀರ್ತಿ ಡಾ. ಫ.ಗು. ಹಳಕಟ್ಟಿ ಅವರಿಗೆ ಸಲ್ಲುತ್ತದೆ. ಇಂಥ ಶರಣರ ಆದರ್ಶಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡರೆ, ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದರು.

ಶರಣ ಚಿಂತಕಿ ಜಯಶ್ರೀ ಚಟ್ನಳ್ಳಿ ಮಾತನಾಡಿದರು. ಯಾದಗಿರಿ ವೈದ್ಯಕೀಯ ವಿಜ್ಷಾನಗಳ ಸಂಸ್ಥೆಯ ನಿರ್ದೇಶಕ ಡಾ. ಸಂದೀಪ ಹರಷಿಣಿಗಿ, ಹೂಗಾರ ಸಮಾಜದ ಮುಖಂಡ ಸೂರ್ಯಕಾಂತ ಫುಲಾರಿ, ರಾಜೀವಗಾಂಧಿ ವಿವಿ ಸೆನೆಟ್ ಸದಸ್ಯ ಡಾ. ಅರವಿಂದ ಕಟ್ಟಿ ಮಾತನಾಡಿದರು.

ನಾಸಾ ಮತ್ತು ರಾಷ್ಟ್ರೀಯ ಬಾಹ್ಯಕಾಶ ಸಂಸ್ಥೆ ಇತ್ತೀಚೆಗೆ ನಡೆಸಿದ ಬಾಹ್ಯಕಾಶ ವಸಾಹತು ಸ್ಪರ್ಧೆಯಲ್ಲಿ ಭಾಗವಹಿಸಿ ಐತಿಹಾಸಿಕ ಗೆಲುವು ಸಾಧಿಸಿ ವಿಶ್ವದಲ್ಲಿಯೇ ಪ್ರಥಮ ಸ್ಥಾನ ಪಡೆದ ಹನ್ನೊಂದು ವಿದ್ಯಾರ್ಥಿಗಳನ್ನು ವಿಶೇಷವಾಗಿ ಸತ್ಕರಿಸಿ ಪ್ರೋತ್ಸಾಹಿಸಲಾಯಿತು.

ಜಿಲ್ಲಾ ಕಸಾಪ ದ ಕಾರ್ಯದರ್ಶಿ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಅಕಾಡೆಮಿ ಅಧ್ಯಕ್ಷ ಬಿ.ಎಂ. ಪಾಟೀಲ ಕಲ್ಲೂರ, ಸಿದ್ಧಲಿಂಗ ಜಿ ಬಾಳಿ, ಪ್ರಮುಖರಾದ ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ಧರ್ಮರಾಜ ಜವಳಿ, ನಾಗಪ್ಪ ಸಜ್ಜನ್, ಶರಣಬಸಪ್ಪ ಕೋಬಾಳ, ಪ್ರಭುಲಿಂಗ ಮೂಲಗೆ, ರವಿಕುಮಾರ ಶಹಾಪುರಕರ್, ಪ್ರಭವ ಪಟ್ಟಣಕರ್, ಶಕುಂತಲಾ ಪಾಟೀಲ, ಜ್ಯೋತಿ ಕೋಟನೂರ, ಭುವನೇಶ್ವರಿ ಹಳ್ಳಿಖೇಡ, ಆರ್ ಸಿ ಘಾಳೆ, ರಾಜಶೇಖರ ಪಾಟೀಲ ತೇಗಲತಿಪ್ಪಿ, ದಿನೇಶ ಮದಕರಿ, ರಮೇಶ ಬಡಿಗೇರ, ಶಿವಾನಂದ ಪೂಜಾರಿ, ಮಾಲಾ ದಣ್ಣೂರ, ದಾಸಿಮಯ್ಯ ವಡ್ಡನಕೇರಿ, ಸದಾಶಿವ ಮೇತರೆ, ಜಗದೇವಪ್ಪ ಅಂಜುಟಗಿ. ಅಮೃತಪ್ಪ ಅಣೂರ ಕವಿ, ಜಗನ್ನಾಥ ರಾಚೋಟಿ, ವೆಂಕಟೇಶ ಜನಾದ್ರಿ ಇತರರು ಹಾಜರಿದ್ದರು.

ಪ್ರಶಸ್ತಿ ಪುರಸ್ಕೃತರು:

ಶರಣ ಸಾಹಿತ್ಯ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ ಶರಣಾನುಯಾಯಿಗಳಾದ ವಿಶ್ವನಾಥ ಮಂಗಲಗಿ, ಅಮೃತರಾವ ಪಾಟೀಲ ಅಫಜಲಪೂರ, ಮರಿಯಪ್ಪ ಹಳ್ಳಿ ಶಹಾಬಾದ, ಡಾ. ಶಿವಲೀಲಾ ಚಟ್ನಳ್ಳಿ, ಲಕ್ಷ್ಮೀಕಾಂತ ಹುಬಳಿ, ಶಿವಲಿಂಗಪ್ಪ ಅಷ್ಟಗಿ, ಡಾ. ಗೌಸುದ್ದೀನ್ ತುಮಕೂರಕರ್, ನಾಗೇಂದ್ರಪ್ಪ ನಿಂಬರ್ಗಿ, ಸಿದ್ಧರಾಮ ಯಳವಂತಗಿ, ಕಾವೇರಿ ಎನ್ ಪಾಟೀಲ ಅವರಿಗೆ 2025ನೇ ಸಾಲಿನ ಡಾ.ಫ.ಗು.ಹಳಕಟ್ಟಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌