ಸವಾರರೇ ಹೆಲ್ಮೆಟ್ ಧರಿಸಿ, ಸಂಚಾರಿ ನಿಯಮ ಪಾಲಿಸಿ: ಶಾಸಕ ಕೆ.ಎಂ.ಉದಯ್

KannadaprabhaNewsNetwork |  
Published : May 28, 2025, 12:37 AM IST
26ಕೆಎಂಎನ್ ಡಿ18 | Kannada Prabha

ಸಾರಾಂಶ

ನೀವು ಮನೆಯಿಂದ ಹೊರ ಹೋದಾಗ ತಮಗಾಗಿ ಕುಟುಂಬಸ್ಥರು ಕಾಯುತ್ತಿರುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಸವಾರರು ಸಂಚಾರ ನಿಯಮಗಳನ್ನು ಪಾಲಿಸಿ ವಾಹನ ಚಲಾಯಿಸಬೇಕು. ಅತಿವೇಗದ ವಾಹನ ಚಲಾವಣೆ ಬೇಡ. ಇದು ಅಪಘಾತಕ್ಕೆ ಕಾರಣವಾಗುತ್ತದೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ದ್ವಿಚಕ್ರ ವಾಹನ ಚಲಾಯಿಸುವಾಗ ಪ್ರತಿಯೊಬ್ಬರು ಹೆಲ್ಮೆಟ್ ಧರಿಸಬೇಕು. ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಶಾಸಕ ಕೆ.ಎಂ.ಉದಯ್ ಸಲಹೆ ನೀಡಿದರು.

ಮದ್ದೂರು ತಾಲೂಕಿನ ಎಸ್.ಐ.ಹೊನ್ನಲಗೆರೆ ಗ್ರಾಮದಲ್ಲಿ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಹೇಶ್ ಹಾಗೂ ಪರಮೇಶ್ ಅವರ ನಿವಾಸಗಳಿಗೆ ಆಗಮಿಸಿದ ಶಾಸಕರು ಕುಟುಂಬಸ್ಥರಿಗೆ ಸಾಂತ್ವನ ಹೇಳಿ ವೈಯಕ್ತಿಕ ಪರಿಹಾರ ವಿತರಿಸಿದರು.

ವಾಹನ ಚಲಾಯಿಸುವಾಗ ಯಾರೇ ಆದರೂ ಹೆಲ್ಮೆಟ್ ಧರಿಸಿದರೆ ತಲೆಗೆ ಬೀಳುವ ಪೆಟ್ಟನ್ನು ತಪ್ಪಿಸಬಹುದು. ಇಲ್ಲದಿದ್ದರೆ ಇಂತಹ ಅನಾಹುತಗಳು ಸಂಭವಿಸಿ ಕುಟುಂಬಸ್ಥರನ್ನು ಸಂಕಷ್ಟಕ್ಕೆ ದೂಡುವಂತೆ ಮಾಡುತ್ತದೆ ಎಂದರು.

ನೀವು ಮನೆಯಿಂದ ಹೊರ ಹೋದಾಗ ತಮಗಾಗಿ ಕುಟುಂಬಸ್ಥರು ಕಾಯುತ್ತಿರುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಸವಾರರು ಸಂಚಾರ ನಿಯಮಗಳನ್ನು ಪಾಲಿಸಿ ವಾಹನ ಚಲಾಯಿಸಬೇಕು. ಅತಿವೇಗದ ವಾಹನ ಚಲಾವಣೆ ಬೇಡ. ಇದು ಅಪಘಾತಕ್ಕೆ ಕಾರಣವಾಗುತ್ತದೆ ಎಚ್ಚರಿಸಿದರು.

ಸಂಚಾರಿ ನಿಯಮಗಳ ಉಲ್ಲಂಘನೆಯಿಂದಾಗಿ ಇತ್ತೀಚಿನ ರಸ್ತೆಗಳು ಹೆಚ್ಚಾಗುತ್ತವೆ. ಆದ್ದರಿಂದ ಎಲ್ಲರೂ ಪರವಾನಗಿ, ಇನ್ಶೂರೆನ್ಸ್ , ವಾಹನ ದಾಖಲೆಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಚಲಾಯಿಸಬೇಕು ಎಂದರು.

ಈ ವೇಳೆ ಜಿಪಂ ಮಾಜಿ ಸದಸ್ಯ ಎ.ಎಸ್.ರಾಜೀವ್, ಮುಖಂಡರಾದ ಕದಲೂರು ತಿಮ್ಮೇಗೌಡ, ಯಶ್ವಂತ್ , ಇಂದ್ರಕುಮಾರ್, ನಂದೀಶ್, ಅಣ್ಣೇಸ್ವಾಮಿ, ನವೀನ್ ಕುಮಾರ್ , ಮರಿಸ್ವಾಮಿ, ಶಿವಲಿಂಗು, ಸಿದ್ದರಾಜು, ವಿಶ್ವನಾಥ್, ಮಲ್ಲೇಶ್, ಶೇಖರ್, ಮಹದೇವ ಇದ್ದರು.

ಅಪ್ರಾಪ್ತನಿಂದ ಹೆದ್ದಾರಿಯಲ್ಲಿ ಕಾರು ಚಾಲನೆ ವೇಳೆ ಪಲ್ಟಿ ಯುವಕ ಪರಾರಿ

ಶ್ರೀರಂಗಪಟ್ಟಣ: ಅಪ್ರಾಪ್ತ ಹೆದ್ದಾರಿಯಲ್ಲಿ ಕಾರು ಚಲಾಯಿಸುವಾಗ ನಿಯಂತ್ರಣ ತಪ್ಪಿ ಹೆದ್ದಾರಿ ಮಧ್ಯೆ ಪಲ್ಟಿಯಾಗುತ್ತಿದ್ದಂತೆ ಕಾರು ಬಿಟ್ಟು ಪರಾರಿಯಾಗಿರುವ ಘಟನೆ ತಾಲೂಕಿನ ಬೊಮ್ಮೂರು ಅಗ್ರಹಾರದ ಬಳಿಯ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಘಟನೆ ನೆಡದಿದೆ.

ಅಪ್ರಾಪ್ತನು ಸ್ಕಾರ್ಪಿಯೋ ಕಾರಿನಲ್ಲಿ ಮೈಸೂರು ಕಡೆಯಿಂದ ಅಜಾಗರೂಕತೆಯಿಂದ ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಬಂದಿದ್ದು, ಹಿಂಬದಿಯಿಂದ ಬರುತ್ತಿದ್ದ ವಾಹನ ಸವಾರರು ಹೈರಾಣಾಗಿದ್ದಾರೆ.

ಬೊಮ್ಮೂರು ಅಗ್ರಹಾರ ಬಳಿ ಬರುತ್ತಿದ್ದಂತೆ ನಿಯಂತ್ರಣ ತಪ್ಪ ಕಾರು ಪಲ್ಟಿಯಾಗಿದೆ. ಕಾರು ಪಲ್ಟಿಯಾಗುತ್ತಿದ್ದಂತೆ ಅಪ್ರಾಪ್ತನು ಕಾರು ಬಿಟ್ಟು ಪರಾರಿಯಾಗಿದ್ದಾರೆ. ಕಾರಿನ ಮಾಲೀಕರು ಯಾರೆಂಬುದು ಇನ್ನೂ ಪತ್ತೆಯಾಗಿಲ್ಲ. ಪಟ್ಟಣದ ಪೊಲೀಸರು ಕಾರನ್ನು ಜಪ್ತಿ ಮಾಡಿ ಠಾಣೆ ಬಳಿ ನಿಲ್ಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ