ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ಉದಯಗಿರಿ ಬಡಾವಣೆಯ ಎಂ.ಎಸ್.ರಿಷಿಕಾ ಅಂತಿಮ ಬಿಎಸ್‌ಸ್ಸಿ ಪದವೀಧರೆ.
ಶ್ರೀರಾಮಮಂದಿರ ಉದ್ಘಾಟನೆಯ ನೆನಪನ್ನು ಹಸಿರಾಗಿಡಲು ಸೀತಾ-ರಾಮರ ಚಿತ್ರ ಬಿಡಿಸುವ ಆಸೆಯಾಯಿತು. ಅಕ್ರೈಲಿಕ್ ಪೇಯಿಂಟಿಂಗ್‌ನಲ್ಲಿ ಪರಿಣತಿ ಸಾಧಿಸಿರುವ ಅವರು ೮ ಗಂಟೆ ಅವಧಿಯಲ್ಲಿ ಸುಂದರವಾಗಿ ಶ್ರೀರಾಮ-ಸೀತೆಯರ ಚಿತ್ರವನ್ನು ಬಿಡಿಸಿದ್ದಾರೆ. ವನವಾಸದ ವೇಳೆ ಸೂರ್ಯೋದಯ ಕಾಲದಲ್ಲಿ ಶ್ರೀ ರಾಮ-ಸೀತೆ ವಿರಮಿಸುತ್ತಿದ್ದ ಸಂದರ್ಭದಲ್ಲಿ ಶ್ರೀರಾಮ ತನ್ನ ಮಡದಿ ಸೀತಾದೇವಿಗೆ ಹೂ ಮುಡಿಸುತ್ತಿರುವ ಚಿತ್ರ ರಿಷಿಕಾ ಅವರ ಕೈಯಲ್ಲಿ ಸುಂದರವಾಗಿ ಮೂಡಿಬಂದಿದೆ.ಕೇಕ್‌ನಲ್ಲಿ ಅರಳಿದ ಶ್ರೀರಾಮಮಂದಿರ..!ಮಂಡ್ಯ: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಶ್ರೀಬಾಲರಾಮ ಪ್ರತಿಷ್ಠಾಪನೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಮಭಕ್ತರು ವಿಶಿಷ್ಟ ರೀತಿಯಲ್ಲಿ ಶ್ರೀರಾಮನ ಮೇಲಿನ ಭಕ್ತಿಯನ್ನು ತೋರ್ಪಡಿಸುತ್ತಿದ್ದಾರೆ. ನಗರದ ಬೇಕ್ ಪಾಯಿಂಟ್‌ನಲ್ಲಿ ಮೋದಿ ಅಭಿಮಾನಿ ಹಾಗೂ ಶ್ರೀರಾಮಭಕ್ತ ಎಚ್.ಆರ್.ಅರವಿಂದ್ ಅವರು ಕೇಕ್‌ನಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರವನ್ನು ಅರಳಿಸಿದ್ದಾರೆ. ಸುಮಾರು ೧೫ ಕೆಜಿ ತೂಕವಿರುವ ಈ ಕೇಕ್ ಎಲ್ಲರನ್ನು ಆಕರ್ಷಿಸುತ್ತಿದೆ. ಸಂಜೆ ೫ ಗಂಟೆಗೆ ಶ್ರೀರಾಮ ಮಂದಿರದ ಮಾದರಿ ಕೇಕ್‌ಗೆ ಪೂಜೆ ಸಲ್ಲಿಸಿ ಶ್ರೀರಾಮನಾಮಸ್ಮರಣೆ ಮಾಡಿದರು.