ಕನ್ನಡಪ್ರಭ ವಾರ್ತೆ ಸಿದ್ದಾಪುರ
ಅಘನಾಶಿನಿ ನದಿ ಜೋಡಣೆ ಯೋಜನೆ ವಿರೋಧಿಸಿ ಹಮ್ಮಿಕೊಂಡ ಪಾದಯಾತ್ರೆಯ ನಂತರ ಪಟ್ಟಣದ ನೆಹರು ಮೈದಾನದಲ್ಲಿ ಜರುಗಿದ ಸಮಾವೇಶದಲ್ಲಿ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಂತ ಅಗತ್ಯವಾದ ಯಾವ ಸೌಲಭ್ಯವೂ ಇಲ್ಲ. ಹಲವಾರು ಯೋಜನೆಗಳಿಗೆ ಲಕ್ಷಾಂತರ ಎಕರೆ ಜಮೀನು ನೀಡಿದರೂ ಬದುಕಿಗಾಗಿ ಅವಲಂಬಿಸಿಕೊಂಡ ಅತಿಕ್ರಮಣ ಜಾಗದ ಹಕ್ಕನ್ನು ಈವರೆಗೂ ಕೊಟ್ಟಿಲ್ಲ. ಇಂಥ ಯಾವುದೇ ಯೋಜನೆಗಳು ಬೇಡ. ಅತಿಕ್ರಮಣದಾರರಿಗೆ ವಾಸ್ತವ್ಯ ಭೂಮಿಯ ಹಕ್ಕು ಕೊಡಿ. ತಕ್ಷಣ ಇಂಥ ಯೋಜನೆಗಳು ಸ್ಥಗಿತಗೊಳಿಸಿ. ನಾವು ಕಾನೂನು ಹೋರಾಟಕ್ಕೂ ಸನ್ನದ್ಧರಾಗಿದ್ದೇವೆ. ಯಾವುದೇ ಜನಪ್ರತಿನಿಧಿ ಇಂಥ ಯೋಜನೆ ಜಾರಿಗೆ ತರುವಲ್ಲಿ ಬೆಂಬಲಿಸಿದರೆ ಅಂಥವರ ವಿರುದ್ಧ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ಜಿಪಂ ಮಾಜಿ ಸದಸ್ಯ ಎನ್.ವಿ. ಹೆಗಡೆ ಮುತ್ತಿಗೆ ಮಾತನಾಡಿ, ಇದು ನಮ್ಮ ಭೂಮಿ ಮತ್ತು ನೀರನ್ನು ಉಳಿಸಿಕೊಳ್ಳುವ ಅಳಿವು, ಉಳಿವಿನ ಪ್ರಶ್ನೆ. ಇನ್ನಷ್ಟು ಸಂಘಟಿತವಾಗಿ ಗುರಿ ಸಾಧಿಸುವವರೆಗೆ ಹೋರಾಡೋಣ ಎಂದರು.ನಾಗಪತಿ ಗೌಡ ಹುಕ್ಕಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಸಂಘಟನೆಯ ಜಿಲ್ಲಾ ಸಂಚಾಲಕ ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ಜಿ.ಎನ್. ಹೆಗಡೆ, ಮಂಜು ಮರಾಠಿ ಕುಮಟಾ, ಸುರೇಶ್ ಮೇಸ್ತಾ, ಶ್ಯಾಮಲ ಗೌಡ, ರಾಜೇಶ್ ವಿ. ಭಟ್ ಮಕ್ಕಿಗದ್ದೆ, ಮಂಜುನಾಥ, ಮಹೇಶ ಭಟ್ ಚಟ್ನಳ್ಳಿ, ರಾಜು ನಾಯ್ಕ ಕಿರೇಕೋಡ, ರಾಮಕೃಷ್ಣ ನಾಯ್ಕ ಶಿರೂರು ಮಾತನಾಡಿದರು.
ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಶ್ರೀ ಹಾಗೂ ಬಂಗಾರಮಕ್ಕಿ ಶ್ರೀ ಕ್ಷೇತ್ರದ ಮಾರುತಿ ಗುರೂಜಿಯವರ ಸಂದೇಶವನ್ನು ಗಣಪತಿ ಹೆಗಡೆ ಗುಂಜಗೋಡ, ಸೋಂದಾ ಮಠದ ಸಂದೇಶವನ್ನು ವಸಂತ ಹೆಗಡೆ ವಾಚಿಸಿದರು.ಜಿಲ್ಲಾ ಸಂಚಾಲಕ ಇಬ್ರಾಹೀಂ ಗೌಡಳ್ಳಿ, ಮಹೇಶ್ ನಾಯ್ಕ ಕಾನಕ್ಕಿ, ಹರಿಹರ್ ನಾಯ್ಕ ಓಂಕಾರ, ಸತೀಶ್ ನಾಯ್ಕ, ಮಹೇಂದ್ರ ಕತಗಾಲ, ಸೀತಾರಾಮ ಗೌಡ ಹುಕ್ಕಳ್ಳಿ, ಕೆ.ಟಿ. ನಾಯ್ಕ, ಪರಮ ಗೌಡ, ದ್ಯಾವ ಗೌಡ, ಯಂಕ ಗೌಡ್ರು, ಗೋವಿಂದ ಗೌಡ ಕಿಲವಳ್ಳಿ, ಮೋಹನ್ ನಾಯ್ಕ ಕಾನಳ್ಲಿ, ರಾಮಚಂದ್ರ ನಾಯ್ಕ, ಸುಭಾಷ್ ನಾಯ್ಕ ಕ್ಯಾದಗಿ ಮುಂತಾದವರಿದ್ದರು.
ಸಾವಿರಾರು ಹೋರಾಟಗಾರರು ಭಾಗಿ:ತಾಲೂಕು ಮಾತ್ರವಲ್ಲ, ಕುಮಟಾ, ಹೊನ್ನಾವರ, ಶಿರಸಿ, ಯಲ್ಲಾಪುರ, ಮುಂಡಗೋಡ ಮುಂತಾದೆಡೆಯಿಂದ ವೃದ್ದರು, ಮಹಿಳೆಯರು, ಯುವಕರು ಸೇರಿದಂತೆ ಸುಮಾರು ೮ ಸಾವಿರಕ್ಕೂ ಮಿಕ್ಕಿ ಜನರು ಸಮಾವೇಶಗೊಂಡಿದ್ದರು. ಸುಡುವ ಬಿಸಿಲಿನಲ್ಲಿ ಪಾದಯಾತ್ರೆ ಮೂಲಕ ಸಮಾವೇಶದಲ್ಲಿ ಪಾಲ್ಗೊಂಡು ತಮ್ಮ ಬೆಂಬಲ ವ್ಯಕ್ತಪಡಿಸಿದರು.
ಕೆ.ಟಿ. ನಾಯ್ಕ ಹೆಗ್ಗೆರೆ ಸ್ವಾಗತಿಸಿದರು. ದಿವಾಕರ ನಾಯ್ಕ ನಿರೂಪಿಸಿದರು.