ಬೆಟ್ಟಗೇರಿಯಲ್ಲಿ ಶಾಸಕರ ವಿಶೇಷ ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ತಾಲೂಕಿನ ಬೆಟ್ಟಗೇರಿಯಲ್ಲಿ ಶಾಸಕರ ವಿಶೇಷ ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.ಕೆಆರ್‌ಐಡಿಎಲ್ ಸಂಸ್ಥೆ ಮೂಲಕ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 40 ಕೋಟಿ ವೆಚ್ಚದಲ್ಲಿ ಒಟ್ಟು 252 ಕಾಮಗಾರಿಗಳನ್ನು ಎ.ಎಸ್.ಪೊನ್ನಣ್ಣ ಅವರು ಜನರ ಕೋರಿಕೆಯ ಮೇರೆಗೆ ಗುರುತಿಸಿ ಅನುದಾನದ ಹಂಚಿಕೆ ಮಾಡಿದ್ದಾರೆ.ಕ್ಷೇತ್ರದ ಕಟ್ಟಕಡೆಯ ವ್ಯಕ್ತಿಗೂ ಮೂಲಭೂತ ವ್ಯವಸ್ಥೆ ದೊರಕಬೇಕು ಎಂಬ ಆಶಯದೊಂದಿಗೆ ಆದ್ಯತೆ ಮೇರೆಗೆ ಗ್ರಾಮೀಣ ಪ್ರದೇಶಗಳನ್ನು ಗುರಿಯಾಗಿಸಿ ಕಾಮಗಾರಿಗೆ ಅನುದಾನ ಒದಗಿಸಲಾಗಿದೆ ಎಂದು ಅವರು ತಿಳಿಸಿದರು.ಸಾರ್ವಜನಿಕರಿಂದ ಮತ್ತಷ್ಟು ಕೋರಿಕೆಗಳು ಸಲ್ಲಿಕೆಯಾಗಿದ್ದು, ಅವುಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಪೊನ್ನಣ್ಣ ಹೇಳಿದರು.ಈ ಸಂಧರ್ಭ ಪ್ರಮುಖರಾದ ಇಸ್ಮಾಯಿಲ್, ರಾಜೀವ್ ಗಾಂಧಿ ಪಂಚಾಯಿತಿರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ಕೊಡಗನ ತೀರ್ಥ ಪ್ರಸಾದ್, ಹನೀಫ್, ಬೆಟ್ಟಗೇರಿ ಗ್ರಾಪಂ ಅಧ್ಯಕ್ಷೆ ಚಳಿಯಂಡ ಕಮಲಾ ಉತ್ತಯ್ಯ, ಮುಂಜಾಂದಿರ ಚಿಕ್ಕು ಕಾರ್ಯಪ್ಪ, ಕೇಟೋಳಿ ಮೋಹನ್ ರಾಜ್, ಅಪ್ರು ರವೀಂದ್ರ, ಹೊಸೂರು ಸೂರಜ್, ಪಿ.ಎಲ್. ಸುರೇಶ್, ಮಜೀದ್, ಬೊಳ್ದಂಡ ನಾಚಪ್ಪ, ಮಹಮದ್ ಕುಂಞ, ಮುಂಜಾಂದಿರ ಅಜಿತ್, ತೋರೆರ ಮುದ್ದಯ್ಯ, ಮುಂಜಾಂದಿರ ಸದಾ, ಕಾಳೇರಮ್ಮನ ಕುಮಾರ್, ಪಟ್ಟಡ ದೀಪಕ್, ಮೊಯ್ದು ಬೆಟ್ಟಗೇರಿ, ಹನೀಫ್ ಸಂಪಾಜೆ, ರಘು, ಮುಂಜಾಂದಿರ ಬೋಪಣ್ಣ, ಕೊಕ್ಕಂಡ ಚಂಗಪ್ಪ, ಪುದಿನೆರವನ ಆಶಾ, ಗಣೇಶ್, ಗುತ್ತಿಗೆದಾರ ನರೆನ್ ಸೋಮಯ್ಯ, ಅರ್ಚಕರಾದ ದೇವಿಪ್ರಸಾದ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.