ಕನ್ನಡಪ್ರಭ ವಾರ್ತೆ ಪಾವಗಡ
ಶಿಖರದಲ್ಲಿ ನೆಲೆಸಿರುವ ಶ್ರೀರಾಮಲಿಂಗೇಶ್ವರ ಸ್ವಾಮಿಗೆ ಪ್ರತಿ ವರ್ಷ ಮಹಾಶಿವರಾತ್ರಿಯಂದು ಸಾವಿರಾರು ಭಕ್ತರು ದರ್ಶನ ಪಡೆಯುತ್ತಾರೆ. ಬೆಟ್ಟಕ್ಕೆ ತೆರಳಲು ಸುಗಮವಾದ ದಾರಿಯಿಲ್ಲದೆ ಭಕ್ತರು ಕಷ್ಟಪಟ್ಟು ದೇವಸ್ಥಾನ ತಲುಪುವ ಸ್ಥಿತಿ ಇತ್ತು. ಇದೇ ಕಾರಣದಿಂದ ಈ ಹಿಂದೆ ಶ್ರೀರಾಮಲಿಂಗೇಶ್ವರಸ್ವಾಮಿ ಟ್ರಸ್ಟ್ ವತಿಯಿಂದ ಎರಡು ಕಿಮೀ ದಾರಿ ಕಾಮಗಾರಿ ನಿರ್ವಹಿಸಿದ್ದರು. ಆದರೆ ಪೂರ್ಣ ಪ್ರಮಾಣದಲ್ಲಿ ದೇವಸ್ಥಾನದವರೆಗೆ ರಸ್ತೆ ಕಾಮಗಾರಿ ಮಾಡಲು ಭಕ್ತರು ಮುಂದಾಗಿರುವ ಹಿನ್ನೆಲೆಯನ್ನು ಶಾಸಕ ಎಚ್.ವಿ.ವೆಂಕಟೇಶ್ 10ಲಕ್ಷ ಅನುದಾನ ಬಿಡುಗಡೆ ಮಾಡಿದ್ದರು.
ಇದೇ ವೇಳೆ ಶಾಸಕ ಶಾಸಕ ಎಚ್.ವಿ.ವೆಂಕಟೇಶ್ ಮಾತನಾಡಿ ಶ್ರೀರಾಮನು ಈ ಪ್ರದೇಶದಲ್ಲಿ ನೆಲೆಸಿದ್ದ ಕಾರಣದಿಂದ ಈ ಪ್ರದೇಶವನ್ನು ರಾಮಪೇಟೆ ಎಂದು ಸಹ ಕರೆಯಲಾಗುತ್ತಿದೆ. ಬೆಟ್ಟದ ತುದಿಯಲ್ಲಿ ಅಜರಾಮರವಾಗಿ ನೆಲೆಸಿರುವ ಶ್ರೀರಾಮಲಿಂಗೇಶ್ವರ ಸ್ವಾಮಿ ದರ್ಶನಕ್ಕೆ ಭಕ್ತರು ತೆರಳಲು ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದ್ದು ಸಂತಸ ತಂದಿದೆ ಎಂದರು. ಇದೇ ವೇಳೆ ಶ್ರೀರಾಮಲಿಂಗೇಶ್ವರ ಸ್ವಾಮಿ ಟ್ರಸ್ಟ್ ಪದಾಧಿಕಾರಿಗಳು ಹಾಗೂ ನೀಲಮ್ಮನಹಳ್ಳಿ, ರಾಮಪೇಟೆ, ಕೆ.ರಾಮಪುರ, ಚಿಕ್ಕಹಳ್ಳಿ, ದೊಡ್ಡಹಳ್ಳಿ, ಭೂಪೂರ ಮತ್ತು ಬೊಮ್ಮಗಾನಹಳ್ಳಿ ಗ್ರಾಮಗಳ ನೂರಾರು ಮುಖಂಡರು ಭೂಮಿಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಫೋಟೋ 15ಪಿವಿಡಿ7