ಕನ್ನಡಪ್ರಭ ವಾರ್ತೆ ಇಂಡಿರಾಜ್ಯ ಸರ್ಕಾರ ಘೋಷಿಸಿರುವ 2,500 ಬೆಳೆ ಪರಿಹಾರವನ್ನು ವಿರೋಧಿಸಿ ರೈತ ಮುಖಂಡ ರಘುನಾಥ್ ನಡುವಿನಮನಿ ಮುಖ್ಯಮಂತ್ರಿ ಹೆಸರಿನಲ್ಲಿ ಸರ್ಕಾರಕ್ಕೆ 2,600 ಮೊತ್ತದ ಡಿಡಿಯನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಲ್ಲಿಸಿದ್ದಾರೆ. ಡಿಡಿಯನ್ನು ಕಂದಾಯ ಉಪ ವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಮೂಲಕ ಸರ್ಕಾರಕ್ಕೆ ಕಳುಹಿಸಿ, 2500 ಬೆಳೆ ಪರಿಹಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಕನ್ನಡಪ್ರಭ ವಾರ್ತೆ ಇಂಡಿ

ರಾಜ್ಯ ಸರ್ಕಾರ ಘೋಷಿಸಿರುವ ₹ 2,500 ಬೆಳೆ ಪರಿಹಾರವನ್ನು ವಿರೋಧಿಸಿ ರೈತ ಮುಖಂಡ ರಘುನಾಥ್ ನಡುವಿನಮನಿ ಮುಖ್ಯಮಂತ್ರಿ ಹೆಸರಿನಲ್ಲಿ ಸರ್ಕಾರಕ್ಕೆ ₹ 2,600 ಮೊತ್ತದ ಡಿಡಿಯನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಲ್ಲಿಸಿದ್ದಾರೆ. ಡಿಡಿಯನ್ನು ಕಂದಾಯ ಉಪ ವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಮೂಲಕ ಸರ್ಕಾರಕ್ಕೆ ಕಳುಹಿಸಿ, ₹2500 ಬೆಳೆ ಪರಿಹಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರು.ನಗರದ ಮಿನಿವಿಧಾನಸೌಧ ಮುಂದೆ ರೈತರು ಸರ್ಕಾರಕ್ಕೆ ನೀಡಿದ ಡಿಡಿ ಪ್ರದರ್ಶನ ಹಾಗೂ ಒಣಗಿದ ಬೆಳೆ ಹಿಡಿದು ವಿನೂತನ ಪ್ರತಿಭಟನೆ ನಡೆಸಿದರು.

ರೈತರ ಬರಗಾಲದ ಸಂಕಷ್ಟಗಳಿಗೆ ಸ್ಪಂದಿಸಿ, ವೈಜ್ಞಾನಿಕ ಬೆಳೆ ಪರಿಹಾರ ಹಾಗೂ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿದರು. ತೀವ್ರ ಬರಗಾಲದ ಪರಿಸ್ಥಿತಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆ ನಷ್ಟದ ಸಮೀಕ್ಷೆ ನಡೆಸಿ ಸೂಕ್ತ ಬೆಳೆ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡಬೇಕು. ರೈತರ ಸಂಪೂರ್ಣ ಕೃಷಿ ಸಾಲವನ್ನು ಮನ್ನಾ ಮಾಡಬೇಕು. ಜೊತೆಗೆ ಬೆಳೆ ವಿಮೆ ಪರಿಹಾರವನ್ನು ಶೀಘ್ರ ಬಿಡುಗಡೆ ಮಾಡಿ, ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.ಈ ವೇಳೆ ಬಾಳು ಮುಳಜಿ ಹಾಗೂ ಪ್ರಶಾಂತ ಲಾಳಸಂಗಿ, ವಿಜಯಕುಮಾರ ರಾಠೋಡ, ಶ್ರೀಶೈಲಗೌಡ ಪಾಟೀಲ, ಮಲ್ಲು ಗುಡ್ಲ, ಅಶೋಕ ಅಕಲಾದಿ, ಸಾಗರ ಬಿರಾದಾರ, ಶ್ರೀಕಾಂತ ಬಡಿಗೇರ, ಶಿವರಾಜ ಕೆಂಗನಾಳ, ಸಂತೋಷ ಬಗದುರ್ಗಿ, ಸಂತೋಷ ಪಾಟೀಲ, ಆನಂದ ಮುಳಜಿ, ಶಾಂತು ಲಾಳಸಂಗಿ, ಹಣಮಂತ ಹೂಗಾರ, ದುಂಡುಗೌಡ ಬಿರಾದಾರ, ಮುದಕಪ್ಪ ಹೊಟಗಿ, ಬಲು ಇಂಗಳೆ, ಮುತ್ತು ತಾಂಬೆ, ಪ್ರಭಾಕರ ಘೋರ್ಪಡೆ, ಮಲ್ಲು ಬಳ್ಳಾರಿ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.