ಸುರಿದ ಭಾರೀ ಮಳೆಗೆ ಕೊಚ್ಚಿಹೋದ ರಸ್ತೆಗಳು : ರೈತರು ಬೆಳೆದ ಶುಂಠಿ, ಭತ್ತದ ಗದ್ದೆಗಳು ಸಂಪೂರ್ಣ ನಾಶ

KannadaprabhaNewsNetwork |  
Published : Oct 10, 2024, 02:31 AM ISTUpdated : Oct 10, 2024, 12:22 PM IST
ಫೋಟೋ 9 ಎ, ಎನ್, ಪಿ 1  ಆನಂದಪುರ  ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಶುಂಠಿ ಬೆಳೆ ಹಾನಿಯಾಗಿರುವುದು. | Kannada Prabha

ಸಾರಾಂಶ

ಆನಂದಪುರದಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಶುಂಠಿ ಬೆಳೆ ಹಾನಿಯಾಗಿರುವುದು.

 ಆನಂದಪುರ : ಮಂಗಳವಾರ ರಾತ್ರಿ ಸುರಿದ ಬಾರಿ ಮಳೆಯಿಂದಾಗಿ ರಸ್ತೆಗಳು ಕೊಚ್ಚಿ ಹೋಗಿದ್ದು, ರೈತರು ಬೆಳೆದ ಶುಂಠಿ, ಭತ್ತದ ಗದ್ದೆಗಳು ಸಂಪೂರ್ಣ ನಾಶವಾಗಿವೆ.

ಆಚಾಪುರ ಗ್ರಾಮ ಪಂಚಾಯಿತಿಯ ತಂಗಳವಾಡಿ ಗ್ರಾಮದ ಅಮ್ಮನ ಕೆರೆ ಕೋಡಿ ಕಾಲುವೆ ಒಡೆದು ಅಡಿಕೆ ತೋಟ, ಭತ್ತದ ಗದ್ದೆ, ಶುಂಠಿ ಬೆಳೆಗಳು ಕೊಚ್ಚಿ ಹೋಗಿ ಅಪಾರ ಹಾನಿ ಸಂಭವಿಸಿದೆ.

ಗಿಳಾಲಗುಂಡಿ ಅಮ್ಮನ ಕೆರೆ ಕೋಡಿ ಕಾಲುವೆ ಒಡೆದ ಪರಿಣಾಮ. ಗಿಳಾಲ ಗುಂಡಿಯ ಬಸ್ ನಿಲ್ದಾಣ ಸಂಪೂರ್ಣ ಕೊಚ್ಚಿ ಹೋಗಿದೆ.

ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ ಸೋಮಶೇಖರ್ ಲಗ್ಗೆರೆ ಮಾತನಾಡಿ, ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ರಸ್ತೆ, ಮೋರಿ, ಅಮ್ಮನ ಕೆರೆಯ ಕೊಡಿ ಕಾಲವೇ, ರೈತರ ಬೆಳೆದಂತಹ ಶುಂಠಿ ಮತ್ತು ಭತ್ತದ ಗದ್ದೆಗಳಿಗೆ ಅಪಾರ ಹಾನಿ ಸಂಭವಿಸಿದೆ. ಗಿಳಾಲ ಗುಂಡಿ, ಕೆರೆ ಹಿತ್ತಲು, ತಂಗಳವಾಡಿ ಸೇರಿದಂತೆ ಅನೇಕ ಭಾಗದಲ್ಲಿ ಮಳೆಯಿಂದ ರಸ್ತೆಗಳು, ಕಾಲು ಸೇತುವೆ, ಕಾಲುವೆಗಳು, ಕಿರು ಸೇತುವೆ ಕೊಚ್ಚಿ ಹೋಗಿದ್ದು 5 ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ತಿಳಿಸಿದ ಅವರು, ಹಾನಿ ಕುರಿತು ಸಂಪೂರ್ಣ ವರದಿ ಸಂಗ್ರಹಿಸಿ ಸರ್ಕಾರಕ್ಕೆ ಕಳಿಸುವುದಾಗಿ ಹೇಳಿದ್ದಾರೆ.

ರಮಾನಂದ್ ಸಾಗರ್ ಮಾತನಾಡಿ, ಮಂಗಳವಾರ ರಾತ್ರಿ ಸುರಿದ ಮಳೆ ರೈತರಲ್ಲಿ ಆತಂಕವನ್ನು ಉಂಟು ಮಾಡಿದೆ. ರೈತರು ಬೆಳೆದ ಬೆಳೆ ಕೈಗೆ ಸೇರುವ ಮೊದಲೇ ಮಳೆಗೆ ಆಹುತಿಯಾಗಿದ್ದು, ರೈತರಿಗೆ ತುಂಬಲಾರದ ನಷ್ಟ ಸಂಭವಿಸಿದೆ ಎಂದರು.

ಮಳೆ ಹಾನಿ ಪ್ರದೇಶಕ್ಕೆ ತಹಸೀಲ್ದಾರ್ ಚಂದ್ರ ಶೇಖರ್ ನಾಯಕ್, ಶಾಸಕರ ಆಪ್ತ ಕಾರ್ಯದರ್ಶಿ ಶ್ರೀನಿವಾಸ್, ಚೇತನ್ ರಾಜ್ ಕಣ್ಣೂರ್, ಕಲೀಮುಲ್ಲಾ ಖಾನ್, ರೆಹಮತ್ ತುಲ್ಲಾ, ಕಂದಾಯ ಅಧಿಕಾರಿ ಕವಿರಾಜ್, ಕೃಷಿ ಅಧಿಕಾರಿ ಚಂದ್ರ ಕುಮಾರ್, ಸೇರಿದಂತೆ ಅನೇಕರು ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಳು ಬಿದ್ದ ಸರ್ಕಾರಿ ವಸತಿ ಗೃಹದಲ್ಲಿ ವ್ಯಕ್ತಿ ಆತ್ಮಹತ್ಯೆ
ಕಡಪಟ್ಟಿ ಪಿಡಿಒ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ