ಗದಗ: ಗದಗ- ಮುಳಗುಂದ- ಲಕ್ಷ್ಮೇಶ್ವರ ರಸ್ತೆಯಲ್ಲಿ ಭಾರಿ ಗಾತ್ರದ ವಿಂಡ್ ಪವರ್(ಪವನ ವಿದ್ಯುತ್) ಉಪಕರಣಗಳನ್ನು ಹೊತ್ತೊಯ್ಯುವ ವಾಹನಗಳ ಸಂಚಾರದಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದ್ದು, ಇದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ವತಿಯಿಂದ ನಗರದ ಅಂಜುಮನ್ ಕಾಲೇಜು ಮಂಗಳವಾರ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾರುತಿ ಈಳಗೇರ, ಕುಮಾರ ರೇವಣ್ಣವರ, ಸಮೀರ ಬಾಳಿಕಾಯಿ, ವಿನಾಯಕ ಬದಿ, ದಾವೂಲ ತಹಶೀಲ್ದಾರ್, ಶಿರಾಜ್ ಹೊಸಮನಿ, ಯೂನಸ್ ಗದಗ, ಸುಲೇಮಾನ ಮಂಜಲಾಪುರ, ತೌಸಿಫ್ ಢಾಲಾಯತ್, ಕೃಷ್ಣಾ ಲಮಾಣಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
ಒಳಮೀಸಲಾತಿ ಅನ್ಯಾಯ ಸರಿಪಡಿಸುವಂತೆ ಆಗ್ರಹಗದಗ: ಒಳಮೀಸಲಾತಿಯಲ್ಲಿ ಬಂಜಾರ, ಭೋವಿ, ಕೊರಚ ಮತ್ತು ಕೊರಮ ಸಮುದಾಯಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಆಗ್ರಹಿಸಿ ಸಮುದಾಯಗಳಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಮುಖಂಡ ರವಿಕಾಂತ ಅಂಗಡಿ ಮಾತನಾಡಿ, ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿಯ ವರ್ಗೀಕರಣ, ಮೀಸಲಾತಿ ಶೇಕಡಾವಾರು ಹಂಚಿಕೆ ಹಾಗೂ ರೋಸ್ಟರ್‌ಬಿಂದುಗಳ ನಿಗದಿಯಲ್ಲಿ ಬಂಜಾರ, ಭೋವಿ, ಕೊರಚ ಮತ್ತು ಕೊರಮ ಸಮುದಾಯಗಳಿಗೆ ಅನ್ಯಾಯವಾಗಿದೆ ಎಂಬ ಗಂಭೀರ ಆತಂಕ ನಮ್ಮ ಸಮುದಾಯಗಳಲ್ಲಿ ಉಂಟಾಗಿದೆ.ಎಬಿಸಿ ವರ್ಗೀಕರಣ ಮತ್ತೊಮ್ಮೆ ಪರಿಶೀಲಿಸಬೇಕು. ಪರಿಷ್ಕೃತ ಜಾತಿಗಳಿಗೆ ಲಭ್ಯವಿರುವ ಶೇ. 15ರಷ್ಟು ಮೀಸಲಾತಿಯಲ್ಲಿ ಸಿ ಗುಂಪಿಗೆ ಶೇ. 5ರಷ್ಟು ಮೀಸಲಾತಿ ಒದಗಿಸಬೇಕು. ರೋಸ್ಟರ್ ಬಿಂದುವಿನಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.ಕೆ.ಸಿ. ನಭಾಪುರ, ಪರಮೇಶ ನಾಯಕ, ಟಿ.ಡಿ. ಪೂಜಾರ, ಎಲ್.ಎಲ್. ಚವಾಣ, ಚಂದು ನಾಯಕ, ವಿಠ್ಠಲ ತೋಟದ, ತುಳಚಪ್ಪ ಚವಾಣ, ಪರಶುರಾಮ ಚವಾಣ, ಪ್ರಕಾಶ ಪೂಜಾರ, ಸುರೇಶ ಲಮಾಣಿ, ತುಕಾರಾಮ ಲಮಾಣಿ, ಸಂತೋಷ್ ಪವಾರ, ಪ್ರಕಾಶ ಲಮಾಣಿ, ರಮೇಶ ಲಮಾಣಿ, ಬಾಪೂಜಿ ಲಮಾಣಿ, ಗಣೇಶ ಲಮಾಣಿ, ಚನ್ನಪ್ಪ ಲಮಾಣಿ, ಆಕಾಶ ಲಮಾಣಿ, ದೇವೇಂದ್ರ ಲಮಾಣಿ, ಪರಸು ಲಮಾಣಿ, ಮುತ್ತಪ್ಪ ಲಮಾಣಿ, ರಾಜು ಲಮಾಣಿ, ಗೋಪಿ ಜಾಧವ, ಸುನಿಲ್ ಪವಾರ ಸೇರಿದಂತೆ ಇತರರು ಇದ್ದರು.