ಎಡೆಯೂರು ದೇವಾಲಯಕ್ಕೆ ರೋಬೋ ಆನೆ ಕೊಡುಗೆ

KannadaprabhaNewsNetwork |  
Published : Sep 13, 2024, 01:33 AM IST
ಎಡೆಯೂರು ದೇವಾಲಯಕ್ಕೆ ಕ್ಯೂಬಾ ಮತ್ತು ಸುಪಾ ಸಂಸ್ಥೆ ನೀಡಿದ್ದ ಆನೆಯನ್ನು ಶಾಸಕ ರಂಗನಾಥ್ ಅನಾವರಣಗೊಳಿಸಿದ್ದಾರೆ. | Kannada Prabha

ಸಾರಾಂಶ

ಎಡೆಯೂರು ದೇವಾಲಯಕ್ಕೆ ರೋಬೋ ಆನೆ ಕೊಡುಗೆ

ಕನ್ನಡ ಪ್ರಭ ವಾರ್ತೆ ಕುಣಿಗಲ್

ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಎಡೆಯೂರಿನಲ್ಲಿ ಇದ್ದ ಗಂಗಾಶ್ರೀ ಆನೆ ಅನಾರೋಗ್ಯ ನಿಮಿತ್ತ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಎಡೆಯೂರು ದೇವಾಲಯಕ್ಕೆ ಕ್ಯೂಬಾ ಮತ್ತು ಸುಪಾ ಸಂಸ್ಥೆ ವತಿಯಿಂದ ನೀಡಿದ ರೋಬೋ ಆನೆಯನ್ನು ಕುಣಿಗಲ್ ಶಾಸಕ ಡಾ. ರಂಗನಾಥ್ ಲೋಕಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಎಡೆಯೂರಿನಲ್ಲಿದ್ದ ಆನೆ ಗಂಗಾ ಮೃತಪಟ್ಟ ಹಿನ್ನೆಲೆಯಲ್ಲಿ ಭಕ್ತರು ಬೇಸರಗೊಂಡಿದ್ದು ರೋಬೋ ಆನೆಯ ಬಳಕೆಯಿಂದ ಭಕ್ತರಿಗೆ ಯಾವುದೇ ರೀತಿ ತೊಂದರೆ ಆಗುವುದಿಲ್ಲ ಅಂತಹ ಕೆಲಸ ಮಾಡಿದ ಸಂಸ್ಥೆಗೆ ಅಭಿನಂದನೆಗಳು ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಸೌಮ್ಯ ರೆಡ್ಡಿ ನಮ್ಮ ಭಕ್ತಿಯ ಭಾವನೆಗಳು ಯಾವುದೇ ಪ್ರಾಣಿಯ ಮೇಲೆ ನೋವು ಉಂಟು ಮಾಡಬಾರದು. ಅದಕ್ಕಾಗಿ ಇಂತಹ ಆನೆಯ ಮಾದರಿಯನ್ನು ಯಡಿಯೂರು ದೇವಸ್ಥಾನಕ್ಕೆ ರಾಜ್ಯದಲ್ಲಿ ಪ್ರಥಮವಾಗಿ ನೀಡಲಾಗಿದೆ. ಇದರಿಂದ ಭಕ್ತರಿಗೆ ಮತ್ತು ಆನೆಗೆ ಎರಡಕ್ಕೂ ಕೂಡ ಸಂತೋಷ ಆಗುತ್ತದೆ. ದೇವಾಲಯದ ಮುಂಭಾಗದಲ್ಲಿ ಇರಿಸಲಾಗಿದ್ದ ಆನೆಯ ಮಾದರಿಯನ್ನು ಅನಾವರಣ ಗೊಳಿಸುವ ಮುನ್ನ ಸಿದ್ದಲಿಂಗೇಶ್ವರರ ಗದ್ದುಗೆ ಪೂಜೆ ಸಲ್ಲಿಸಿ ನಂತರ ಹೋಮ ಪೂಜೆಯಲ್ಲಿ ಭಾಗವಹಿಸಿ ಪೂರ್ಣಾವತಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ತಿಪ್ಪೇಸ್ವಾಮಿ ತುಮಕೂರು ಜಿಲ್ಲಾ ಅಪರ ಜಿಲ್ಲಾಧಿಕಾರಿ ಕ್ಯೂಬಾ ಅಧ್ಯಕ್ಷ ಸುಬ್ಬಣ್ಣ ಗಂಗೂಲಿ, ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಮಹೇಶ್, ಗೋವಿಂದರಾಜು, ಸಂಯುಕ್ತ ಹೊರನಾಡು ಇದ್ದರು .

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ