- ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಯೋಜನೆ । ಮಧ್ಯ ಕರ್ನಾಟಕದಲ್ಲೇ ಪ್ರಥಮ
ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಅತ್ಯಾಧುನಿಕ ವೈದ್ಯಕೀಯ ಸೇವೆಗಳನ್ನು ಒದಗಿಸುವಲ್ಲಿ ಬದ್ಧತೆ ದೃಢಪಡಿಸುತ್ತ ಬಂದಿದೆ. ಅಂತೆಯೇ ಈಗ ರೋಬೋಟಿಕ್ ಮಂಡಿಕೀಲು ಬದಲಾವಣೆ ಶಸ್ತ್ರಚಿಕಿತ್ಸೆ ಪರಿಚಯ ಘೋಷಿಸಿದೆ.ಈ ಅತ್ಯಾಧುನಿಕ ರೋಬೋಟಿಕ್ ತಂತ್ರಜ್ಞಾನವು ಮಂಡಿಕೀಲು ಬದಲಾವಣೆ ಶಸ್ತ್ರಚಿಕಿತ್ಸೆಯಲ್ಲಿ ಹೆಚ್ಚಿನ ನಿಖರತೆ, ವೈಯಕ್ತಿಕ ಚಿಕಿತ್ಸಾ ಯೋಜನೆ ಹಾಗೂ ಶುದ್ಧತೆಯನ್ನು ಒದಗಿಸಲಿದೆ. ಉತ್ತಮ ಹೊಂದಾಣಿಕೆ, ಕಡಿಮೆ ನೋವು, ವೇಗವಾದ ಚೇತರಿಕೆ ಮತ್ತು ದೀರ್ಘಕಾಲಿಕ ಇಂಪ್ಲಾಂಟ್ ಫಲಿತಾಂಶಗಳನ್ನು ಖಚಿತಪಡಿಸುತ್ತದೆ. ಇದು ವಿಶೇಷವಾಗಿ ಆಸ್ಟಿಯೊ ಆರ್ಥ್ರೈಟಿಸ್ ಸೇರಿದಂತೆ ದೀರ್ಘಕಾಲದ ಮಂಡಿಕೀಲು ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಅತ್ಯಂತ ಉಪಯುಕ್ತವಾಗಿದೆ.
ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ರೋಬೋಟಿಕ್ ಮಂಡಿಕೀಲು ಬದಲಾವಣೆ ಕಾರ್ಯಕ್ರಮವು ಡಾ. ರವಿಕುಮಾರ್ ಟಿ.ಜಿ. ಮುಖ್ಯಸ್ಥರು ಆರೈಕೆ ಆಸ್ಪತ್ರೆ ಮಾರ್ಗದರ್ಶನದಲ್ಲಿ, ಖ್ಯಾತ ಮಂಡಿಕೀಲು ಬದಲಾವಣೆ ಶಸ್ತ್ರಚಿಕಿತ್ಸಕರಾದ ಡಾ.ಎ.ಪಿ. ಲಿಂಗರಾಜು, ಡಾ. ವಿ.ಧ್ರುವ ಹಾಗೂ ಅರಿವಳಿಕೆ ತಜ್ಞರಾದ ಡಾ. ಆರ್.ಎಂ. ದೀಪಕ್ ನೇತೃತ್ವದಲ್ಲಿ ಆರಂಭಿಸಲಾಗುತ್ತದೆ. ಅವರ ಸಂಯುಕ್ತ ಅನುಭವ, ವೈದ್ಯಕೀಯ ನೈಪುಣ್ಯ ಮತ್ತು ರೋಗಿ ಕೇಂದ್ರಿತ ದೃಷ್ಟಿಕೋನವು ಶಸ್ತ್ರಚಿಕಿತ್ಸೆಯ ಸುರಕ್ಷತೆ ಮತ್ತು ಯಶಸ್ವಿ ಫಲಿತಾಂಶಗಳನ್ನು ಖಚಿತಪಡಿಸುತ್ತದೆ.ಈ ಸಂದರ್ಭ ಆಸ್ಪತ್ರೆ ಮುಖ್ಯಸ್ಥ ಡಾ. ಟಿ.ಜಿ. ರವಿಕುಮಾರ ಮಾತನಾಡಿ, ಮಧ್ಯ ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ದಾವಣಗೆರೆಯಲ್ಲಿ ರೋಬೋಟಿಕ್ ಮಂಡಿಕೀಲು ಬದಲಾವಣೆ ಶಸ್ತ್ರಚಿಕಿತ್ಸೆಯ ಪರಿಚಯವನ್ನು ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡುತ್ತಿದೆ. ಈ ಮೂಲಕ ಪ್ರಾದೇಶಿಕ ರೋಗಿಗಳಿಗೆ ಅತ್ಯಾಧುನಿಕ ಅಸ್ಥಿ ಚಿಕಿತ್ಸೆಯನ್ನು ಸುಲಭವಾಗಿ ಕಲ್ಪಿಸುವುದು ನಮ್ಮ ಉದ್ದೇಶ ಎಂದು ತಿಳಿಸಿದ್ದಾರೆ.
ಈ ಹೊಸ ತಂತ್ರಜ್ಞಾನದಿಂದಾಗಿ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅಸ್ಥಿ ಚಿಕಿತ್ಸೆಯಲ್ಲಿ ತನ್ನ ಮುಂಚೂಣಿ ಸ್ಥಾನ ಮತ್ತಷ್ಟು ಬಲಪಡಿಸಿಕೊಳ್ಳುತ್ತಿದೆ. ಸಂಯುಕ್ತ ಬದಲಾವಣೆ ಹಾಗೂ ಎಲುಬು- ಸಂಧಿ ಸಂಬಂಧಿತ ಕಾಯಿಲೆಗಳಿಗೆ ಸಮಗ್ರ ಮತ್ತು ಅತ್ಯಾಧುನಿಕ ಚಿಕಿತ್ಸೆ ಒದಗಿಸುತ್ತಿದೆ. ಈ ಚಿಕಿತ್ಸೆ ಕುರಿತು ಹೆಚ್ಚಿನ ಮಾಹಿತಿ ಹಾಗೂ ಅಪಾಯಿಂಟ್‌ಮೆಂಟ್‌ಗಾಗಿ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಮೊ. 84315- 41487 ಇಲ್ಲಿಗೆ ಸಂಪರ್ಕಿಸಲು ತಿಳಿಸಿದ್ದಾರೆ.- - -
-21ಕೆಡಿವಿಜಿ35: ಡಾ. ಟಿ.ಜಿ.ರವಿಕುಮಾರ