ರಾಮನಗರ: ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ನಗರದ ಯಾರಬ್ ನಗರದ ಗೆಜ್ಜಲಗುಡ್ಡೆಯಲ್ಲಿ ಗುರುವಾರ ಬೆಳಗಿನ ಜಾವ 3 ಗಂಟೆಗೆ ಬಂಡೆಯೊಂದು ಉರುಳಿ ಮನೆಗಳಿಗೆ ಅಪ್ಪಳಿಸಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ.
ಜಿಲ್ಲಾಸ್ಪತ್ರೆಗೆ ದಾಖಲು:
ಧಾರಾಕಾರ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಗಾಯಾಳುಗಳನ್ನು ಬೆಳಗ್ಗೆ 6 ಗಂಟೆಗೆ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಇದರಲ್ಲಿ ಸೈಯದ್ ಕಬೀರ್‌ಗೆ ಕಿವಿ ಭಾಗಕ್ಕೆ ಗಾಯವಾಗಿದ್ದು ಒಳ ರೋಗಿಯಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಗೌಸ್ ಅವರ ಪತ್ನಿ ಹಾಗೂ ಉಳಿದ ಮಕ್ಕಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.ಬುಧವಾರ ರಾತ್ರಿ 8 ಗಂಟೆಗೆ ಆರಂಭವಾದ ಮಳೆ ತಡರಾತ್ರಿ ತನಕ ಮುಂದುವರೆದಿತು. ಇಡೀ ರಾತ್ರಿ ಸುರಿದ ಮಳೆಯಿಂದಾಗಿ ರಾಮನಗರದ ಯಾರಬ್ ನಗರದ ಗೆಜ್ಜಲಗುಡ್ಡೆ ಪ್ರದೇಶದಲ್ಲಿ ಬೆಳಿಗ್ಗೆ 3 ಗಂಟೆ ಸುಮಾರಿಗೆ ಗೌಸ್ ಮನೆಯ ಮೇಲ್ಭಾಗದಲ್ಲಿರುವ ಬಂಡೆ ಪಕ್ಕಕ್ಕೆ ಜಾರಿ ಗೋಡೆಗೆ ಅಪ್ಪಳಿಸಿದೆ. ಅದರ ರಸಭಕ್ಕೆ ಗೋಡೆ ಕುಸಿದು ಮನೆಯೊಳಗೆ ಮಲಗಿದ್ದವರ ಮೇಲೆ ಬಿದ್ದಿದೆ. ಗೌಸ್ ಅವರ ಮನೆ ಸೇರಿ ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗಿದೆ. ಇನ್ನು ಬಂಡೆ ಉರಳಿದ ರಭಸದಿಂದ ಗೌಸ್ ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳೂ ಹಾನಿಯಾಗಿದೆ
ಗಾಯಾಳುಗಳ ಆರೋಗ್ಯ ವಿಚಾರಿಸಿದ ಶಾಸಕ ಇಕ್ಬಾಲ್
ಈ ವೇಳೆ ಮಾತನಾಡಿದ ಇಕ್ಬಾಲ್ ಹುಸೇನ್, ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ಅದರಂತೆ ಸ್ಥಳಕ್ಕೆ ಪೊಲೀಸ್ ಮತ್ತು ನಗರಸಭೆ ಪೌರಾಯುಕ್ತರು ಹಾಗೂ ತಹಸೀಲ್ದಾರ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲು ಕ್ರಮ ವಹಿಸುತ್ತೇನೆ ಎಂದರು.
24ಕೆಆರ್ ಎಂಎನ್ 7.ಜೆಪಿಜಿಗೆಜ್ಜಲಗುಡ್ಡೆಯಲ್ಲಿ ಬಂಡೆ ಮನೆ ಮೇಲೆ ಉರುಳಿರುವುದು.