ಸಂಶೋಧನೆಯಲ್ಲಿ ಇ-ರಿಸೋರ್ಸ್‌ಗಳ ಪಾತ್ರ ಪ್ರಮುಖ: ಪ್ರೊ.ವಿದ್ಯಾಶಂಕರ

KannadaprabhaNewsNetwork | Published : Oct 31, 2024 12:46 AM

ಸಾರಾಂಶ

ಸಂಶೋಧನೆಯಲ್ಲಿ ಇ- ರಿಸೋರ್ಸ್‌ಗಳ ಪಾತ್ರ ಪ್ರಮುಖವಾಗಿದೆ. ಸುಸ್ಥಿರ ಸಂಶೋಧನಾ ಪರಿಹಾರಗಳಿಗೆ ಸಾಹಿತ್ಯ ಸಮೀಕ್ಷೆ ಪ್ರಮುಖವಾಗುತ್ತದೆ. ಜತೆಗೆ ಸಂಶೋಧನಾ ದಾರಿಯನ್ನು ಸುಗಮ ಮಾಡಿಕೊಡುತ್ತವೆ ಎಂದು ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ್.ಎಸ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸಂಶೋಧನೆಯಲ್ಲಿ ಇ- ರಿಸೋರ್ಸ್‌ಗಳ ಪಾತ್ರ ಪ್ರಮುಖವಾಗಿದೆ. ಸುಸ್ಥಿರ ಸಂಶೋಧನಾ ಪರಿಹಾರಗಳಿಗೆ ಸಾಹಿತ್ಯ ಸಮೀಕ್ಷೆ ಪ್ರಮುಖವಾಗುತ್ತದೆ. ಜತೆಗೆ ಸಂಶೋಧನಾ ದಾರಿಯನ್ನು ಸುಗಮ ಮಾಡಿಕೊಡುತ್ತವೆ ಎಂದು ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ್.ಎಸ್ ಹೇಳಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯ ಶ್ರೀ ಎಸ್.ಜಿ.ಬಾಳೆಕುಂದ್ರಿ ಕೇಂದ್ರ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರವು 2024-25ನೇ ಸಾಲಿಗಾಗಿ ವಿಟಿಯು ಅಧೀನ ಮಹಾವಿದ್ಯಾಲಯಗಳ ಬೋಧಕ, ಗ್ರಂಥಪಾಲಕರಿಗೆ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ವಿಟಿಯು ಇ-ರಿಸೋರ್ಸ್ ಕನ್ಸೋರ್ಟಿಯಂನಲ್ಲಿ ಲಭ್ಯವಿರುವ ಸಂಶೋಧನಾ ಹಾಗೂ ಇತರೆ ತಾಂತ್ರಿಕ ಲೇಖನ, ಪುಸ್ತಕ, ಕೋರ್ಸ್‌ಗಳು ಭಾಷಾ ಕಲಿಕೆಯ ಇ ಸಂಪನ್ಮೂಲಗಳ ಬಳಕೆಯ ಕುರಿತು ಸರಣಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಇ- ರಿಸೋರ್ಸ್‌ಗಳ ಪರಿಣಾಕಾರಿ ಬಳಕೆ ಬಗ್ಗೆ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೂ ತಿಳಿ ಹೇಳಬೇಕು ಎಂದು ತಿಳಿಸಿದರು.

ಇವತ್ತು ಸಂಶೋಧನೆ ಸಮಾಜಕ್ಕೆ ಉಪಯೋಗವಾಗುವ ನಿಟ್ಟಿನಲ್ಲಿ ನಡೆಯಬೇಕೆಂದರೇ ಆಯಾ ಕ್ಷೇತ್ರಗಳ್ಲಲಿ ಹಿಂದೆ ನಡೆದ ಸಂಶೋಧನಾ ಸಾಹಿತ್ಯ ಸಮೀಕ್ಷೆ (ಲಿಟರೇಚರ್ ಸರ್ವೇ) ಪ್ರಮುಖ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಇವತ್ತಿನ ಸಂಶೋಧನೆ ಮತ್ತು ಇನೋವೇಷನ್‌ಗಳಿಗೆ ಪರಿಣಾಮಕಾರಿಯಾಗಿ ವಿಷಯ ಸಂಬಂಧಿತ ಸಾಹಿತ್ಯ ಸಮೀಕ್ಷೆ (ಲಿಟರೇಚರ್ ಸರ್ವೇ) ಮಾಡಲು ಇ- ರಿಸೋರ್ಸ್‌ಗಳು ಸಹಾಯ ಮಾಡುತ್ತವೆ ಎಂದರು.

ತಮ್ಮ ಸಾಂಸ್ಥಿಕ ಮಟ್ಟದಲ್ಲಿ ಇ-ರಿಸೋರ್ಸ್‌ಗಳನ್ನು ಪರಿಣಾಮಕಾರಿಯಾಗಿ ಬಳಸಬೇಕು. ಎಲ್ಲ ಗ್ರಂಥಪಾಲಕರು ವಿಟಿಯು ಕನ್ಸೋರ್ಟಿಯಂ ಇ-ರಿಸೋರ್ಸ್ ಬಳಕೆಯಾದ ಕುರಿತು ಕೈಪಿಡಿ ತಯಾರಿಸಿ ಸಕಾಲದಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಸಹಾಯ ಮಾಡಬೇಕು ಎಂದು ಸಲಹೆ ನೀಡಿದರು.

ಒಟ್ಟು 7 ಕಡೆಗಳಲ್ಲಿ ನಡೆದ ಈ ಕಾರ್ಯಾಗಾರ ಸರಣಿಯಲ್ಲಿ ವಿಟಿಯು ಅಧೀನ ಮಹಾವಿದ್ಯಾಲಯಗಳಿಂದ 700ಕ್ಕೂ ಹೆಚ್ಚು ಬೋಧಕ ಸಿಬ್ಬಂದಿ, ಗ್ರಂಥಪಾಲಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿಟಿಯು ಮೌಲ್ಯಮಾಪನ ಕುಲಸಚಿವ ಪ್ರೊ.ಟಿ.ಎನ್.ಶ್ರೀನಿವಾಸ ಮತ್ತು ವಿಟಿಯು ಮುಖ್ಯ ಗ್ರಂಥಪಾಲಕ ಹಾಗೂ ಸಂಯೋಜಕ ಡಾ.ಸೋಮರಾಯ ತಳ್ಳೊಳ್ಳಿ ಉಪಸ್ಥಿತರಿದ್ದರು.ಉತ್ಕೃಷ್ಠ ಮಟ್ಟದ ಸಂಶೋಧನೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ವಿಟಿಯು ಇ-ರಿಸೋರ್ಸ್‌ಗಳ ಬಗ್ಗೆ ಹೆಚ್ಚು ಮಹತ್ವ ಕೊಟ್ಟು ಇವುಗಳ ಸದ್ಬಳಕೆ ಕುರಿತು ಈ ಕಾರ್ಯಗಾರಗಳನ್ನು ಹಮ್ಮಿಕೊಂಡಿದೆ. ಜತೆಗೆ ಸಂಶೋಧನಾ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿಟಿಯು ರಿಸರ್ಚ್ ಪಾಲಿಸಿ ಮೂಲಕ ಧನ ಸಹಾಯ ಸೇರಿದಂತೆ ಹಲವಾರು ಕಾರ್ಯಕ್ರಮಗಳಿಗೆ ಚಾಲನೆ ನೀಡಿದೆ.

-ಪ್ರೊ.ವಿದ್ಯಾಶಂಕರ್.ಎಸ್, ವಿಟಿಯು ಕುಲಪತಿ.

ರಾಜ್ಯದುದ್ದಕ್ಕೂ ಆಯೋಜಿಸಿದ್ದ ಕಾರ್ಯಾಗಾರ ಯಶಸ್ವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯ ಶ್ರೀ ಎಸ್.ಜಿ. ಬಾಳೆಕುಂದ್ರಿ ಕೇಂದ್ರ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರವು 2024-25ನೇ ಸಾಲಿಗಾಗಿ ವಿಟಿಯು ಅಧೀನ ಮಹಾವಿದ್ಯಾಲಯಗಳ ಬೋಧಕ, ಗ್ರಂಥಪಾಲಕರಿಗೆ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ವಿಟಿಯು ಇ-ರಿಸೋರ್ಸ್ ಕನ್ಸೋರ್ಟಿಯಂನಲ್ಲಿ ಲಭ್ಯವಿರುವ ಸಂಶೋಧನಾ ಹಾಗೂ ಇತರೆ ತಾಂತ್ರಿಕ ಲೇಖನ, ಪುಸ್ತಕ, ಕೋರ್ಸ್‌ಗಳು ಭಾಷಾ ಕಲಿಕೆಯ ಇ ಸಂಪನ್ಮೂಲಗಳ ಬಳಕೆಯ ಕುರಿತು ತರಬೇತಿ ಕಾರ್ಯಕ್ರಮಗಳನ್ನು ಅ.15 ರಿಂದ ಅ.30 ರವರೆಗೆ ಕಾರ್ಯಾಗಾರ ಸರಣಿಯನ್ನು ರಾಜ್ಯದುದ್ದಕ್ಕೂ ವಿಟಿಯು ಕೇಂದ್ರಗಳು ಹಾಗೂ ಸಂಯೋಜಿತ ಇಂಜಿನಿಯರಿಂಗ್ ಮಹಾವಿದ್ಯಾಲಯಗಳಲ್ಲಿ ಆಯೋಜಿಸಿತ್ತು.

ಇದರಡಿಯಲ್ಲಿ ಒಟ್ಟು 7 ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗಿತ್ತು. ಕೊನೆಯ ಕಾರ್ಯಾಗಾರವನ್ನು ಬೆಳಗಾವಿ ವಿಭಾಗದ ಇಂಜಿನಿಯರಿಂಗ್ ಮಹಾವಿದ್ಯಾಲಯಗಳಿಗೆ ಬುಧವಾರ ವಿಟಿಯುನಲ್ಲಿ ಹಮ್ಮಿಕೊಳ್ಳಗಿತ್ತು.

Share this article