-ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಎ ಮತ್ತು ಬಿ ಘಟಕಗಳ ವತಿಯಿಂದ ವಿಶೇಷ ಶಿಬಿರ
-----ಕನ್ನಡಪ್ರಭ ವಾರ್ತೆ ಶಹಾಪುರ
ಗ್ರಾಮೀಣ ಭಾಗದ ಹಲವು ಕೈಗಾರಿಕೆಗಳಲ್ಲಿ ಮತ್ತು ಹೈನುಗಾರಿಕೆ ಹಾಗೂ ಕೃಷಿ ಆಧಾರಿತ ಕಸುಬುಗಳಲ್ಲಿ ಮಹಿಳೆ ಪ್ರಧಾನ ವ್ಯಕ್ತಿ. ಮಹಿಳೆ ಅಬಲೆಯಲ್ಲ ಸಬಲೆಯಾಗಿದ್ದಾಳೆ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಗ್ರಾಮದ ಆರ್ಥಿಕ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಸುನೀಲ್ ಕುಮಾರ ಹೇಳಿದರು.ಶಹಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಎ ಮತ್ತು ಬಿ ಘಟಕಗಳ ವತಿಯಿಂದ ನಡೆದ ವಿಶೇಷ ಶಿಬಿರದಲ್ಲಿ ಗ್ರಾಮೀಣಾಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
ಗ್ರಾಮೀಣ ಭಾರತದ ಮಹಿಳೆಯರು ಗ್ರಾಮೀಣ ಆರ್ಥಿಕತೆಯ ಪ್ರಗತಿಗೆ ಪ್ರಮುಖರು. ಅವರು ರೈತರು, ವೇತನದಾರರು ಮತ್ತು ಉದ್ಯಮಿಗಳಾಗಿ ಬಹು ಪಾತ್ರಗಳನ್ನು ನಿರ್ವಹಿಸುತ್ತಾರೆ. ಮಹಿಳೆಯರು ತಮ್ಮ ಕುಟುಂಬದ ಸದಸ್ಯರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾರೆ. ಮಕ್ಕಳು ಮತ್ತು ವೃದ್ಧರಿಗೆ ಆಹಾರ ಮತ್ತು ಆರೈಕೆಯನ್ನು ಒದಗಿಸುವ ಜವಾಬ್ಧಾರಿಯನ್ನು ಹೊಂದಿದ್ದಾರೆ ಎಂದರು.ದೇವದುರ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಶಿವರಾಜ ಎಚ್.ಡಿ. ಮಾತನಾಡಿ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಗ್ರಾಮೀಣ ಅಭಿವೃದ್ಧಿಯಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಬೇಕಾಗಿದೆ. ಒಂದು ದೇಶದ ನಿರಂತರ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮುಖ್ಯವಾದದು ಎಂದರು.
ಕಾಲೇಜಿನ ಕನ್ನಡ ಉಪನ್ಯಾಸಕ ದೇವಿಂದ್ರಪ್ಪ ಆಲ್ದಾಳ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಪ್ರೊ. ಶಿವಲಿಂಗಣ್ಣ ಸಾಹು, ಉಪನ್ಯಾಸಕರಾದ ಗಂಗಣ್ಣ ಹೊಸ್ಮನಿ, ಸತೀಶ ತುಳೇರ, ಸಂಗಣ್ಣ ದಿಗ್ಗಿ, ಮಾನಯ್ಯ ಗೌಡಗೇರಾ ಎನ್.ಎಸ್.ಎಸ್.ಎ ಘಟಕದ ಅಧಿಕಾರಿ ರಾಘವೇಂದ್ರ ಹಾರಣಗೇರ, ಎನ್.ಎಸ್.ಎಸ್.ಬಿ ಘಟಕದ ಅಧಿಕಾರಿ ಭೀಮಪ್ಪ ಭಂಡಾರಿ ಇತರರಿದ್ದರು.ಕಲ್ಪನಾ ಚಾವ್ಲಾ ತಂಡದ ನಾಯಕಿ ಭಾಗ್ಯಜ್ಯೋತಿ ಕಾರ್ಯಕ್ರಮ ನಿರ್ವಹಿಸಿದರು. ಶಿಬಿರಾರ್ಥಿ ಅಂಜುಮ್ ಬೇಗಂ ಪ್ರಾರ್ಥಿಸಿದರು. ಸ್ವಾತಿ ಮತ್ತು ಜ್ಯೊತಿ ಸ್ವಾಗತಿಸಿದರು. ಭಾಗ್ಯಶ್ರೀ ಮತ್ತು ಶಿಲ್ಪ ನಿರೂಪಿಸಿದರು. ಅನಿತಾ ವಂದಿಸಿದರು.
ಸಭಾ ಕಾರ್ಯಕ್ರಮ ನಂತರ ಶಿಬಿರಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿದ್ಯಾರ್ಥಿನಿ ಭಾಗ್ಯಶ್ರೀ ಝಾನ್ಸಿ ರಾಣಿ ಲಕ್ಷ್ಮಿಬಾಯಿ ಛದ್ಮ ವೇಷದಲ್ಲಿ ಎಲ್ಲರ ಗಮನ ಸೆಳೆದರು.------
ಫೋಟೊ: 2ವೈಡಿಆರ್1: ಶಹಾಪುರ ತಾಲೂಕಿನ ಶಖಾಪೂರ ಗ್ರಾಮದಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಎ ಮತ್ತು ಬಿ ಘಟಕಗಳ ವತಿಯಿಂದ ವಿಶೇಷ ಶಿಬಿರದಲ್ಲಿ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಸುನೀಲ್ ಕುಮಾರ ಮಾತನಾಡಿದರು.